BBK11: ಜೀವನದಲ್ಲಿ ನರಕ ನೋಡಿದ ಐಶ್ವರ್ಯಾ ಸಿಂಧೋಗಿಯನ್ನು ಸ್ವರ್ಗಕ್ಕೆ ಕರೆಸಿಕೊಂಡ ವಕೀಲ ಜಗದೀಶ್!

ಕಿರುತೆರೆ ನಟಿ ಐಶ್ವರ್ಯ ಸಿಂಧೋಗಿ ತಂದೆ ತಾಯಿಯನ್ನು ಕಳೆದುಕೊಂಡು ಒಂಟಿಯಾಗಿ ನರಕ ಅನುಭವಿಸಿದ್ದಾಳೆ ಎಂದು ಆಕೆಯನ್ನು ವಕೀಲ ಜಗದೀಶ್ ಸ್ವರ್ಗಕ್ಕೆ ಕರೆಸಿಕೊಂಡಿದ್ದಾರೆ.

Bigg Boss Kannada Season 11 Contestant Aishwarya Sindhogi Enters Heaven sat

ಬೆಂಗಳೂರು (ಸೆ.29): ಕನ್ನಡ ಕಿರುತೆರೆಯ ನಟಿ ಐಶ್ವರ್ಯ ಸಿಂಧೋಗಿ ಸ್ಟಾರ್ ಸುವರ್ಣ ವಾಹಿನಿಯ ನಮ್ಮ ಲಚ್ಚಿ ಧಾರಾವಾಹಿಯ ಖಳನಾಯಕಿ ಪಾತ್ರಧಾರಿಯಾಗಿ ಪರಿಚಿತವಾಗಿದ್ದಾಳೆ. ಇದೀಗ ಬಿಗ್ ಬಾಸ್ ಸೀಸನ್ 11 ರಲ್ಲಿ ತನ್ನ ಜೀವನದ ನಿಜ ಸ್ವರೂಪ ತೋರಿಸಲು ಆಗಮಿಸಿದ್ದಾಳೆ. ನಿಜ ಜೀವನದಲ್ಲಿ ಕಷ್ಟವನ್ನೇ ಅನುಭವಿಸಿ ನರಕವನ್ನು ನೋಡಿದ ಐಶ್ವರ್ಯಾಳನ್ನು ಲಾಯರ್ ಜಗದೀಶ್ ವಾದವನ್ನು ಮಂಡಿಸಿ ಲಾ ಪಾಯಿಂಟ್‌ಗಳನ್ನು ಎಸೆದು ಸ್ವರ್ಗಕ್ಕೆ ಕರೆಸಿಕೊಂಡಿದ್ದಾರೆ.

ನಮ್ಮ ಲಚ್ಚಿ ಧಾರಾವಾಹಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಖಳನಾಯಕಿ ಪಾತ್ರವನ್ನೇ ಮಾಡುತ್ತಾ ಬಂದಿರುವ ಐಶ್ವರ್ಯಾ ಸಿಂಧೋಗಿ ಅವರು ನಿಜ ಜೀವನದಲ್ಲಿ ಭಾರಿ ನೊಂದು ಬೆಂದಿದ್ದಾರೆ. ಅವರು ಇತ್ತೀಚೆಗೆ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿ ಜೀವನ ಮಾಡುವಂತಾಗಿದೆ. ಜೀವನದಲ್ಲಿ ತಂದೆ, ತಾಯಿ ಕಳೆದುಕೊಂಡರೂ ಎಲ್ಲರೂ ತನ್ನೊಂದಿಗಿದ್ದಾರೆ ಎಂದು ತನ್ನಷ್ಟಕ್ಕೇ ತಾನೇ ಧೈರ್ಯ ತಂದುಕೊಂಡು ಜೀವನ ಸಾಗಿಸುತ್ತಿದ್ದಾಳೆ. ಇದೀಗ ತಾನೆಷ್ಟು ಜೀವನದಲ್ಲಿ ಕಷ್ಟ ಎದುರಿಸಿ ಗಟ್ಟಿಗಿತ್ತಿ ಆಗಿದ್ದೀನಿ ಎಂದು ತೋರಿಸುತ್ತಾ, ಬಿಗ್ ಬಾಸ್ ಮನೆಯ 50 ಲಕ್ಷ ರೂ. ಹಣವನ್ನು ಗೆದ್ದುಕೊಂಡು ಹೋಗಲು ಬಂದಿದ್ದಾರೆ. ಇದಕ್ಕೆ ಜನರ ಪ್ರೋತ್ಸಾಹ ಕೂಡ ಅಗತ್ಯವಾಗಿದೆ.

ಇದನ್ನೂ ಓದಿ: ಅತಿಹೆಚ್ಚು ವೋಟ್ ಮಾಡಿ ಚೈತ್ರಾ ಕುಂದಾಪುರಳನ್ನು ಬಿಗ್‌ ಬಾಸ್‌ ಮನೆ ನರಕಕ್ಕೆ ಕಳಿಸಿದ ಜನ

ಕಿಚ್ಚ ಸುದೀಪ್ ಅವರ ಮುಂದೆ ಮಾತನಾಡುತ್ತಾ, ನನ್ನ ತಂದೆ ತಾಯಿ ನನ್ನನ್ನು ಮುದ್ದಾಗಿ ಬೆಳೆಸಿದ್ದಾರೆ. ಒಬ್ಬಳೇ ಮಗಳು ನಾನು. ಅಮ್ಮ ಅನಾರೋಗ್ಯದಿಂದ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ, ಇನ್ನು ತಂದೆ ಅವರು ಯಾವತ್ತಿಗೂ ನನ್ನ ಮುಂದೆ ಕಷ್ಟವನ್ನು ತೋರಿಸಿಕೊಡವರಲ್ಲ. ಅವರೊಬ್ಬ ಹೀರೋ ಆಗಿಯೇ ಇದ್ದರು. ಅವರು ಹೈದರಾಬಾದ್‌ಗೆ ಹೋದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಅವರು ಜೀವನದಲ್ಲಿ ಸಫರ್ ಆಗುವುದನ್ನು ಎಂದಿಗೂ ನೋಡಲಿಲ್ಲ. ತಂದೆ 2018ರಲ್ಲಿ, ಅಮ್ಮ 2020ರಲ್ಲಿ ನಿಧನ ಹೊಂದಿದರು. ಆದರೂ, ಈಗಲೂ ಅವರು ನನ್ನೊಂದಿಗಿದ್ದಾರೆ ಎಂದು ಐಶ್ವ್ಯಾ ಹೇಳಿದರು. ಆದರೆ, ಇಷ್ಟೆಲ್ಲಾ ಕಷ್ಟವನ್ನು ಅನುಭವಿಸಿ ನರಕವನ್ನೇ ಕಂಡಿರುವ ಐಶ್ವರ್ಯಾಳನ್ನು ವಕೀಲ ಜಗದೀಶ್ ಅವರು ತಮಗೆ ಕೊಟ್ಟ ವಿಶೇಷ ಅಧಿಕಾರವನ್ನು ಬಳಸಿ ಸ್ವರ್ಗಕ್ಕೆ ಕರೆಸಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios