ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಅಚ್ಚರಿಯ ಎಲಿಮಿನೇಷನ್‌ ನಡೆದಿದ್ದು, ಹಂಸಾ ಅವರು ಮನೆಯಿಂದ ಹೊರಬಂದಂತಿದೆ ಸೋಷಿಯಲ್‌ ಮೀಡಿಯಾದಲ್ಲಿ ತುಕಾಲಿ ಮಾನಸ ಎಲಿಮಿನೇಟ್‌ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿದ್ದರೂ, ಕೊನೆಯ ಘಟ್ಟದಲ್ಲಿ ಹಂಸಾ ಅವರು ಎಲಿಮಿನೇಟ್‌ ಆಗಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಅಚ್ಚರಿಯ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಭಾನುವಾರದ ಎಪಿಸೋಡ್‌ ನಲ್ಲಿ ತುಕಾಲಿ ಮಾನಸ ಅವರು ಎಲಿಮಿನೇಟ್‌ ಆಗಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಆದರೆ ಮನೆಯಿಂದ ಹಂಸಾ ಅವರು ಎಲಿಮಿನೇಟ್‌ ಆಗಿದ್ದಾರೆ. ಇಂದು (ಭಾನುವಾರ ಅ.27) ಎಲಿಮಿನೇಶನ್ ಪ್ರಕ್ರಿಯೆಗೆ ಬಂದಿದ್ದ ಸೃಜನ್ ಲೋಕೇಶ್ ಅವರು ಯಾರೆಲ್ಲ ಸೇಫ್ ಎಂದು ಹೇಳಿ ಹೋದರು,

ಏರು ಧ್ವನಿಯಿಂದಲೇ ಟ್ರೋಲ್‌ ಆಗಿದ್ದ ತುಕಾಲಿ ಮಾನಸ ಅವರು ಈ ವಾರ ಮನೆಯಿಂದ ಹೊರಹೋಗಿದ್ದಾರೆಂದು ಸುದ್ದಿಯಾಗಿತ್ತು. ಆದರೆ ಎಲಿಮಿನೇಶನ್‌ ನ ಕೊನೆಯ ಘಟ್ಟದಲ್ಲಿ ತುಕಾಲಿ ಮಾನಸ, ಹಂಸಾ ಮತ್ತು ಮೋಕ್ಷಿತಾ ಅವರು ಉಳಿದಿದ್ದರು. ಅದರಲ್ಲಿ ತುಕಾಲಿ ಮಾನಸ ಸೇಫ್ ಆದರು. ಕೊನೆಗೆ ಎಲಿಮಿನೇಶನ್‌ ನಲ್ಲಿ ಮೋಕ್ಷಿತಾ ಮತ್ತು ಹಂಸಾ ಉಳಿದುಕೊಂಡರು.

ಅಭಿಷೇಕ್ ಬಚ್ಚನ್ ಜೊತೆ ಸಂಬಂಧದ ಸುದ್ದಿ ಬೆನ್ನಲ್ಲೇ​, ನಟಿ ಹೇಳಿಕೆ ಈಗ ವೈರಲ್​

ಕಿಚ್ಚನಿಲ್ಲದ ಕಾರಣಕ್ಕಾಗಿ ಮನೆಯಲ್ಲಿ ವಿಭಿನ್ನವಾಗಿ ಎಲಿಮಿನೇಶನ್‌ ಮಾಡಲಾಯಿತು. ಮನೆಯ ಗಾರ್ಡನ್ ಏರಿಯಾಗೆ ಎರಡು ಕಾರುಗಳು ಬಂತು, ಒಂದು ಕಾರಿನಲ್ಲಿ ಮೋಕ್ಷಿತಾ ಅವರನ್ನು ಮತ್ತು ಮತ್ತೊಂದು ಕಾರಿನಲ್ಲಿ ಹಂಸಾ ಅವರನ್ನು ಕೂರಿಸಲಾಯ್ತು. ಹೊರಗಡೆ ಹೋದ ಕಾರ್‌ ನಲ್ಲಿ ಸೇಫ್ ಆಗಿ ಮನೆಗೆ ಬಂದವರು ಮೋಕ್ಷಿತಾ ಪೈ ಆಗಿದ್ದಾರೆ.

ರಾಮ್ ಚರಣ್ ಜೀವನದಲ್ಲಿ ನಡೆದ ಶಾಕಿಂಗ್ ಘಟನೆ ಬಹಿರಂಗಪಡಿಸಿದ ಪವನ್ ಕಲ್ಯಾಣ್

ಆದರೆ ಇಂದಿನ ಎಪಿಸೋಡ್‌ ನಲ್ಲಿ ಯಾರು ಎಲಿಮಿನೇಟ್‌ ಆಗಿದ್ದಾರೆ ಎಂಬುದನ್ನು ತೋರಿಸಿಲ್ಲ. ಆದರೆ ನಾಳಿನ ಸಂಚಿಕೆಯಲ್ಲಿ ಮೋಕ್ಷಿತಾ ಪೈ ಅವರು ತ್ರಿವಿಕ್ರಮ್ ವಿರುದ್ಧ ಘೋಮುಖ ವ್ಯಾಘ್ರ ಎಂದು ಕೆಂಡಾಮಂಡಲವಾಗಿರುವುದು ವಿಡಿಯೋದಲ್ಲಿ ಕಾಣಿಸಿದೆ. ಮನೆಯಲ್ಲಿ ತ್ರಿವಿಕ್ರಮ್ ಪ್ಲಾನ್ ಮಾಡಿಕೊಂಡು ಆಟ ಆಡುತ್ತಿದ್ದಾರೆ. ಇಂತಹ ಆಟ ಈ ಮನೆಗೆ ಬೇಡ ಎಂದು ಎಲಿಮಿನೇಶನ್‌ ಗೂ ಮುನ್ನ ಬಿಗ್‌ಬಾಸ್‌ ಬಳಿ ಮೋಕ್ಷಿತಾ ಹೇಳಿರುವುದು ಕೂಡ ಕಾಣಿಸಿದೆ.