Asianet Suvarna News Asianet Suvarna News

ಅಂತಿಮ ಘಟ್ಟದಲ್ಲಿ ಬಿಗ್​ಬಾಸ್​: ವೀಕ್ಷಕರಿಗೊಂದು ಟಾಸ್ಕ್- ವಿಡಿಯೋ ನೋಡಿ ಸ್ಪರ್ಧಿಗಳ ಗುರುತಿಸಬಲ್ಲಿರಾ?

ಬಿಗ್​ಬಾಸ್​ ಫಿನಾಲೆಗೆ ಇನ್ನು ಕೆಲವೇ ವಾರಗಳಿದ್ದು, ಇದೀಗ ವಿಡಿಯೋ ನೋಡಿ ಸ್ಪರ್ಧಿಗಳನ್ನು ಗುರುತಿಸುವ ಟಾಸ್ಕ್​ ಒಂದನ್ನು ವೀಕ್ಷಕರಿಗೆ ನೀಡಲಾಗಿದೆ.  
 

Bigg Boss viewers have been given a task to identify the contestants by watching the video suc
Author
First Published Jan 9, 2024, 4:45 PM IST

ಬಿಗ್ ಬಾಸ್​ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿ 13 ವಾರ ಕಳೆದಿವೆ. ಅಂತಿಮ ಘಟ್ಟದಲ್ಲಿ ಟಾಸ್ಕ್​ ಭರಾಟೆ ಜೋರಾಗಿದೆ. ದಿನದಿಂದ ದಿನಕ್ಕೆ ಆಟ ರಂಗೇರುತ್ತಿದೆ.  ಇನ್ನು ಇರೋದು ನಾಲ್ಕೇ ವಾರ ಎಂದು ಇದಾಗಲೇ ಕಿಚ್ಚ ಸುದೀಪ್ ಘೋಷಿಸಿ ಆಗಿದೆ.  ನಾಲ್ಕು ವಾರಗಳಲ್ಲಿ ಫಿನಾಲೆ ಕೂಡ ಬರಲಿದ್ದು, ಹೆಚ್ಚುವರಿಯಾಗಿ 2 ವಾರ ಸೇರ್ಪಡೆಗೊಂಡಿದೆ ಎಂದು ಸುದೀಪ್​ ಹೇಳಿದ್ದರು. ಇದರ ಲೆಕ್ಕಾಚಾರದಲ್ಲಿ  ಫೆಬ್ರವರಿ 4 ರಂದು ಬಿಗ್ ಬಾಸ್ ಸೀಸನ್​ 10ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎನ್ನಲಾಗಿದೆ.  ಈ ಅಂತಿಮ ಘಟ್ಟದಲ್ಲಿ ಬಿಗ್ ಬಾಸ್​ ಜರ್ನಿಯಲ್ಲಿ ಗೆಲ್ಲುವವರು ಯಾರು ಎನ್ನುವ ಲೆಕ್ಕಚಾರ ಕೂಡ ಶುರುವಾಗಿದೆ. ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ಸೋಷಿಯಲ್ ಮೀಡಿಯಾದಲ್ಲಿ ಸಕತ್​ ಕಾಂಪಿಟೇಷನ್​ ಶುರುವಾಗಿದೆ. ಪೋಸ್ಟರ್​ಗಳ ಭರಾಟೆಯೂ ಸಕತ್ ಸ್ಟ್ರಾಂಗ್​ ಆಗುತ್ತಲೇ ಸಾಗಿದೆ.
 
ಈ ವಾರ ಬಿಗ್ ಮನೆಯಿಂದ ಮೈಕಲ್​ ಅಜಯ್ ಹೊರಗೆ ಹೋಗಿದ್ದಾರೆ. ಇವರು ಹೋದ ಹಿನ್ನೆಲೆಯಲ್ಲಿ ಮನೆಯಲ್ಲಿ ಸದ್ಯ ಇರುವುದು ಎಂಟು ಮಂದಿ.  ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್​, ತುಕಾಲಿ ಸಂತೋಷ್​, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್​ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇವರಲ್ಲಿ ಗೆಲ್ಲುವವರು ಯಾರು ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.  ಮನೆಯೊಳಗೆ ಕೊನೆಯ ಘಳಿಕೆ ಟಾಸ್ಕ್​ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ.  ಅದರ ಪ್ರೊಮೋ ಒಂದು ಇದೀಗ ಬಿಡುಗಡೆ ಕೂಡ ಆಗಿದೆ. ಅದರಲ್ಲಿ  ಎಲ್ಲ ಸ್ಪರ್ಧಿಗಳ ಎದೆಯ ಮೇಲೆ ಹೃದಯಾಕಾರದ ಬೋರ್ಡ್‌ ಅನ್ನು ನೇತುಹಾಕಲಾಗಿದೆ. ಸಂಗೀತಾ ಹೊರತುಪಡಿಸಿ ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕಬೇಕು.
 
