ಬಿಗ್ ಬಾಸ್‌ ಮನೆಯಲ್ಲಿ ಹುಡುಗರಿಗೆ ಸವಾಲ್ ಹಾಕಿ, ಪ್ರತಿ ಟಾಸ್ಕ್‌ನಲ್ಲಿಯೂ ಜಯ ಶಾಲಿಯಾಗುತ್ತಿದ್ದ ಸ್ಪರ್ಧಿ ದಿವ್ಯಾ ಉರುಡುಗ ಅನಾರೋಗ್ಯದ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್ ಬಾಸ್‌ ಕಳುಹಿಸಿದ ಪತ್ರ ಓದಿ ಸದಸ್ಯರು ಭಾವುಕರಾಗಿದ್ದಾರೆ. ಹಾಗಾದ್ರೆ ದಿವ್ಯಾ ಬಿಬಿ ಮನೆಯಿಂದ ಔಟಾ?

ನಾವಲ್ಲ ಗುರು, ವೀಕ್ಷಕರು ಹೇಳ್ತಿದ್ದಾರೆ ಇವರದ್ದು ಸೂಪರ್ ಜೋಡಿ ಅಂತ; ಫೋಟೋ ನೋಡಿ 

ಕೆಲವು ದಿನಗಳಿಂದ ದಿವ್ಯಾ ಉರುಡುಗ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತಿತ್ತು. ಬಿಗ್ ಬಾಸ್‌ ವೈದ್ಯರನ್ನು ಕರೆಯಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು ಆದರೆ ದಿನೆ ದಿನೇ ಆರೋಗ್ಯ ಹದಗೆಡುತ್ತಿದ್ದ ಕಾರಣ ದಿವ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿವ್ಯಾ ಬಟ್ಟೆಗಳನ್ನು ಪ್ಯಾಕ್ ಮಾಡಿ ಸ್ಟೋರ್ ರೂಮ್‌ನಲ್ಲಿ ಇಡಬೇಕೆಂದು ಪತ್ರದ ಮೂಲಕ ಆದೇಶ ಬಂದಿತ್ತು. ದಿವ್ಯಾ ಮತ್ತೆ ಮನೆಗೆ ಬರುವುದಿಲ್ಲ ಎಂದು ಸದಸ್ಯರು ಭಾವುಕರಾದರು. ಅದರಲ್ಲೂ ದಿವ್ಯಾ ಜೊತೆ ಹೆಚ್ಚಿನ ಸಮಯ ಕಳೆದಿದ್ದ ಅರವಿಂದ್ ಗಳಗಳ ಅತ್ತಿದ್ದಾರೆ. 

'ದಿವ್ಯಾ ಉರುಡುಗ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕು, ಎಂದು ವೈದ್ಯರು ಸೂಚಿಸಿರುವುದರಿಂದ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ. ಅವರು ಕ್ಷೇಮವಾಗಿದ್ದಾರೆ,' ಎಂದು ಬಿಗ್ ಬಾಸ್‌ ತಿಳಿಸಿದ್ದಾರೆ. ಸ್ಕ್ಯಾನಿಂಗ್ ನಂತರ ದಿವ್ಯಾ ಗೆ ಯೂರಿನರಿ ಟ್ರ್ಯಾಕ್ ಇನ್ಫೆಕ್ಷನ್ ಕಂಡು ಬಂದಿದ್ದರಿಂದ ದಿವ್ಯಾ ಉರುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಂತನೂ ಬಿಗ್ ಬಾಸ್ ತಿಳಿಸಿದರು.

ದಿವ್ಯಾ , ಅರವಿಂದ್‌ ಬೆನ್ನ ಹಿಂದೆ ಮಾತನಾಡಿಕೊಂಡ ಸದಸ್ಯರು; ಶುಭಾ ಪೂಂಜಾ ನಂತರ ಊಟ ಫಿಕ್ಸ್‌? 

ಚಿಕಿತ್ಸೆ ಪಡೆದು ದಿವ್ಯಾ ಬಿಗ್ ಬಾಸ್‌ಗೆ ಮತ್ತೆ ಬರುವುದಿಲ್ಲವೇ? ದಿವ್ಯಾ ಬದಲು ಬೇರೆ ಸ್ಪರ್ಧಿ ಪ್ರವೇಶಿಸುತ್ತಾರಾ? ಇಲ್ಲವಾದರೆ ದಿವ್ಯಾ ಸೀಕ್ರೆಟ್ ರೂಮ್‌ನಿಂದಲೇ ಆಟ ವೀಕ್ಷಿಸುತ್ತಾರೆಯೇ? ಎಂದು ನೆಟ್ಟಿಗರು ಪ್ರಶ್ನೆ ಕೇಳಿದ್ದಾರೆ. ಇಂದಿನ ಸಂಚಿಕೆ ಪ್ರಸಾರ ಆದ ನಂತರ ಕ್ಲಾರಿಟಿ ಸಿಗುತ್ತದೆ.