ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಇಂಡಿಪೆಂಡೆಂಟ್ ಸಾಂಗ್ ಮಾಡುವುದರಲ್ಲಿ ಬ್ಯುಸಿಯಾದ ವಿಶ್ವನಾಥ್. 'ನೀ ನಿಲ್ಲದೆ' ಶೀಘ್ರದಲ್ಲಿ....
13 ವರ್ಷಗಳಿಂದ ಸಂಗೀತ ಕಲಿಯುತ್ತಿರುವ ಗಾಯಕ ವಿಶ್ವನಾಥ್ ಹಾವೇರಿ 'ಹಾಡು ಕರ್ನಾಟಕ' ಸಂಗೀತ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ನಂತರ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿದ್ದರು. 19 ವರ್ಷದ ವಿಶ್ವನಾಥ್ ಬಿಗ್ ಬಿ ಮನೆ ಪ್ರವೇಶಿಸಿದ ಅತಿ ಕಿರಿಯ ಸ್ಪರ್ಧಿ. ಮನೆಯೊಳಗೆ ಕಂಪೋಸ್ ಮಾಡಿದ ಹಾಡುಗಳು ಹೆಚ್ಚಿನ ಜನರಿಗೆ ತಲುಪಿದ ಕಾರಣ ಇನ್ನೂ ಹೆಚ್ಚಿನ ಇಂಡಿಪೆಂಡೆಂಟ್ ಹಾಡುಗಳನ್ನು ರಚಿಸುವುದರಲ್ಲಿ ಬ್ಯೂಸಿಯಾಗಿದ್ದಾರೆ.
ಹೊಸದಾಗಿ ಕಂಪೋಸ್ ಮಾಡುತ್ತಿರುವ 'Neenillade' ಹಾಡಿನ ಫಸ್ಟ್ ಪೋಸ್ಟರ್ ಹಂಚಿಕೊಂಡಿದ್ದಾರೆ. ' ನನ್ನ ಸಂಗೀತದ ನೀನಿಲ್ಲದೆ ಮೊಟ್ಟ ಮೊದಲ ಪೋಸ್ಟರ್ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಹೀಗೆ ಇರಲಿ. ದಯವಿಟ್ಟು ಆದಷ್ಟು ಹಂಚಿಕೊಳ್ಳಿ' ಎಂದು ವಿಶ್ವನಾಥ್ ಬರೆದುಕೊಂಡಿದ್ದಾರೆ.
ಹಾಡುಗಾರ ವಿಶ್ವನಾಥರನ್ನು ಮೋಡಿಗಾರನಾಗಿಸಿತು ಬಿಗ್ ಬಾಸ್!
ವಿಶ್ವಾನಾಥ್ ಮೂಲತಃ ಧಾರವಾಡದವರಾಗಿದ್ದು ತಾವು ಗಾಯಕನಾಗಿ ಗುರುತಿಸಿಕೊಳ್ಳಬೇಕು ಎಂಬ ಗುರಿ ಹಂಚಿಕೊಂಡಿದ್ದಾರೆ. 'ನನ್ನ ಜೀವನದಲ್ಲಿ ಗಾಯಕನಾಗಿ ಗುರುತಿಸಿಕೊಳ್ಳಬೇಕೆಂದು ನನ್ನ ಕನಸು. ಹೌದು! ನಾನು ಈಗ ಬೇಬಿ ಸ್ಟೆಪ್ ಇಡುತ್ತಿರುವೆ, ಆದರೆ ನನ್ನ ಕನಸು ನನಸು ಮಾಡುವೆ ಎಂಬ ನಂಬಿಕೆ ಇದೆ' ಎಂದು ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.
ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ಹಾಡುಗಳನ್ನು ಹಾಡುವ ಮೂಲಕ ತಮ್ಮ ಕಂಠದಿಂದ ಇನ್ನೆಚ್ಚು ಜನರನ್ನು ಸಂಪಾದಿಸುತ್ತಿದ್ದಾರೆ.
