ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಮಲ್ಲಮ್ಮ, ಬಿಗ್ ಬಾಸ್ ಮನೆಯಲ್ಲಿ ನಡೆದ ಅನೇಕ ಸಂಗತಿಗಳನ್ನು ಎಲ್ಲರ ಮುಂದಿಟ್ಟಿದ್ದಾರೆ. ರೆಸಾರ್ಟ್ ನಲ್ಲಿ ಏನಾಯ್ತು, ಯಾರ ಫೋನ್ ನಂಬರ್ ತಂದಿದ್ದೇನೆ, ಎಲ್ಲಿಗೆ ಹೋಗ್ಬೇಕು ಎಂಬುದನ್ನು ಮಲ್ಲಮ್ಮ ಹೇಳಿದ್ದಾರೆ.

ಬಿಗ್ ಬಾಸ್ (Bigg Boss) ಮನೆಯಿಂದ ಮಲ್ಲಮ್ಮ ಹೊರಗೆ ಬಿದ್ದಿದ್ದಾರೆ. ಮಲ್ಲಮ್ಮ (Mallamma) ಅವ್ರನ್ನು ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಮಿಸ್ ಮಾಡಿಕೊಳ್ತಿದ್ದಾರೆ. ಮಲ್ಲಮ್ಮ ಇಲ್ದೆ ಮನೆ ಬಿಕೋ ಎನ್ನುತ್ತಿದೆ ಅಂತ ರಕ್ಷಿತಾ ಹೇಳಿದ್ದಾರೆ. ಮನೆಯಿಂದ ಹೊರಗೆ ಬಂದ ಮಲ್ಲಮ್ಮ ತಮ್ಮ ಕೆಲ್ಸದಲ್ಲಿ ಬ್ಯುಸಿಯಾಗಿದ್ದಾರೆ. ಮಲ್ಲಮ್ಮ ಟಾಕ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಮಲ್ಲಮ್ಮ, ಬಿಗ್ ಬಾಸ್ ಮನೆಯ ಅನೇಕ ವಿಷ್ಯಗಳನ್ನು ಹೊರ ಹಾಕಿದ್ದಾರೆ. ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದಾಗ ಎಲ್ಲಿದ್ರು, ಅಲ್ಲಿ ಏನಾಯ್ತು? ಮಲ್ಲಮ್ಮಗೆ ಯಾವ ಸ್ಪರ್ಧಿ ಫೋನ್ ನಂಬರ್ ನೀಡಿದ್ದಾರೆ ಎಲ್ಲ ವಿಷ್ಯವನ್ನು ಮಲ್ಲಮ್ಮ, ನಟ ಮನೋಜ್ ಜೊತೆ ಹಂಚಿಕೊಂಡಿದ್ದಾರೆ.

ರೆಸಾರ್ಟ್ ನಲ್ಲಿ ಯಾರ ಜೊತೆ ರೂಮ್ ಶೇರ್ ಮಾಡ್ಕೊಂಡಿದ್ರು ಮಲ್ಲಮ್ಮ ? : 

ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ವಿಶೇಷ ಸ್ಪರ್ಧಿ ಅಂದ್ರೆ ಮಲ್ಲಮ್ಮ. ಸೋಶಿಯಲ್ ಮೀಡಿಯಾ ಮೂಲಕ ಲಕ್ಷಾಂತರ ಜನರಿಗೆ ಹತ್ತಿರವಾಗಿದ್ದ ಮಲ್ಲಮ್ಮ, ಬಿಗ್ ಬಾಸ್ ಗೆ ಮನೆಗೆ ಬರ್ತಿದ್ದಂತೆ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾದ್ರು. ಬಿಗ್ ಬಾಸ್ ಮನೆಯಲ್ಲಿ ಎಲ್ಲ ಆಟಗಳನ್ನು ಆಡ್ತಿದ್ದ ಮಲ್ಲಮ್ಮ, ಸ್ಪರ್ಧಿಗಳಿಗೆ ಅಮ್ಮನಾಗಿದ್ರು. ಬಿಗ್ ಬಾಸ್ ಶೋ ಶುರುವಾಗಿ ಒಂದು ವಾರ ಆಗ್ತಿದ್ದಂತೆ ಬಿಗ್ ಬಾಸ್ ಮನೆಗೆ ಶಾಕಿಂಗ್ ನ್ಯೂಸ್ ಸಿಕ್ಕಿತ್ತು. ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಈ ವೇಳೆ ಸ್ಪರ್ಧಿಗಳು ಏನು ಮಾಡಿದ್ರು ಎಂಬುದನ್ನು ಮಲ್ಲಮ್ಮ ಹೇಳಿದ್ದಾರೆ. ಮಲ್ಲಮ್ಮ, ಎಲ್ಲ ಸ್ಪರ್ಧಿಗಳ ಜೊತೆ ರೆಸಾರ್ಟ್ಗೆ ಹೋದ್ರಂತೆ. ಮನೆಯಿಂದ ಹೊರಗೆ ಹಾಕ್ತಿದ್ದಂತೆ ಪೊಲೀಸ್ ಜೊತೆ ಮಾತನಾಡಿದ್ದ ಮಲ್ಲಮ್ಮ, ನಾವೆಲ್ಲ ಗೆಲ್ಲುವ ಆಸೆಯೊಂದಿಗೆ ಬಂದಿದ್ದೇವೆ. ಏನಾಯ್ತು ಅಂತ ಕೇಳಿದ್ದರಂತೆ. 

