ಮನೆಯಲ್ಲಿ ಆಗುತ್ತಿರುವ ದೆವ್ವದ ಚಟುವಟಿಕೆಗಳಿಗೆ ರಾಘವೇಂದ್ರ ಆಚಾರ್ಯರೇ ಪರಿಹಾರ ನೀಡಬೇಕಂತೆ! ಪ್ರಶಾಂತ್ ಸಂಬರಗಿ ಫಜೀತಿ ಒಂದೆರಡಲ್ಲಾ....
ಬಿಗ್ ಬಾಸ್ ಸೀಸನ್ 8ರ ಎರಡನೇ ಇನಿಂಗ್ಸ್ ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಪ್ರಶಾಂತ್ ಸಂಬರಗಿ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಿ ಮನೆಯ ಬಾಗಿಲಿನ ತನಕ ಕಳುಹಿಸಿ, ಆ ನಂತರ ನೀವು ಮನೆಯಿಂದ ಹೊರ ಹೋಗುವುದಿಲ್ಲ ಎಂದು ತಿಳಿಸಿದ್ದರು. ಈ ವೇಳೆ ಸುದೀಪ್ ಮನೆಯೊಳಗಿರುವ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡುತ್ತಾರೆ. ಪ್ರಶಾಂತ್ ಮತ್ತೆ ಪ್ರವೇಶಿಸಿದ್ದರೂ, ನೋಡಿದರೂ ನೋಡದಂತೆ ವರ್ತಿಸಬೇಕೆಂದು.
ಅಬ್ಬಾ! ಪಟಪಟ ಅಂತ ಮಾತನಾಡುವ ವ್ಯಕ್ತಿಗೆ ಮೌನ ಎಷ್ಟು ಹಿಂಸೆ ನೀಡುತ್ತದೆ ಎಂದು ಪ್ರಶಾಂತ್ ನೋಡಿ ತಿಳಿಯಿತು. ಎಲ್ಲರೊಂದಿಗೆ ಮಾತನಾಡಿಕೊಂಡು ಕಿತ್ತಾಡುತ್ತಿದ್ದ ಪ್ರಶಾಂತ್ ಅವರನ್ನು ಯಾರೂ ಮಾತನಾಡಿಸದಿದ್ದರೆ ಹೇಗಿರುತ್ತೆ? ಮಂಜು ಮತ್ತು ದಿವ್ಯಾ ಸುರೇಶ್ ಅವರನ್ನು ಹೊರತು ಪಡಿಸಿ, ಎಲ್ಲರೊಂದಿಗೆ ಮಾತನಾಡುವ ಪ್ರಯತ್ನ ಮಾಡುತ್ತಾರೆ. ಮಲಗಿದ್ದವರನ್ನು ಎಬ್ಬಿಸಿ ಪ್ರಶ್ನೆ ಮಾಡುತ್ತಾರೆ. ರಘುಗೆ ಕಚಗುಳಿ ನೀಡುತ್ತಾರೆ, ಚಕ್ರವರ್ತಿಗೆ ಶೇವ್ ಮಾಡುತ್ತಾರೆ, ದಿವ್ಯಾ ಉರುಡುಗ ಅವರಿಗೆ ಮೇಕಪ್ ಮಾಡಿಕೊಳ್ಳಲು ನೆರವು ನೀಡುತ್ತಾರೆ. ವೈಷ್ಣವಿ ಮನೆಯೊಳಗೆ ರಾತ್ರಿ ಧ್ಯಾನ ಮಾಡಲು ಆಗದ ಕಾರಣ ಚಕ್ರವರ್ತಿ, ರಘು, ಶಮಂತ್ ಮತ್ತು ವೈಷ್ಣವಿ ಗಾರ್ಡನ್‌ನಲ್ಲಿ ಕುಳಿತುಕೊಂಡು ಧ್ಯಾನ ಮಾಡುತ್ತಾರೆ.
ಸೆಕೆಂಡ್ ಇನಿಂಗ್ಸ್, ಬೆಂಕಿ ನಾಮಿನೇಶನ್‌ಗೆ ಕಾರಣವಾದ ಹೊರಗಿನ ಸಂದರ್ಶನಗಳು!
'ಶಮಂತ್ ಹೇಳಿದ ಹಾಗೆ ಬಿಗ್ ಬಾಸ್ ಮನೆಯಲ್ಲಿ ದೆವ್ವದ ಕಾಟವಿದೆ. ನಮಗೆ ಮಲಗುವುದಕ್ಕೆ ಬಿಡುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ನೀಡುವುದಕ್ಕೆ ರಾಘವೇಂದ್ರ ಆಚಾರ್ಯರು ಬರಬೇಕು. ದಯವಿಟ್ಟು ಅವರಿಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಡಿ. ದೇವ್ರೇ...ನಾನು ಅನುಭವಿಸುತ್ತಿರುವುದನ್ನು ನೋಡಿ ಅವರೇ ಬಂದರೂ ಬರಬಹುದು,' ಎಂದು ಚಕ್ರವರ್ತಿ ಹೇಳುತ್ತಾರೆ.
ಒಂದು ದಿನ ಕಳೆದ ನಂತರ ಟಾಸ್ಕ್ ಮುಕ್ತಾಯವಾಗಿದೆ ಎಂದು ಬಿಗ್ ಬಾಸ್ ತಿಳಿಸುತ್ತಾರೆ. ಸಂತೋಷದಿಂದ ಎಲ್ಲರೂ ಪ್ರಶಾಂತ್‌ರನ್ನು ತಬ್ಬಿಕೊಂಡು ಮಾತನಾಡಿಸುತ್ತಾರೆ. ದಿವ್ಯಾ ಮತ್ತು ಮಂಜು ಪಾವಗಡ ಮಾತ್ರ ದೂರವೇ ಉಳಿದಿದ್ದರು.
