ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌ 7ರ ಬ್ಯುಟಿ ವಿತ್‌ ಬ್ರೇನ್‌ ಬೆಡಗಿ ಅಂದ್ರೆ ದೀಪಿಕಾ ದಾಸ್‌. ರಿಯಾಲಿಟಿ ಶೋಯಿಂದ ಹೊರ ಬಂದ ನಂತರ ಸಂದರ್ಶನ, ಖಾಸಗಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ದೀಪಿಕಾ ಈಗ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.

ಈಗಾಗಲೇ ಹೊರ ಪ್ರಪಂಚದ ಪರಿಚಯವೇ ಇಲ್ಲದ ಹಾಗೆ ಬಿಗ್ ಬಾಸ್‌ ಮನೆಯಲ್ಲಿ ಹಲವು ದಿನಗಳ ಕಾಲ ಇದ್ದು ಬಂದವರಿಗೆ ಈ ಕ್ವಾರಂಟೈನ್‌ನಿಂದ ಆಗುವ ಇಂಪ್ಯಾಕ್ಟ್‌ ಸ್ವಲ್ಪ ಕಡಿಮೆ ಎನಿಸುತ್ತದೆ.  ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್‌ ಆಗಿರುವ ದೀಪಿಕಾ ದಾಸ್‌ 21 ದಿನಗಳ ಕಾಲ ಹೇಗೆ ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ಕಳೆಯಬೇಕೆಂದು ತಮ್ಮ ಫ್ಯಾನ್ಸ್‌ಗೂ ತಿಳಿಸಿಕೊಡುತ್ತಿದ್ದಾರೆ. 

ಬಿಗ್‌ಬಾಸ್‌ನಿಂದ ಹೊರಬಿದ್ದ ಮೇಲೆ ಶುರುವಾಯ್ತು ಮೋಜು-ಮಸ್ತಿ; ಇದಕ್ಕೆ ದೀಪಿಕಾ ದಾಸ್‌ ಕಾರಣ!

'21 days love yourself' ಎಂದು ಹೇಳುವ ಮೂಲಕ ಟೈಂ ಟೇಬಲ್‌ ಹಾಕಿಕೊಂಡಿದ್ದಾರೆ. ಅದರ ಪ್ರಕಾರ ದೀಪಿಕಾ ಕೇವಲ 2 ಗಂಟೆಗಳು ಮಾತ್ರ ಬಿಡುವಿರುತ್ತಾರೆ. ಈ ಟೈಂ ಟೇಬಲ್‌ ಫ್ಯಾನ್ಸ್‌ಗೂ ಫಾಲೋ ಮಾಡಲು ತಿಳಿಸಿದ್ದಾರೆ.  ಈಗಾಗಲೇ ತಾವು ಮಾಡಿರುವ ಪೇಂಟಿಂಗ್‌ ಶೇರ್ ಮಾಡಿಕೊಂಡಿದ್ದಾರೆ. ಅಪ್ಪಟ್ಟ ದೀಪಿಕಾ ದಾಸ್‌ ಅಭಿಮಾನಿಗಳು ಈ ಟೈಮ್ ಟೇಬಲನ್ನು ಚಾಚೂ ಚಪ್ಪದೇ ಫಾಲೋ ಮಾಡುತ್ತಿದ್ದಾರೆ.

 
 
 
 
 
 
 
 
 
 
 
 
 

How is it ?? comment below..🎨 #stayhome #staysafe #deepikadas

A post shared by Deepika Das (@deepika__das) on Mar 27, 2020 at 1:09am PDT

ದೀಪಿಕಾ ದಾಸ್ ದೈನಂದಿನ ಕಾರ್ಯಗಳಲ್ಲಿ ಸಮಯ ವ್ಯರ್ಥ ಮಾಡದೇ ಏನಾದರೂ ಕೆಲಸ ಮಾಡುತ್ತಲೇ ಇರುತ್ತಾರೆ ಅದನ್ನು ನಾವೆಲ್ಲರೂ ಬಿಗ್‌ ಬಾಸ್‌ ಮನೆಯಲ್ಲಿ ನೋಡಿದ್ದೀವಿ. ತಮ್ಮ ಒಳ್ಳೆ ಗುಣವನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳುವುದು ಒಳ್ಳೆಯ ಲಕ್ಷಣಗಳು.

ಒಟ್ಟಿನಲ್ಲಿ ಸದಾ ಬ್ಯುಸಿ ಇರೋ ಮನುಷ್ಯನಿಗೆ ತಾನೇನೆಂದು ಕಂಡು ಕೊಳ್ಳಲು ಈಗ ಟೈಮ್ ಸಿಕ್ಕಿದೆ. ಮುಂದೆಯೂ ಅದು ಅನುಕೂಲಕ್ಕೆ ಬರುವಂತೆ ತಮ್ಮ ತಪ್ಪುಗಳನ್ನು ತಿದ್ದಿಕೊಂಡು, ಪ್ರಬುದ್ಧನಾಗಲು ಇದೊಂದು ಒಳ್ಳೆಯ ಅವಕಾಶವೆಂದು ಅರಿತರೆ ಒಳ್ಳೆಯದು.