ಕೊರೋನಾ ಪಾಸಿಟಿವ್ ಬಂದ ಕಾರಣ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ ಆಸ್ಪತ್ರೆಯ ದುಸ್ಥಿತಿ ಬಗ್ಗೆ ಕಿಡಿಕಾಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ರಂಗಭೂಮಿ ಕಲಾವಿದೆ, ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ ಮೂರ್ನಾಲ್ಕು ದಿನಗಳ ಹಿಂದೆ ಮೈ-ಕೈ ನೋವು ಕಾಣಿಸಿಕೊಂಡ ಕಾರಣ ವೈದ್ಯರ ಸಲಹೆಯಿಂದ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕೋವಿಡ್19 ಪಾಸಿಟಿವ್ ಎಂದು ತಿಳಿದು ಬಂದ ಕಾರಣ ಬೆಂಗಳೂರಿನ ಪ್ರತಿಪ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ಆದರೆ ಅಲ್ಲಿನ ಹದಗೆಟ್ಟ ಪರಿಸ್ಥಿತಿ ನೋಡಿ, ಮಮ್ಮುಲ ಮರುಗಿದ್ದಾರೆ. ಜಂಘಾಬಲವೇ ಕುಗ್ಗಿದೆ ಎಂದು ಬರೆದು ಕೊಂಡಿದ್ದಾರೆ.

ಜನಪ್ರತಿನಿಧಿಗಳ ಮನೆಯವರಿಗೂ ಸರ್ಕಾರದ ಹಣದಲ್ಲಿ ಚಿಕಿತ್ಸೆ: ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ 

ಆಸ್ಪತ್ರೆ ಪರಿಸ್ಥಿತಿ ಹೇಗಿದೆ?
'3 ದಿನದ ಸೆರೆವಾಸ, ನರಕಯಾತನೆಯಿಂದ ಅಂತೂ ಆಚೆ ಬಂದು ಸದ್ಯ Home Isolation ನಲ್ಲಿದ್ದೇನೆ... ಈ ದಿನಗಳಲ್ಲಿ ನಾನು ಮಾನಸಿಕವಾಗಿ ಹೆಚ್ಚು ಕುಗ್ಗಿದ್ದಂತೂ ಸುಳ್ಳಲ್ಲ ! ಇಲ್ಲಿ ಹೋದ್ರೆ ರೋಗ ಹೋಗುತ್ತಾ or ಬರುತ್ತೋ ನೀವೇ ಹೇಳಿ?

ಕೋವಿಡ್ ಕರ್ಮಕಾಂಡ :- ಮಾನಸಿಕವಾಗಿಯೂ ಇಲ್ಲಿ ನೆಮ್ಮದಿ ಇಲ್ಲ. ಇದು ಕೋವಿಡ್ ಮುಕ್ತ ಮಾಡುವ BGS ಆಸ್ಪತ್ರೆಯ ವಾರ್ಡ್...ಈ ವ್ಯವಸ್ಥೆಯ ಬಗ್ಗೆ ಗೊತ್ತಿಲ್ಲದೇ lock ಆಗುವ ರೋಗಿಗಳು ಇದರಿಂದ ಹೊರಬರಲು ಒದ್ದಾಡುವ ಪರಿ ನಿಜಕ್ಕೂ ರೋಚಕ! free ಅಂತ ಇದ್ರೂ ದುಡ್ಡು ಕಟ್ಟಿಸಿಕ್ಕೊಂಡೇ ಆಚೆ ಬಿಟ್ಟಿದ್ದು.. ಇನ್ನೂ treatment ಬಗ್ಗೆ ಏನ್ ಹೇಳಲಿ? Rural areaನಲ್ಲೇ ಹೆಚ್ಚು ಸೌಲಭ್ಯವಿದೆಯೆಂದು ಕೇಳಿದ್ದೇನೆ. ಆದರೆ ರಾಜಧಾನಿಯಲ್ಲಿ ಹೀಗೆ... ದಯಮಾಡಿ ಆಸ್ಪತ್ರೆ ಸೇರುವ ಮುನ್ನಾ ಯೋಚಿಸಿ..ಸಂಪೂರ್ಣ ಚೇತರಿಸಿಕೊಂಡ ನಂತರ ವಿವರವಾಗಿ ತಿಳಿಸುವೆ,' ಫೋಟೋ ಜೊತೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

View post on Instagram

ಟಿಎಸ್‌ ಸೀತಾರಾಮ್‌, ಮಂಡ್ಯ ರಮೇಶ್ ಸಮಾಧಾನದ ಮಾತು:
ಆಸ್ಪತ್ರೆ ಪರಿಸ್ಥಿತಿ ಹಾಗೂ ಬೇಸರ ವ್ಯಕ್ತ ಪಡಿಸಿರುವ ಪೋಸ್ಟ್‌ಗೆ ಸೀತಾರಾಮ್‌ ಪ್ರತಿಕ್ರಯಿಸಿದ್ದಾರೆ. 'ಹೋಗಲಿ ಬಿಡಿ ಮುಗಿಯಿತಲ್ಲ. ಕುವೆಂಪುರವರ ಮಲೆನಾಡಿನ ಚಿತ್ರಗಳು, ಗೊರೂರು ಅವರ ನಮ್ಮ ಊರಿನ ರಸಿಕರು, ಬೀಚಿಯವರ ಅಥವಾ ಪಿಜಿ ವುಡ್‌ಹೌಸ್‌ ಪುಸ್ತಕಗಳನ್ನು ಓದಿ. ಮನಸ್ಸಿಗೆ ಉಲ್ಲಾಸ ತಂದು ಕೊಡುವ ಎಲ್ಲಾ ಬರಹಗಳನ್ನು ಓದಿರಿ,' ಎಂದು ಸಲಹೆ ನೀಡಿದ್ದಾರೆ.

ಕೊರೋನಾ ಟೈಮಲ್ಲಿ ಬಿಗ್‌ ಬಾಸ್‌ ಹುಡ್ಗಿ ಯೋಗ ಕ್ಲಾಸ್‌!

'ಗುಣಮುಖರಾದ ಮೇಲೂ ಕೊಂಚ ಕಾಲ ವಿಶ್ರಾಂತಿ ಮಾಡಿ. ಆಮೇಲೆ ಕೆಲಸ ಮುಂದುವರಿಸಿ' ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.