ಕನ್ನಡತಿ ಧಾರವಾಹಿಯಲ್ಲಿ ವರುಧಿನಿಯನ್ನು ಜೈಲಿನಿಂದ ಹೊರಗೆ ತರೋಕೆ ಹರ್ಷ ಮತ್ತು ಭುವಿ ಕಷ್ಟ ಪಡುತ್ತಿರುವಾಗಲೇ ಇತ್ತ ಸಾನ್ಯಾಗೆ ತಲೆನೋವು ಶುರುವಾಗಿದೆ. ವರುಧಿನಿಗೆ ಜಾಮೀನು ಸಿಕ್ಕರೆ ತಾನು ಒಳಗೆ ಹೋಗೋದು ಪಕ್ಕಾ ಎಂದು ತಿಳ್ಕೊಂಡಿರೋ ಸಾನ್ಯಾ ಪತ್ರಕರ್ತೆ ಪೂಜಾಳ ಮೇಲೆ ತನ್ನ ಪ್ರಭಾವ ನಡೆಸಲು ಪ್ರಯತ್ನಿಸುತ್ತಿದ್ದಾಳೆ.

ಈ ನಡುವೆ ಭುವಿ ಪತ್ರಕರ್ತೆಯನ್ನು ಭೇಟಿಯಾಗಿ ವರುಧಿನಿ ಪರ ಸಾಕ್ಷಿ ಹೇಳಲು ಮನವೊಲಿಸಿದ್ದೂ ಅಲ್ಲದೆ, ಇನ್ನೇನು ಎಲ್ಲವೂ ಸರಿಯಾಗುತ್ತೆ ಎನ್ನುವುದರಲ್ಲಿದೆ. ಆದರೆ ಅಷ್ಟರಲ್ಲೇ ಪೂಜಾಗೆ ಆಕ್ಸಿಡೆಂಡ್ ಆಗುತ್ತಾ..?

ಸೀನ್‌ಗೋಸ್ಕರ ಕ್ಯಾರೆಟ್ ಹಲ್ವಾ ರೆಡಿ ಮಾಡಿದ್ರು ಕನ್ನಡತಿ ಕಲಾವಿದರು

ಪವರ್, ಅಧಿಕಾರ ಬೇಕು, ಎಂಡಿ ಆಗಬೇಕೆಂಬ ಸಾನ್ಯಾ ಕನಸು ಪತ್ರಕರ್ತೆಯನ್ನು ಬಲಿ ತೆಗೆದುಕೊಳ್ಳುತ್ತಾ..? ಸಾಕ್ಷಿ ನಾಶ ಮಾಡಿ ತಾನು ಸೇಫ್ ಆಗೋಕೆ ಪೂಜಾಳನ್ನು ಕೊಂದೇ ಬಿಡ್ತಾಳಾ ಸಾನ್ಯಾ..?

ರಸ್ತೆಯಲ್ಲಿ ಹೋಗುತ್ತಿರುವ ಪೂಜಾಳ ಸ್ಕೂಟಿಗೆ ಕಾರಿನಲ್ಲಿ ಬರೋ ಸಾನ್ಯಾ ಬೇಕೆಂದೇ ಹಿಂಬದಿಯಿಂದ ಗುದ್ದುತ್ತಾಳೆ. ರಭಸದಲ್ಲಿ ರಸ್ತೆಗೆ ಬೀಳೋ ಪೂಜಾ ಬದುಕುತ್ತಾಳಾ..? ವರುಧಿನಿ ಪರ ಸಾಕ್ಷಿ ನುಡಿಯುತ್ತಾಳಾ..? ಹರ್ಷ ಭುವಿ ಪ್ರಯತ್ನದಲ್ಲಿ ಜೈಲಿಂದ ಹೊರ ಬರುತ್ತಾಳಾ ವರುಧಿನಿ..? ಕನ್ನಡತಿಯಲ್ಲಿ ಬರಲಿದೆ ಬಿಗ್ ಟ್ವಿಸ್ಟ್