ಬಿಗ್ ಬಾಸ್ ಪಕ್ಷಪಾತ ಬಹಿರಂಗ; ಅರ್ಧ ಶೋ ಮುಗಿದರೂ ಮಹಿಳಾ ಸ್ಪರ್ಧಿಗಳನ್ನಷ್ಟೇ ಎಲಿಮಿನೇಟ್ ಮಾಡಿದ್ಯಾಕೆ!

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ 50 ದಿನಗಳಲ್ಲಿ 6 ಮಂದಿ ಹೊರ ಹೋಗಿದ್ದಾರೆ. ಆದರೆ, ಇಲ್ಲಿ ಪುರುಷ ಮತ್ತು ಮಹಿಳಾ ಸ್ಪರ್ಧಿಗಳ ನಡುವೆ ಬಿಗ್ ಬಾಸ್ ಪಕ್ಷಪಾತ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

Bigg Boss Kannada 11 organizers did Bias between male and female contestants sat

ಬೆಂಗಳೂರು (ನ.18): ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 11ರಲ್ಲಿ ಪುರುಷ ಮತ್ತು ಮಹಿಳಾ ಸ್ಪರ್ಧಿಗಳ ನಡುವೆ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ 50 ದಿನಗಳನ್ನು ಪೂರೈಸಿದ್ದು, 6 ಮಂದಿ ಮನೆಯಿಂದ ಹೊರಗೆ ಹೋಗಿದ್ದರೆ, ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಬಂದಿದ್ದಾರೆ. ಯಾವ ರೀತಿಯಲ್ಲಿ ಪಕ್ಷಪಾತ ಮಾಡಲಾಗುತ್ತಿದೆ ಎಂಬ ವಿವರ ಇಲ್ಲಿದೆ ನೋಡಿ..

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಬಿಗ್ ಬಾಸ್ ಪುರುಷ ಮತ್ತು ಮಹಿಳಾ ಸ್ಪರ್ಧಿಗಳ ನಡುವೆ ಪಕ್ಷಪಾತ ಮಾಡುತ್ತಿದ್ದಾರೆ ಎಂಬುದು ಈ ಸುದ್ದಿಯ ವಿವರಣೆಯಿಂದ ನಿಮಗೂ ಸ್ಪಷ್ಟವಾಗಿ ತಿಳಿಯುತ್ತದೆ. ಅದೇನೆಂದರೆ ಬಿಗ್ ಬಾಸ್ ಸ್ಪರ್ಧೆ ಆರಂಭವಾಗಿ ಮೊನ್ನೆ ಶನಿವಾರಕ್ಕೆ 7 ವಾರ್ಗಳು ಮುಕ್ತಾಯಗೊಂಡಿವೆ. ನಿನ್ನೆ ಭಾನುವಾರಕ್ಕೆ 50 ದಿನಗಳು ಪೂರ್ಣಗೊಂಡಿವೆ. ಆರಂಭದಲ್ಲಿ 17 ಜನರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಅದರಲ್ಲಿ ಆರು ಜನರು ಮನೆಯಿಂದ ಹೊರಗೆ ಹೋಗಿದ್ದಾರೆ. ಹೀಗಾಗಿ, ಸ್ವರ್ಗ ಮತ್ತು ನಗರ ಎಂಬ ಮನೆಯಲ್ಲಿ ಆಟವಾಡಿದವರು ಇದೀಗ 11 ಜನರು ಮಾತ್ರ ಇದ್ದಾರೆ. ಉಳಿದಂತೆ ಸ್ವರ್ಗ ನರಕ ಟಾಸ್ಕ್ ಮುಗಿದ ನಂತರ ಗಾಯಕ ಹನುಮಂತು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹಾಗೂ 50 ದಿನ ಪೂರ್ಣಗೊಂಡ ನಂತರ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ಆಗಮಿಸಿದ್ದಾರೆ.

  • ಬಿಗ್ ಬಾಸ್ ಮನೆಯಿಂದ ಹೊರಗೆ ಹೋದವರು:
  • 1ನೇ ವಾರ - ಯಮುನಾ ಶ್ರೀನಿಧಿ
  • 2ನೇ ವಾರ - ಯಾರೂ ಇಲ್ಲ.
  • 3ನೇ ವಾರ - ಹಂಸಾ ನಾರಾಯಣಸ್ವಾಮಿ
  • ಮಧ್ಯಂತರ - ರಂಜಿತ್ ಮತ್ತು ಲಾಯರ್ ಜಗದೀಶ್ (ಎಲಿಮಿನೇಷನ್ ಆಗದೆ ನಿಯಮ ಉಲ್ಲಂಘಿಸಿ ಮನೆಗೆ ಹೋದವರು)
  • 4ನೇ ವಾರ - ಯಾರೂ ಇಲ್ಲ.
  • 5ನೇ ವಾರ - ಮಾನಸಾ
  • 6ನೇ ವಾರ - ಯಾರೂ ಇಲ್ಲ
  • 7ನೇ ವಾರ - ಅನುಷಾ ರೈ

ಇದನ್ನೂ ಓದಿ: ಮೋಕ್ಷಿತಾ ನಂಗಿಷ್ಟ ಎಂದ ತ್ರಿವಿಕ್ರಮ್; ಇಬ್ಬರ ತಲೆಗೆ ಹೊಡೆದು ನಾಮಿನೇಟ್ ಮಾಡಿದ ಉಗ್ರಂ ಮಂಜು!

ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ
4ನೇ ವಾರದ ಮದ್ಯಂತರ - ಗಾಯಕ ಹನುಮಂತ
8ನೇ ವಾರದ ಆರಂಭ - ಶೋಭಾ ಶೆಟ್ಟಿ, ರಜತ್ ಕಿಶನ್

ನೇರ ಎಲಿಮಿನೇಟ್ ಆದವರೆಲ್ಲರೂ ಮಹಿಳಾ ಸ್ಪರ್ಧಿಗಳು:
ಬಿಗ್ ಬಾಸ್ ಮನೆಗೆ ಬಂದವರ ಪೈಕಿ 9 ಮಹಿಳೆಯರು ಹಾಗೂ 8 ಪುರುಷರು ಇದ್ದರು. ಈ ಪೈಕಿ ಈವರೆಗೆ ನಾಲ್ವರು ಮಹಿಳೆಯರಿ ಮನೆಯಿಂದ ನಾಮಿನೇಟ್ ಆಗಿ ನೇರವಾಗಿ ಎಲಿಮಿನೇಷನ್ ಮೂಲಕ ಮನೆಗೆ ಹೋಗಿದ್ದಾರೆ. ಅದರಲ್ಲಿ ಯಮುನಾ ಶ್ರೀನಿಧಿ, ಹಂಸಾ ನಾರಾಯಣಸ್ವಾಮಿ, ಮಾನಸಾ ಹಾಗೂ ಅನುಷಾ ರೈ. ಇನ್ನು ನಟ ಸೂರ್ಯ ರಂಜಿತ್ ಹಾಗೂ ವಕೀಲ ಜಗದೀಶ್ ಅವರು ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘಿಸಿ ಮನೆಯೊಂದ ಹೊರಗೆ ಹಾಕಲ್ಪಟ್ಟಿದ್ದಾರೆ. ಅಂದರೆ, ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಿಂದ ಈವರೆಗೆ ಯಾವುದೇ ಒಬ್ಬ ಪುರುಷ ಸ್ಪರ್ಧಿ ನಾಮಿನೇಟ್ ಆಗಿ, ನೇರ ಎಲಿಮಿನೇಷನ್ ಆಗಿ ಹೊರಗೆ ಹೋಗಿಲ್ಲ. ಇಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳ ನಡುವೆ ಪಕ್ಷಪಾತ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಆದರೆ, ಸ್ಪರ್ಧಿಗಳ ಆಟದಲ್ಲಿ ಪುರುಷ ಸ್ಪರ್ಧಿಗಳು ಉತ್ತಮವಾಗಿ ಆಟವಾಡುತ್ತಿದ್ದು, ಅದರಿಂದಲೇ ಅವರನ್ನು ಮನೆಗೆ ಕಳಿಸಲಾಗಿಲ್ಲ ಎಂಬ ವಾದವನ್ನೂ ನಾವು ಒಪ್ಪಿಕೊಳ್ಳದಿರಲು ಸಾಧ್ಯವಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ 50 ದಿನ ಪೂರೈಸಿದವರ ತಾಕತ್ತು ಪ್ರಶ್ನಿಸಿದ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ರಜತ್ ಕಿಶನ್!

50 ದಿನದ ನಂತರ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು:
ಪುರುಷರು
:

  1. ತ್ರಿವಿಕ್ರಮ್
  2. ಶಿಶಿರ್
  3. ಧರ್ಮ ಕೀರ್ತಿರಾಜ್
  4. ಹನುಮಂತ
  5. ಗೋಲ್ಡ್ ಸುರೇಶ್
  6. ಉಗ್ರಂ ಮಂಜು
  7. ಧನರಾಜ್
  8. ರಜತ್ ಕಿಶನ್

 

ಮಹಿಳೆಯರು:

  1. ಗೌತಮಿ ಜಾಧವ್
  2. ಐಶ್ವರ್ಯಾ ಸಿಂಧೋಗಿ
  3. ಭವ್ಯಾ ಗೌಡ
  4. ಮೋಕ್ಷಿತಾ ಪೈ
  5. ಚೈತ್ರಾ ಕುಂದಾಪುರ
  6. ಶೋಭಾ ಶೆಟ್ಟಿ
Latest Videos
Follow Us:
Download App:
  • android
  • ios