Chandan gowda: ನೇಹಾ ಬಿಗ್‌ಬಾಸ್‌ನಲ್ಲಿದ್ದಾಗಲೇ, ಸೀರಿಯಲ್ ಹೀರೋ ಆಗ್ತೀಯಾ ಅಂತ ಕೇಳಿದ್ರು: ಚಂದನ್
ಇಲ್ಲೀವರೆಗೆ ಗೊಂಬೆ ಅಂತಲೇ ಫೇಮಸ್ ಆಗಿರೋ ನೇಹಾ ಗೌಡ ಗಂಡನಾಗಿ ಚಂದನ್ ಪರಿಚಯ ಆಗಿದ್ರು. ಇದೀಗ 'ಅಂತರಪಟ' ಸೀರಿಯಲ್ ಹೀರೋ ಆಗಿ ಇಂಟರ್‌ಡ್ಯೂಸ್ ಆಗ್ತಿದ್ದಾರೆ. ಆದರೆ ಅವರಿಗೆ ಈ ಆಫರ್ ಬಂದ ಸನ್ನಿವೇಶ ವಿಚಿತ್ರವಾಗಿತ್ತಂತೆ.
ಚಂದನ್ ಅವರು ಕಿರುತೆರೆಗೆ ಹೊಸತಾಗಿ ಇಂಟರ್‌ಡ್ಯೂಸ್ ಆಗ್ತಿರೋ ಹೀರೋ. ಇಲ್ಲೀವರೆಗೆ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನ ಗೊಂಬೆ ಪಾತ್ರದ ಮೂಲಕ ಮನೆ ಮಾತಾಗಿದ್ದ ನೇಹಾ ಗೌಡ ಗಂಡನಾಗಿ ಅವರು ಕನ್ನಡಿಗರಿಗೆ ಪರಿಚಿತರಾಗಿದ್ದರು. ಇಬ್ಬರೂ ಜೊತೆಯಾಗಿ ರಾಜರಾಣಿ ಸೇರಿದಂತೆ ಒಂದಿಷ್ಟು ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಚಂದನ್ ಅವರು ಮೂಲತಃ ಬ್ಯುಸಿನೆಸ್ ಮ್ಯಾನ್. ನೇಹಾ ಗೌಡ ಜೊತೆಗೆ ಮದುವೆಯಾದ ಮೇಲೆ ಅವರು ಕಿರುತೆರೆಗೂ ಪರಿಚಿತರಾದರು. ಫೆಬ್ರವರಿ 18, 2018ರಂದು ನೇಹಾ ಗೌಡ ಮತ್ತು ಚಂದನ್ ಮದುವೆಯಾದರು. ಹಾಗೆ ನೋಡಿದರೆ ಚಂದನ್ ಹಾಗೂ ನೇಹಾ ಬಾಲ್ಯದ ಸ್ನೇಹಿತರು. ಇಬ್ಬರು ಪ್ರೀತಿಸಿ, ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದಾರೆ. ಇನ್ನೂ ನರ್ಸರಿಯಲ್ಲಿ ಇದ್ದಾಗ ಚಂದನ್ ನನ್ನ ಶತ್ರು ಆಗಿದ್ದ ಎಂದು ನೇಹಾ ಅವರೇ ಹೇಳಿಕೊಂಡಿದ್ದರು, ಆಮೇಲೆ ಗೆಳೆಯನಾಗಿ ಕ್ರಶ್ ಆಗಿ, ಲವ್ವರ್ ಆಗಿ ಈಗ ಗಂಡನಾಗಿದ್ದಾನೆ ಎಂದು ಹೇಳಿದ್ದಾರೆ. ಇನ್ನು ಚಂದನ್ ಸದ್ಯ 'ಡ್ಯಾನ್ಸಿಂಗ್ ಚಾಂಪಿಯನ್' ಶೋನಲ್ಲಿ ಸ್ಫರ್ಧಿಯಾಗಿದ್ದು, ಮೇಕಪ್ ಹಾಗೂ ಡ್ರೆಸ್ಸಿಂಗ್ ವಿಚಾರದಲ್ಲಿ ತುಂಬಾನೇ ಪರ್ಫೆಕ್ಟ್ ಅಂತೆ.
