Asianet Suvarna News Asianet Suvarna News

ಈ ಜೋಡಿಯನ್ನು ಬೇರೆ ಮಾಡ್ತಿದ್ದೀರಾ? ದೇವ್ರು ಮೆಚ್ತಾನಾ ನಿಮ್ಮನ್ನು ಡೈರೆಕ್ಟರ್​ ಸಾಹೇಬ್ರೆ? ಫ್ಯಾನ್ಸ್​ ಅಸಮಾಧಾನ

ಭೂಮಿಕಾ ಮತ್ತು ಗೌತಮ್​ ಪ್ರತ್ಯೇಕವಾಗಿ ಉಳಿಯುವ ಟೈಂ ಬಂದಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ. 
 

Bhoomika and Gautham of amrutadhare to stay separate due to Ashadha maasa suc
Author
First Published Jul 7, 2024, 4:23 PM IST

ಭೂಮಿಕಾ ಮತ್ತು ಗೌತಮ್​ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಸದಾ ಬಿಜಿನೆಸ್​, ಸಂಪಾದನೆ, ಮನೆಯವರ ಖುಷಿ ಎಂದಷ್ಟೇ ಒಂದಷ್ಟು ಗೋಡೆಗಳನ್ನು ಕಟ್ಟಿಕೊಂಡು ಬದುಕುತ್ತಿದ್ದ ಗೌತಮ್​ಗೆ ಪ್ರೀತಿ ಎಂದರೇನು ಎಂದು ಹೇಳಿಕೊಟ್ಟಿದ್ದಾಳೆ ಭೂಮಿಕಾ. ಪ್ರೀತಿ ಎಂದರೆ ಏನು ಎಂಬುದರ ಅರಿವೇ ಇಲ್ಲದಿದ್ದ ಗೌತಮ್​ ಈಗ ಪತ್ನಿಯನ್ನು ಒಂದು ಕ್ಷಣವೂ ಬಿಟ್ಟಿರಲಾರ. ಇದಾಲೇ ತನ್ನ ಮೊದಲ ಸಂಬಳದಲ್ಲಿ ಭೂಮಿಕಾ ಗೌತಮ್​ನನ್ನು ಡೇಟಿಂಗ್​ಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಪುಟ್ಟಕ್ಕನ ಮಗಳು ಸಹನಾ ಡಾಬಾದಲ್ಲಿ ತಿಂದೂ ಆಗಿದೆ. ಕೋಟಿ ಕೋಟಿ ಎಂದರೂ ಲೆಕ್ಕಕ್ಕೇ ಇಲ್ಲದ ಆಗರ್ಭ ಶ್ರೀಮಂತರ ಮನೆಯ ಸೊಸೆಯಾಗಿರುವ ಸ್ವಾಭಿಮಾನಿ ಭೂಮಿಕಾ ಆಗರ್ಭ ಶ್ರೀಮಂತ ಗಂಡನಿಗೆ ಮಿಡ್ಲ್​ಕ್ಲಾಸ್​ ಫ್ಯಾಮಿಲಿಯ ಖುಷಿಯನ್ನೂ ತೋರಿಸಿದ್ದಾಳೆ.  ತಾನೊಬ್ಬ ಆಗರ್ಭ ಶ್ರೀಮಂತ ಎನ್ನುವುದನ್ನು ಮರೆತು, ತನ್ನೊಳಗೊಬ್ಬ ಮಗು ಇದ್ದಾನೆ ಎನ್ನುವುದನ್ನು ಆಗಲೇ ಅರಿತಿದ್ದಾನೆ ಗೌತಮ್​. ದುಡಿಮೆ, ದುಡ್ಡು ಸಂಪಾದನೆ, ಮೀಟಿಂಗು, ಬಿಜಿಸನು ಎಂದು 24 ಗಂಟೆ ವರ್ಕೋಹಾಲಿಕ್​ ಆಗಿರುವ ಗೌತಮ್​ಗೆ ಈಗ ನಿಜವಾದ ಜೀವನದ ಅರಿವು ಮೂಡಿಸುತ್ತಿದ್ದಾಳೆ ಭೂಮಿಕಾ. ಇವನು ದುಡಿದರೆ, ಮಜಾ ಮಾಡುತ್ತಿದ್ದ ಕುಟುಂಬದವರನ್ನು ಟೈಟ್​ ಮಾಡಿದ್ದಾಳೆ ಭೂಮಿ ಮಿಸ್ಸು. ಇದೀಗ ಮೊದಲ ಸಂಬಳದಲ್ಲಿ ಡೇಟಿಂಗ್​ಗೆ ಕರೆದುಕೊಂಡು ಹೋಗಿ ಡುಮ್ಮಾ ಸರ್​ ಅನ್ನೇ ಬೋಲ್ಡ್​ ಮಾಡಿಬಿಟ್ಟಿದ್ದಾಳೆ!

 ಇದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್​ ಕಥೆ. ಅಮೃತಧಾರೆ ಈ ಹೆಸರು ಕೇಳಿದರೆ ಸೀರಿಯಲ್​ ವೀಕ್ಷಕರಿಗೆ ಅದೇನೋ ಒಂಥರಾ ರೋಮಾಂಚನ ಆಗುವುದು ಇದೆ. ಕಾರಣ, ಮಧ್ಯ ವಯಸ್ಕರಾಗಿರುವ ಇಬ್ಬರ ನಡುವಿನ ಅಪರೂಪದ ಪ್ರೇಮ ಕಥೆ ಇದು. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ ಹಲವು ಸೀರಿಯಲ್​ಗಳಿಗಿಂತಲೂ ಭಿನ್ನವಾಗಿರುವ ಕಾರಣ, ಇದನ್ನು ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಸೀರಿಯಲ್​ ಆಗಿದೆ. ಸದ್ಯ ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತಿರುವ ಸೀರಿಯಲ್​ಗಳ ಪೈಕಿ ಜೀ ಕನ್ನಡದ ಅಮೃತಧಾರೆ ಅಗ್ರಸ್ಥಾನ ಪಡೆದಿದೆ. ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಅಳುಮುಂಜಿ ಮಹಿಳೆಯರು, ವಿಲನ್​ಗಳೇ ಭರ್ಜರಿ ಗೆಲುವು ಸಾಧಿಸುತ್ತಿರುವುದನ್ನು ನೋಡಿ ನೋಡಿ ಬೇಸತ್ತ ವೀಕ್ಷಕರಿಗೆ ಅಮೃತಧಾರೆ ನಿಜಕ್ಕೂ ಅಮೃತವನ್ನೇ ಉಣಬಡಿಸುತ್ತಿದೆ. ಇದಕ್ಕೆ ಕಾರಣ, ಎಲ್ಲಾ ಸೀರಿಯಲ್​ಗಳಂತೆ ಇಲ್ಲಿ ಲೇಡಿ ವಿಲನ್​ ಇದ್ದರೂ ಸದಾ ಇಲ್ಲಿ ವಿಲನ್​ ಸೋಲುತ್ತಿದ್ದಾಳೆ. ವಿಲನ್​ ಆಗಿರೋ ಶಕುಂತಲಾ ದೇವಿ ಇನ್ನೇನು ಕೆಟ್ಟದ್ದು ಮಾಡುತ್ತಾಳೋ ಎನ್ನುವಷ್ಟರಲ್ಲಿಯೇ ನಾಯಕಿ ಭೂಮಿಕಾ ಅವಳ ಎಲ್ಲಾ ಪ್ಲ್ಯಾನ್​ಗಳನ್ನು ಠುಸ್ ಮಾಡುವ ಕಾರಣ, ವೀಕ್ಷಕರಿಗೆ ಈ ಸೀರಿಯಲ್​ ವಿಭಿನ್ನವಾಗಿ ಕಾಣಿಸುತ್ತಿದೆ. ಅದರ ಜೊತೆ ಮಧ್ಯ ವಯಸ್ಸಿನಲ್ಲಿ ಮದುವೆಯಾದ ಜೋಡಿಯ ನವೀರಾದ ಪ್ರೇಮ ಕಥೆಯೂ ಇಷ್ಟವಾಗುತ್ತಿದೆ.

