ನೃತ್ಯ ಮತ್ತು ನಟನೆಯಿಂದ ಪ್ರಸಿದ್ಧರಾದ ಕಿಶನ್ ಬಿಳಗಲಿ, ತಮ್ಮ ವಿಡಿಯೋ ಕಲೆಗೆ ಹೊಸ ರೂಪ ನೀಡುತ್ತಿದ್ದಾರೆ. ಮದುವೆ, ಎಂಗೇಜ್ಮೆಂಟ್ ಮುಂತಾದ ವಿಶೇಷ ದಿನಗಳಿಗೆ ಕ್ರಿಯೇಟಿವ್ ವಿಡಿಯೋಗ್ರಫಿ ಸೇವೆ ಒದಗಿಸಲು ಅವರು ಮತ್ತು ಅವರ ತಂಡ ಸಿದ್ಧರಾಗಿದ್ದಾರೆ. ಆಸಕ್ತರು +91 9900112191 ಅನ್ನು ಸಂಪರ್ಕಿಸಬಹುದು. ಈ ಹೊಸ ಪ್ರಯತ್ನಕ್ಕೆ ಕಿಶನ್ ಅವರಿಗೆ ಅಭಿಮಾನಿಗಳು ಮತ್ತು ಕಲಾವಿದರು ಶುಭ ಹಾರೈಸಿದ್ದಾರೆ.

ಡಾನ್ಸ್ ವಿಡಿಯೋ (Dance video) ಮೂಲಕವೇ ದೇಶದಾದ್ಯಂತ ಲಕ್ಷಾಂತರ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರ ಆದವರು ಡಾನ್ಸರ್ ಹಾಗೂ ನಟ ಕಿಶನ್ ಬಿಳಗಲಿ (actor Kishen Bilgali). ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್, ಸೀರಿಯಲ್ ಜೊತೆ ಸುಂದರ ಹೀರೋಯಿನ್ಸ್ ಜೊತೆ ಚೆಂದದ ಹಾಡಿಗೆ ಹೆಜ್ಜೆ ಹಾಕಿ ಸೈ ಎನ್ನಿಸಿಕೊಂಡಿದ್ದಾರೆ. ನಮ್ರತಾ, ಅನುಪಮಾ, ತನ್ವಿ ರಾವ್, ದೀಪಿಕಾ ದಾಸ್ ಸೇರಿದಂತೆ ಅನೇಕ ಹೀರೋಯಿನ್ಸ್ ಜೊತೆ ಹಳೆ ಹಾಡಿಗೆ ಹೊಸ ಸ್ಟೈಲ್ ನಲ್ಲಿ ಡಾನ್ಸ್ ಮಾಡ್ತಿರುವ ಕಿಶನ್ ಬಿಳಗಲಿ ಈಗ ತಮ್ಮ ಕಲೆಯನ್ನು ಬ್ಯುಸಿನೆಸ್ ಆಗಿ ಬದಲಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಕಿಶನ್ ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಕಿಶನ್ ಬಿಳಗಲಿ ತಮ್ಮ ಹೊಸ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಳಿ ಪಂಚೆಯುಟ್ಟ, ಚೇರ್ ಮೇಲೆ ಕುಳಿತುಕೊಂಡಿದ್ದ ಕಿಶನ್ ನೋಡಿ, ಫ್ಯಾನ್ಸ್ ಕಿಶನ್ ಮದುವೆ ಬಗ್ಗೆ ಗುಡ್ ನ್ಯೂಸ್ ನೀಡ್ತಾರೆ ಅಂದುಕೊಂಡಿದ್ದರು. ನನ್ನ ಜೀವನದ ಹೊಸ ಅಧ್ಯಾಯನ ನಿಮ್ಮ ಜೊತೆ ಶುರು ಮಾಡ್ತಿದ್ದೇನೆ ಅಂತ ಕಿಶನ್ ಹೇಳ್ತಿದ್ದಂತೆ ಫ್ಯಾನ್ಸ್, ಪಕ್ಕಾ ಇದು ಮದುವೆ ವಿಷ್ಯ ಅಂದ್ಕೊಂಡಿದ್ದರು. ಆದ್ರೆ ಕಿಶನ್ ತಮ್ಮ ಬ್ಯುಸಿನೆಸ್ ಬಗ್ಗೆ ಹೇಳಿದ್ದಾರೆ. ಇಷ್ಟು ವರ್ಷ ಸತತವಾಗಿ ವಿಡಿಯೋ ಮಾಡಿಕೊಂಡು ಬಂದಿದ್ದೇನೆ. ಅದನ್ನು ನೀವು ಕೂಡ ಇಷ್ಟಪಟ್ಟಿದ್ದೀರಿ. ವಿಡಿಯೋ ಮಾಡ್ತಾ ಮಾಡ್ತಾ ನಾನು ವಿಡಿಯೋ ಕೋರಿಯೋಗ್ರಫಿ ಹಾಗೂ ಕ್ರಿಯೇಟಿವ್ ವಿಡಿಯೋಗ್ರಾಫಿಯನ್ನು ಕಲಿತಿದ್ದೇನೆ. ಮದುವೆ,ಎಂಗೇಜ್ಮೆಂಟ್, ಹಳದಿ, ಸಂಗೀತದಂತ ಯಾವುದೇ ಸ್ಪೇಷಲ್ ಡೇ ಇರಲಿ, ನಾನು ನನ್ನ ಟೀಂ ಜೊತೆ ಬ್ಯೂಟಿಫುಲ್ ಕಾನ್ಸೆಪ್ಟ್ ಹಿಡಿದು ನಿಮ್ಮ ಬಳಿ ಬರಲು ಸಿದ್ಧನಿದ್ದೇನೆ. ನಿಮ್ಮ ದಿನವನ್ನು ಇನ್ನಷ್ಟು ವಿಶೇಷಗೊಳಿಸೋಕೆ ನನ್ನನ್ನು ಸಂಪರ್ಕಿಸಬಹುದು. ನೀವು ನನ್ನನ್ನು ಡಿಎಂ ಮಾಡ್ಬಬುದು ಅಥವಾ ನಮ್ಮ ವಿಡಿಯೋಗ್ರಾಫಿ ಪೇಜ್ ಗೆ ಡಿಎಂ ಮಾಡಿ, ಇಲ್ಲವೆ ಇಲ್ಲಿ ನೀಡಿರುವ ನಂಬರ್ ಗೆ ಫೋನ್ ಮಾಡಿ ಎಂದು ಕಿಶನ್ ಹೇಳಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ಗೆ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು.. ಅದಕ್ಕೇ ಹಾಗೆ ಹೇಳಿದ್ರಾ..?