ಅಂತರಪಟ ಸೀರಿಯಲ್‌ನ ಪ್ರೋಮೋಗಳು ಈಗಾಗಲೇ ಜನಪ್ರಿಯವಾಗಿವೆ. ಇದರಲ್ಲಿ ಮಲ ತಂದೆಯ ನೆರಳಲ್ಲಿ ಬೆಳೆಯುವ ಹುಡುಗಿ ಹೆತ್ತ ತಂದೆಯ ಕನಸು ಹಾಗೂ ಮಲ ತಂದೆಯ ಸಾಲವನ್ನು ಹೊತ್ತು ಜೀವನದಲ್ಲಿ ಸಾಧನೆಯನ್ನು ಮಾಡಲು ಮುಂದಾಗುತ್ತಾಳೆ. ನಾಯಕಿ ಆರಾಧನಾಳ ಕಥೆ ಇರುವ ಸೀರಿಯಲ್ ಧಾರಾವಾಹಿಯಲ್ಲಿ ನೋಡಬಹುದಾಗಿದೆ. ಈ ಸೀರಿಯಲ್ ನಾಯಕ ಚಂದನ್ ತನಗೆ ಸೀರಿಯಲ್ ಹೀರೋ ಆಗಲು ಕರೆ ಬಂದಾಗಿನ ಇಂಟರೆಸ್ಟಿಂಗ್ ಸನ್ನಿವೇಶವನ್ನು ವಿವರಿಸಿದ್ದಾರೆ. 'ಪತ್ನಿ ನೇಹಾ ಆಗ ಬಿಗ್‌ಬಾಸ್ ಮನೆಯೊಳಗೆ ಹೊರಟಿದ್ದಳು. ಅವಳನ್ನು ಆ ಮನೆಯೊಳಗೆ ಬಿಟ್ಟು ಹೊರಬಂದರೆ ಮೆಸೇಜ್. ಸೀರಿಯಲ್ ನಾಯಕನ ಪಾತ್ರ ಮಾಡಲು ಬಂದ ಆಫರ್ ಅದು. ಅದೇನೋ ಬೇರೆ ಯೋಚನೆ ಮಾಡದೇ ಯೆಸ್ ಅಂತ ಅಂದುಬಿಟ್ಟರಂತೆ ಚಂದನ್. ಆಮೇಲೆ ಆತಂಕ, ಖುಷಿ ಎರಡೂ ಆಯಿತು. ಹಂಚಿಕೊಳ್ಳೋಣ ಅಂದರೆ ನೇಹಾ ಬಿಗ್‌ಬಾಸ್ ಮನೆಯಲ್ಲಿದ್ದಾರೆ. ಒಂದು ಫೋನ್ ಕಾಲ್ ಮಾಡೋ ಅವಕಾಶವೂ ಇಲ್ಲ.
