ಬಿಗ್ಬಾಸ್ ಮನೆಯಿಂದ ಹೊರಬಂದು ಪ್ರೆಸ್‌ಮೀಟ್ ಕರೆದ ವಕೀಲ್ ಸಾಬ್ ಜಗದೀಶ್!
ಬಿಗ್ಬಾಸ್ ಮನೆಯಿಂದ ಹೊರಬಂದ ಜಗದೀಶ್ ಮೂರು ದಿನಗಳ ನಂತರ ಮಾಧ್ಯಮಗೋಷ್ಠಿ ಕರೆದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಡೆದ ಗಲಾಟೆ ಮತ್ತು ನೂಕಾಟದಿಂದಾಗಿ ಜಗದೀಶ್ ಮತ್ತು ರಂಜಿತ್ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು.
ಕನ್ನಡದ ಬಿಗ್ಬಾಸ್ ಸೀಸನ್ 11 ರಿಂದ ಹೊರಹಾಕಲ್ಪಟ್ಟಿರುವ ಜಗದೀಶ್ ಮನೆಯಿಂದ ಹೊರಬಂದ ಮೂರು ದಿನಗಳ ಬಳಿಕ ಮಾಧ್ಯಮ ಗೋಷ್ಟಿ ಕರೆದಿದ್ದಾರೆ. ಅಕ್ಟೋಬರ್ 20ರಂದು ಬೆಳಿಗ್ಗೆ 9.00 ಘಂಟೆಗೆ ಬೆಂಗಳೂರಿನ ಸಹಕಾರ ನಗರದಲ್ಲಿರುವ ಗುಂಡ ಆಂಜನೇಯ ದೇವಸ್ಥಾನದಲ್ಲಿ ಮಾಧ್ಯಮಗಳ ಜೊತೆ ಮೊದಲ ಮಾತುಗಳು ಹಂಚಿ ಕೊಳ್ಳಲು ಕಾದಿರುವೇ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಹೀಗಾಗಿ ನಾಳೆ ಎಲ್ಲಾ ಪ್ರಶ್ನೆಗಳಿಗೆ ಗೊಂದಲಗಳಿಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹಲವರು ಕಾಯುತ್ತಿದ್ದಾರೆ. ಇದಕ್ಕೂ ಮುನ್ನ ಫೇಸ್ಬುಕ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ವಕೀಲ್ ಸಾಬ್ ಬಿಗ್ ಬಾಸ್ ಮನೆಯ ಕ್ಲಿಕ್, ಲವ್ ಯೂ ಬಿಗ್ಬಾಸ್ ಎಂದು ಬರೆದುಕೊಂಡಿದ್ದಾರೆ.
BBK11: ಚೈತ್ರಾ ಜೈಲು ಸೇರಿದ್ರು, ಭವ್ಯಾ-ತ್ರಿವಿಕ್ರಮ್ ಇನ್ನಷ್ಟು ಹತ್ತಿರವಾದ್ರು! ಮಂಜು ಬದಲಾಗಿದ್ದಾರೆ?
ಬಿಗ್‌ಬಾಸ್ ಮನೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಗಲಾಟೆ ಮಾಡಿಕೊಂಡು ಕೆಟ್ಟ ಪದಗಳಲ್ಲಿ ಬೈದಿದ್ದಕ್ಕೆ ಅವರನ್ನು ಮನೆಯಿಂದ ಹೊರಗಡೆ ಹಾಕಲಾಗಿತ್ತು. ಜೊತೆಗೆ ದೈಹಿಕವಾಗಿ ನೂಕಾಟ ತಳ್ಳಾಟ ನಡೆಸಿದ್ದಾರೆ ಎನ್ನುವ ಕಾರಣಕ್ಕೆ ರಂಜಿತ್ ಅವರನ್ನು ಕೂಡ ಮನೆಯಿಂದ ಹೊರಗಡೆ ಕಳುಹಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಜಗದೀಶ್ ಇಂದು ತನ್ನ ಖಾತೆಯಿಂದ ನಾನು ಮನೆಯಿಂದ ಹೊರಗಡೆ ಬಂದಿರುವುದು ನಿಜ ಎಂದು ಬರೆದುಕೊಂಡಿದ್ದಾರೆ.