ಕ್ರಷ್​ ಇದ್ದದ್ದು ಅಂಕಲ್​ ಜೊತೆ, ಮದ್ವೆಯಾಗಿದ್ದು ಇನ್ನೊಬ್ರ ಜೊತೆ: ಇಂಟರೆಸ್ಟಿಂಗ್​ ವಿಷ್ಯ ರಿವೀಲ್​ ಮಾಡ್ರು ರಣವೀರ್​ ಅಮ್ಮ!

  ಕಾರ್ತಿಕ್‌ ಅವರು ವರ್ತೂರು ಸಂತೋಷ್ ಮತ್ತು ತನಿಷಾ ಅವರ  ಹೆಸರು ಹೇಳಿದರೆ, ತನಿಷಾ ಅವರು ತಮ್ಮ ಸರದಿ ಬಂದಾಗ, ನಮ್ರತಾ ಹೆಸರು ಹೇಳಿದ್ದಾರೆ. ವಿನಯ್‌ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಕಾಣಿಸಿಕೊಂಡಿದೆ. ಅವರಿಬ್ಬರೂ ಪರಸ್ಪರ ಚೂರಿ ಹಾಕಿಕೊಂಡಿದ್ದಾರೆ. ಈ ಮೂಲಕ ನಾವಿಬ್ಬರೂ ಬದ್ಧ ವೈರಿಗಳು ಎನ್ನುವುದನ್ನು ಮತ್ತೆ ಸಾರಿದ್ದಾರೆ. ನಿನ್ನೆ ಕೂಡ ಇವರಿಬ್ಬರ ನಡುವೆ ಭಾರಿ ಗಲಾಟೆ ನಡೆದಿತ್ತು. ಇಬ್ಬರ ನಡುವೆ ವಾಗ್ವಿವಾದ ಸಕತ್​ ಜೋರಾಗಿತ್ತು. 

 

ಇದು ಸ್ಪರ್ಧಿಗಳಿಗೆ ಕೊಟ್ಟಿರುವ ಟಾಸ್ಕ್​ ಆದರೆ ಇದರ ಹಿಂದೆಯೇ, ವೀಕ್ಷಕರಿಗಾಗಿ ಇನ್ನೊಂದು ಟಾಸ್ಕ್​ ನೀಡಲಾಗಿದೆ. ಅದು ಸಕತ್​ ಕುತೂಹಲವಾಗಿದೆ. ಇಲ್ಲಿ ಎಐ ಚಿತ್ರದಲ್ಲಿ ರೂಪುಗೊಂಡಂತೆ ಬಿಗ್​ಬಾಸ್​ನಲ್ಲಿ ಇದ್ದ ಹಾಗೂ ಹಾಲಿಇರುವ ಕೆಲವು ಸ್ಪರ್ಧಿಗಳ ಫೋಟೋ ಹಾಕಲಾಗಿದೆ. ಈ ಫೋಟೋ ಯಾರದ್ದು ಎಂದು ಗುರುತಿಸುವ ಟಾಸ್ಕ್​ ನಿಮ್ಮದು. ಹಾಗಿದ್ದರೆ ತಡವೇಕೆ? ಈ ಕೆಳಕ್ಕೆ ಇರುವ ಪ್ರೊಮೋ ನೋಡಿ ಫೋಟೋ ಯಾರದ್ದು ಎಂದು ಗುರುತಿಸಬಲ್ಲಿರಾ? 

'ಅನಿಮಲ್'​ ಯಶಸ್ಸು ಡೇಂಜರಸ್​ ಎಂದ ಜಾವೇದ್​ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ

Follow Us:
Download App:
  • android
  • ios