ಬೆಂಗಳೂರು(ಏ. 18) ಕಾಣುವ ಕನಸೆಲ್ಲವೂ.. ಹಾಡು ಹೇಳುತ್ತಲೆ  ಗಾಯಕ ವಿಶ್ವನಾಥ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇವರು ಮನೆಯಿಂದ ಎಲಿಮಿನೇಟ್ ಆದ ಏಳನೇ ಸ್ಪರ್ಧಿಯಾಗಿದ್ದಾರೆ.

ಈ ವಾರ ಮಂಜು ಪಾವಗಡ, ದಿವ್ಯಾ ಸುರೇಶ್, ಅರವಿಂದ್ ಕೆ.ಪಿ, ದಿವ್ಯಾ ಉರುಡುಗ, ರಾಜೀವ್, ಚಕ್ರವರ್ತಿ ಚಂದ್ರಚೂಡ್, ವಿಶ್ವನಾಥ್, ಶಮಂತ್  ನಾಮಿನೇಟ್ ಆಗಿದ್ದರು. ಅನಾರೋಗ್ಯದಿಂದ ಸುದೀಪ್‌ ಈ ವಾರಾಂತ್ಯವನ್ನು ನಡೆಸಿಕೊಡಲಿಲ್ಲವಾದ್ದರಿಂದ, ಶನಿವಾರ ಎಪಿಸೋಡ್‌ನಲ್ಲಿ ಯಾರೂ ಕೂಡ ಸೇಫ್ ಆಗಿರಲಿಲ್ಲ. ಇಂದು ಅಂತಿಮವಾಗಿ ವಿಶ್ವನಾಥ್‌ ಮನೆಯಿಂದ ಹೊರಬಂದಿದ್ದಾರೆ.

ತೆಂಗಿನಕಾಯಿ ಮೂಲಕ ಚೀಟಿ ಕಳಿಸಿ ರಾಜೀವ್ ಅವರನ್ನು ಸೇಫ್ ಮಾಡಲಾಯಿತು. ಇದಾದ ಬಳಿಕ ಪತ್ರ ನೀಡಿ ಶಮಂತ್ ಸೇಫ್ ಆದರು. ಕೊನೆಯಲ್ಲಿ ಬಿಗ್ ಬಾಸ್ ಜರ್ನಿಯನ್ನು  ಸ್ಕ್ರೀನ್ ಮೇಲೆ ತೋರಿಸಿ ವಿಶ್ವನಾಥ್ ಅವರನ್ನು ಎಲಿಮಿನೇಟ್ ಮಾಡಲಾಯಿತು. 

ಮೂರೇ ದಿನಕ್ಕೆ ಮನೆಯಿಂದ ಹೊರಟ ವೈಜಯಂತಿಗೆ ಸುದೀಪ್ ಖಡಕ್ ಸಂದೇಶ

ಮನೆಯಿಂದ ಹೊರಬರುವ ವೇಳೆ  ಬಿಗ್ ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದರು.  ವಿಶ್ವನಾಥ್ ಅವರು ನಟಿ ನಿಧಿ ಸುಬ್ಬಯ್ಯ ಅವರ ಹೆಸರನ್ನು ತೆಗೆದುಕೊಂಡು ಮುಂದಿನ ವಾರದ ನಾಮಿನೇಶನ್ ನಿಂದ ಬಚಾವ್ ಮಾಡಿದರು. ವಿಶ್ವನಾಥ್  48 ದಿನಗಳ ಬಿಗ್ ಬಾಸ್ ಮನೆಯ ಜರ್ನಿ ಮುಕ್ತಾಯವಾಗಿದೆ.

ಸುದೀಪ್ ಅವರ ಅನುಪಸ್ಥಿತಿಯಲ್ಲಿ ಈ ವಾರ ಎಲಿಮಿನೇಶನ್ ನಡೆಯಿತು.  ಈ ನಡುವೆ ಸುದೀಪ್ ದೂರವಾಣಿಯಲ್ಲಿ  ಮನೆಯವರೊಂದಿಗೆ ಮಾತನಾಡಿ ಧನ್ಯವಾದ ಹೇಳಿದರು.   ಅರವಿಂದ್ ಮತ್ತು ಮಂಜುಗೆ ಅಭಿಮಾನಿಗಳು ಪ್ರಶ್ನೆ ಕೇಳಿದ್ದು ಹೈಲೈಟ್ಸ್...