ಇಂದು ಬಿಗ್‌ಬಾಸ್ ವೀಕೆಂಡ್ ಶೋ ಪ್ರಸಾರವಾಗಲಿದ್ದು, ಕಿಚ್ಚ ಸುದೀಪ್ ಮನೆಯಲ್ಲಿ ಯಾರನ್ನು ಯಾವ ರೀತಿ ಪ್ರಶ್ನೆ ಮಾಡಲಿದ್ದಾರೆಂದು ಎಂಬ ಕುತೂಹಲ ಹೆಚ್ಚಿದೆ. ಎಲ್ಲಾ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಿರುವ ಪ್ರೋಮೋ ರಿಲೀಸ್ ಮಾಡಲಾಗಿದೆ.
ಬಿಗ್‌ಬಾಸ್‌ಗೆ ಕೃತಜ್ಞತೆ ಸಲ್ಲಿಸಿದ ಜಗದೀಶ್
‘ಐ ಮಿಸ್ ಬಿಗ್‌ಬಾಸ್’ ಎಂದಿದ್ದಾರೆ. ಈ ಕುರಿತು ವಾಯ್ಸ್ ನೋಟ್ ಕಳುಹಿಸಿರುವ ಅವರು, ‘ಬಿಗ್ ಬಾಸ್ ಕಾರ್ಯಕ್ರಮ ವ್ಯಕ್ತಿಯ ಜೀವನವನ್ನು ತೋರಿಸುವಂಥಾ ಕನ್ನಡಿ. ಅಲ್ಲಿ ನನ್ನ ನಿಜ ಮುಖ ನೋಡಿದಾಗ ನನಗೇ ಆಶ್ಚರ್ಯ ಆಯ್ತು. ನನ್ನಲ್ಲಿ ಅಡಗಿದ ಕೋಪ, ಪ್ರತಿಭೆ ಎಲ್ಲವೂ ಅರ್ಥವಾಗಿದೆ. ನಿಜವಾಗಿಯೂ ನಾವು ಅದೃಷ್ಟವಂತರು. ಎಷ್ಟೋ ಕೋಟಿ ಜನಗಳ ಮಧ್ಯೆ ಬಿಗ್‌ಬಾಸ್‌ನಲ್ಲಿ ಭಾಗಿಯಾಗುವ ಅವಕಾಶ ನಮ್ಮ ಅದೃಷ್ಟ. ಅದನ್ನು ವಿಭಿನ್ನವಾಗಿ ತೋರಿಸುವ ಮೀಡಿಯಾ, ಎಂಜಾಯ್ ಮಾಡಿದ ವೀಕ್ಷಕರು, ನನ್ನ ಅಭಿಮಾನಿ ದೇವರಿಗೆ ವಂದನೆಗಳು. ನಾನು ಬಿಗ್ ಬಾಸ್ ಮಿಸ್ ಮಾಡಿಕೊಳ್ತೇನೆ’ ಎಂದು ಇದರಲ್ಲಿ ಲಾಯರ್ ಜಗದೀಶ್ ಹೇಳಿದ್ದಾರೆ.
‘ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ, ನೀವೆಲ್ಲಾ ತುಂಬಾ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರಾಗಿದ್ದೀರಿ. ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೆ, ಈ ನಿಟ್ಟಿನಲ್ಲಿ ಕೆಲವು ತಪ್ಪುಗಳು ನನ್ನಿಂದ ಆಗಿವೆ. ಅದು ನಟನೆ ಅಥವಾ ಮನರಂಜನೆಯ ಒಂದು ಭಾಗವಷ್ಟೆ, ವೈಯುಕ್ತಿಕ ದ್ವೇಷ ಯಾವುದೂ ಇಲ್ಲ’ ಎಂದು ಸಂದೇಶದಲ್ಲಿ ಜಗದೀಶ್ ತಿಳಿಸಿದ್ದಾರೆ.