ಸ್ಪೇಷಲ್ ಡೇ ಸದಾ ನೆನಪಿನಲ್ಲಿ ಇರಬೇಕು, ಡಿಫರೆಂಟ್ ಕಾನ್ಸೆಫ್ಟ್ ಜೊತೆ ಬ್ಯೂಟಿಫುಲ್ ವಿಡಿಯೋ ನಿಮ್ಮ ಕೈ ಸೇರಬೇಕು ಅಂದ್ರೆ ಕಿಶನ್ ಅಥವಾ ಅವರ ಟೀಂ ಸಂಪರ್ಕಿಸಹುದು. ಕಿಶನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವುದಲ್ಲದೆ ಬುಕ್ ಮಾಡಿ ಅಂತ +91 9900112191 ನಂಬರ್ ನೀಡಿದ್ದಾರೆ. 

ಈ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಸೀರಿಯಲ್ ಕಲಾವಿದರು ಕಿಶನ್ ಬೆನ್ನು ತಟ್ಟಿದ್ದಾರೆ. ಒಳ್ಳೆಯ ಐಡಿಯಾ, ಒಳ್ಳೆಯದಾಗಲಿ. ನೀವು ಅದ್ಭುತವಾಗಿ ಡೈರೆಕ್ಟ್ ಮಾಡ್ತೀರಿ, ಶುಭವಾಗಲಿ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ವೆಡ್ಡಿಂಗ್ ಶೂಟಿಂಗ್ ನಲ್ಲಿ ನೀವು ಮಾಸ್ಟರ್ , ನಿಮ್ಮ ಕಲೆ ಅದ್ಭುತವಾಗಿದೆ ಎಂದಿದ್ದಾರೆ. ಮತ್ತೆ ಕೆಲವರು ನೀವು ಗುಡ್ ನ್ಯೂಸ್ ನೀಡಲು ಬಂದಿದ್ದೀರಿ ಅಂದುಕೊಂಡಿದ್ವಿ. ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ್ದಾರೆ. 

ಮುಖಕ್ಕೆ ಹೊಡೀತೀನಿ ಇದು ನಾನು ಕೊಡ್ತಿರೋ ವಾರ್ನಿಂಗ್; ಶಿಶಿರ್‌-ಐಶ್ವರ್ಯಗೆ ವಾರ್ನಿಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್

ಕಿಶನ್ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿದ್ದರು. ಅವರು ಹಿಂದಿ ಡಾನ್ಸ್ ರಿಯಾಲಿಟಿ ಶೋ ವಿಜೇತರಾಗಿದ್ದು, ಕನ್ನಡದಲ್ಲೂ ಅನೇಕ ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಶನ್, ಅನೇಕ ನಟಿಯರ ಜೊತೆ ವಿಡಿಯೋ ಮಾಡ್ತಿದ್ದು, ಎರಡು ದಿನಗಳ ಹಿಂದಷ್ಟೆ ಲಕ್ಷ್ಮಿ ಭಾರಮ್ಮ ಖ್ಯಾತಿಯ ಕೀರ್ತಿ ಅಲಿಯಾಸ್ ತನ್ವಿ ರಾವ್ ಜೊತೆ ಡಾನ್ಸ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಹೋಳಿ ಸಂದರ್ಭದಲ್ಲಿ ಈ ಡಾನ್ಸ್ ಶೂಟ್ ಆಗಿದ್ದು, ಈ ಜೋಡಿಯನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. 

View post on Instagram