ರಿಯಲ್‌ ಮದ್ವೆಯಂತೆ ನಡೆಯುತ್ತಿದೆ ಸೀತಾ-ರಾಮ ಕಲ್ಯಾಣ: ಇಂಚಿಂಚು ಮಾಹಿತಿ ನೀಡಿದ ನಟಿ ವೈಷ್ಣವಿ

ಆದರೆ ಈಗ ಪತಿ-ಪತ್ನಿ ದೂರವಾಗುವ ಕಾಲ ಬಂದೇ ಬಿಟ್ಟಿದೆ. ಆಷಾಢ ಶುರುವಾಗಿದೆ. ಮೊದಲ ವರ್ಷದಲ್ಲಿ ಆಷಾಢದಲ್ಲಿ ಪತಿ-ಪತ್ನಿ ಒಟ್ಟಿಗೆ ಇರಬಾರದು ಎನ್ನುವ ಸಂಪ್ರದಾಯವಿದೆ. ಅದಕ್ಕಾಗಿ ಮನೆಮಗಳನ್ನು ತವರಿನವರು ಕರೆದುಕೊಂಡು ಹೋಗುತ್ತಾರೆ. ಈಗ ಭೂಮಿಕಾಳ ಅಮ್ಮ ಬಂದು ಭೂಮಿಕಾಳನ್ನು ಕರೆದುಕೊಂಡು ಹೋಗುತ್ತಿದ್ದಾಳೆ. ಗಂಡ-ಹೆಂಡತಿ ಇಬ್ಬರಿಗೂ ಅದೇನೋ ಸಂಕಟ. ಹೇಳಿಕೊಳ್ಳಲಾಗದ ನೋವು. ಬಾಯಿ ಬಿಟ್ಟು ಐ ಮಿಸ್​ ಯು ಎಂದು ಹೇಳುತ್ತಿದ್ದರೂ ಇಬ್ಬರಲ್ಲಿಯೂ ಆಗುತ್ತಿದೆ ನೋವು.

ಇದು ಅವರಿಬ್ಬರ ನೋವು ಮಾತ್ರವಲ್ಲ. ಸೀರಿಯಲ್​ ಪ್ರೇಮಿಗಳ ನೋವು ಕೂಡ. ಈ ಜೋಡಿಯನ್ನು ಮೆಚ್ಚಿಕೊಂಡಿರೋ ಸೀರಿಯಲ್​ ಪ್ರೇಮಿಗಳು ತುಂಬಾ ನೊಂದುಕೊಂಡಿದ್ದಾರೆ. ಹೀಗೆ ಮಾಡಬೇಡಿ ಎನ್ನುತ್ತಿದ್ದಾರೆ. ಇವರ ಪ್ರೇಮ ಈಗ ತಾನೇ ಶುರುವಾಗಿದೆ. ಈಗಲೇ ಜೋಡಿಯನ್ನು ಸೆಪೆರೇಟ್​  ಮಾಡಿದ್ರೆ ದೇವ್ರು ಮೆಚ್ಚಿಕೊಳ್ತಾನಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಭೂಮಿಕಾ ತವರಿಗೆ ಹೋದರೆ ಇಲ್ಲಿ ಅತ್ತೆ, ನಾದಿನಿ ಸೇರಿ ಮನೆಯನ್ನು ಹಾಳು ಮಾಡುತ್ತಾರೆ ಎಂದೆಲ್ಲಾ  ಹೇಳುತ್ತಿದ್ದಾರೆ. ಮುಂದೇನಾಗುತ್ತೋ ನೋಡಬೇಕಿದೆ. 

ಚೆಲುವಾದ ಗೊಂಬೆ... ಚಂದನದ ಮಾಜಿ ಗೊಂಬೆ... ಎನ್ನುತ್ತಲೇ ಹಿಂದೆ ಇರೋದು ಯಾರ ಕೈ ಕೇಳೋದಾ ನೆಟ್ಟಿಗರು?

Latest Videos
Follow Us:
Download App:
  • android
  • ios