ಗಂಡನಿಗಾಗಿ ಮೂಗು ಚುಚ್ಚಿಸಿದ ನಟಿ, ಇದೀಗ ಪತಿ ಹೆಸರಿನ ಟ್ಯಾಟೂ ಹಾಕಿಸ್ಕೊಂಡ್ರು
ನೇಹಾ ಬಿಗ್‌ಬಾಸ್ ಮನೆಯಿಂದ ಆಚೆ ಬಂದ ತಕ್ಷಣ ಚಂದನ್ ನೇಹಾಗೆ ಈ ವಿಚಾರ ತಿಳಿಸಿದರು. 'ನೇಹಾಗೆ ಈ ವಿಚಾರ ತಿಳಿದು ಬಹಳ ಖುಷಿ ಆಯ್ತು. ಮನೆಯವರೆಲ್ಲ ಖುಷಿ ಪಟ್ಟರು. ಆದರೆ ನನಗೆ ಟೆನ್ಶನ್ ಇತ್ತು. ಬಹಳ ಕಾಲದಿಂದ ಮುನ್ನಡೆಸುತ್ತ ಬಂದಿದ್ದ ಬ್ಯುಸಿನೆಸ್ ಇನ್ನಿತರ ಕೆಲಸಗಳನ್ನು ಬಿಟ್ಟು ಈ ಹೊಸ ರೋಲ್ ಪ್ಲೇ ಮಾಡಬೇಕು. ಸಮಯ ಹೊಂದಾಣಿಕೆ ಹೇಗೆ ಅನ್ನೋದೆಲ್ಲ ಟೆನ್ಶನ್(Tension) ತರುತ್ತಿತ್ತು. ಹಾಗಂತ ಒಂದೊಳ್ಳೆ ಅವಕಾಶವನ್ನೂ ಕೈಚೆಲ್ಲಲಾಗದ ಸ್ಥಿತಿ..' ಅಂತ ಆ ಹೊತ್ತಿನ ತನ್ನ ಸ್ಥಿತಿಯ ಬಗ್ಗೆ ಚಂದನ್ ಹೇಳ್ತಾರೆ. ಸದ್ಯಕ್ಕೀಗ ಅವರು ಸೀರಿಯಲ್ ಶೂಟಿಂಗ್‌ನಲ್ಲಿ(Shooting) ಬ್ಯುಸಿ ಇದ್ದಾರೆ. ಈ ಸೀರಿಯಲ್‌ನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗದ ಶ್ರೀಮಂತ ಯುವಕನ ಪಾತ್ರದಲ್ಲಿ ಚಂದನ್ ನಟಿಸಲಿದ್ದಾರೆ. ಸುಶಾಂತ್ ಅನ್ನೋದು ಆ ಪಾತ್ರದ ಹೆಸರು. ಈ ಸೀರಿಯಲ್ ಶೀಘ್ರದಲ್ಲಿ ಕಲರ್ಸ್ ಕನ್ನಡದಲ್ಲಿ ತನ್ನ ಪ್ರಸಾರ ಆರಂಭಿಸಲಿದೆ.
ಆರಾಧನಾ ಬದುಕಲ್ಲಿ ತಂದೆಯಷ್ಟೇ ಅಲ್ಲದೇ, ಪ್ರೀತಿಯ ಹುಡುಗನೂ ಕಾಣಿಸಿಕೊಳ್ಳಲಿದ್ದಾನೆ. ಹಾಗಾದರೆ ಈ ಧಾರಾವಾಹಿಯ(Serial) ನಾಯಕ ನಟ ಯಾರು ಎಂದು ಕೇಳುತ್ತಿದ್ದಾರೆ. 'ಅಂತರ ಪಟ' ಧಾರಾವಾಹಿಯಲ್ಲಿ ನಾಯಕಿಯೂ ಹೊಸಬರಾಗಿದ್ದು, ನಾಯಕ ಪಾತ್ರವನ್ನು ಕೂಡ ಹೊಸಬರೇ ನಿರ್ವಹಿಸಲಿದ್ದಾರೆ. ನೇಹಾ ಪತಿ ಚಂದನ್ ಗೌಡ ಅವರು ಅಂತರಪಟ ಧಾರಾವಾಹಿಯ ನಾಯಕ(Hero) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಅಂತರಪಟ' ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಮಂಡ್ಯ ಮೂಲದ ಹೊಸ ಕಲಾವಿದೆ(Artist) ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಆರಾಧನಾ ಪಾತ್ರಧಾರಿಯ ಹೆಸರು ತನ್ವಿಯ ಬಾಲರಾಜ್.
ಕಿರುತೆರೆಗೆ ರೀ ಎಂಟ್ರಿ ಕೊಟ್ಟ ದೀಪಿಕಾ ದಾಸ್... ಯಾವ ಸೀರಿಯಲ್ ಗೊತ್ತಾ?