Karna: ಮಧ್ಯರಾತ್ರಿ ಹೆದರಿದ ನಿತ್ಯಾಳ ಸಮಾಧಾನಕ್ಕೆ ಕೋಣೆಗೆ ಕರ್ಣ ಬಂದಾಗ ನಡೆದದ್ದೇ ಬೇರೆ! ಅಲ್ಲಿ ಆಗಿದ್ದೇನು?

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಬೆಡ್ ಹಂಚಿಕೊಂಡಿದ್ದ ಮಲ್ಲಮ್ಮ, ರೆಸಾರ್ಟ್ ನಲ್ಲೂ ಅವರ ಜೊತೆಗಿದ್ದರಂತೆ. ನಮ್ಮಿಬ್ಬರ ಜೊತೆ ಕಲರ್ಸ್ ಕನ್ನಡದ ಸಿಬ್ಬಂದಿ ಒಬ್ರಿದ್ರು. ನಾವು ಮೂರು ಜನ ಒಂದು ರೂಮಿನಲ್ಲಿದ್ವಿ. ಆದ್ರೆ ಸಿಬ್ಬಂದಿ ಜೊತೆ ಏನೂ ಮಾತನಾಡಿಲ್ಲ ಅಂತ ಮಲ್ಲಮ್ಮ ಹೇಳಿದ್ದಾರೆ. ಅಷ್ಟೇ ಅಲ್ಲ, ರಕ್ಷಿತಾ ಫೋನ್ ನಂಬರ್ ನೀಡಿದ್ದು, ಬಿಗ್ ಬಾಸ್ ಮುಗಿಯುತ್ತಿದ್ದಂತ ೆ ಅವ್ರ ಮನೆ ಮಂಗಳೂರಿಗೆ ಹೋಗೋಣ ಅಂತ ಮಲ್ಲಮ್ಮ ಪ್ಲಾನ್ ಮಾಡಿದ್ದಾರೆ. ರಕ್ಷಿತಾ ನೀಡಿದ ಪೋನ್ ನಂಬರನ್ನು ಮಾಸ್ಕ್ ಮೇಲೆ ಬರೆದುಕೊಂಡು ಬಂದಿದ್ದಾರೆ ಮಲ್ಲಮ್ಮ.

ತಪ್ಪು ಸುದ್ದಿಯೇ ಮಲ್ಲಮ್ಮಗೆ ಮುಳುವಾಯ್ತಾ? : 

ಮಲ್ಲಮ್ಮ ಸೊಸೆಗೆ ಮಗುವಾಗಿದೆ, ಹಾಗಾಗಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿಯೊಂದು ಹರಡಿತ್ತು. ಮಲ್ಲಮ್ಮ ಮನೆಯಲ್ಲಿರುವಾಗ್ಲೇ ಈ ಸುದ್ದಿ ಹಬ್ಬಿದ್ದರಿಂದ ಅವರಿಗೆ ವೋಟಿಂಗ್ ಕಡಿಮೆ ಆಯ್ತು, ಅವರು ಮನೆಯಿಂದ ಹೊರಗೆ ಬಂದ್ರು ಅಂತ ಮಲ್ಲಮ್ಮ ಅವ್ರನ್ನು ಪ್ರೀತಿಯಿಂದ ನೋಡಿಕೊಳ್ತಿರುವ ಮನೋಜ್ ಗೆಸ್ ಮಾಡಿದ್ದಾರೆ. ಇದನ್ನು ಮಲ್ಲಮ್ಮ ಕೂಡ ಒಪ್ಪಿಕೊಂಡಿದ್ದಾರೆ.

Brahmagantu ಬಿಟ್ಟು 'ನಾ ನಿನ್ನ ಬಿಡಲಾರೆ'ಗೆ ಎಂಟ್ರಿ ಕೊಟ್ಟ ದೀಪಾ-ಚಿರು: ಊಹಿಸಲಾಗದ ಪವಾಡ ನಡೆದೇ ಹೋಯ್ತು!

ಆರಂಭದ ಎರಡು ವಾರ ಅಧ್ಬುತವಾಗಿ ಆಟ ಪ್ರದರ್ಶನ ಮಾಡಿದ್ದ ಮಲ್ಲಮ್ಮ ನಂತ್ರ ಸೈಲೆಂಟ್ ಆಗಿದ್ರು. ಅಮ್ಮನ ಸ್ಥಾನ ನೀಡಿ ಸ್ಪರ್ಧಿಗಳೂ ಹೆಚ್ಚು ಕೆಲ್ಸವನ್ನು ಅವರಿಗೆ ನೀಡಲಿಲ್ಲ. ಕಿಚ್ಚ ಸುದೀಪ್ ಈ ಬಗ್ಗೆ ವಾರ್ನ್ ನೀಡಿದ ನಂತ್ರವೂ ಮಲ್ಲಮ್ಮ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಬಿಗ್ ಬಾಸ್ ನಲ್ಲಿ ಸದ್ಯ ಆಟ ಮುಗಿಸಿರುವ ಮಲ್ಲಮ್ಮ, ವಾಪಸ್ ಕಳಿಸಿದ್ರೆ ಹೋಗ್ತೇನೆ ಎನ್ನುತ್ತಿದ್ದಾರೆ.YouTube video player