ಭೋಜ್‌ಪುರಿ ಸಿನಿಮಾ ಹಾಗೂ ಅನೇಕ ಧಾರಾವಾಹಿಗಳಲ್ಲಿ  ಅಭಿನಯಿಸುತ್ತಿದ್ದ ನಟಿ ಅನುಪಮಾ ಪಾಠಕ್‌(40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆಗಸ್ಟ್‌ 2ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿದೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ಮತ್ತೊಬ್ಬ ಕಿರುತೆರೆ ನಟ ಸಮೀರ್‌ ಶರ್ಮಾ!

ಆತ್ಮಹತ್ಯೆಗೆ ಕಾರಣವೇನು?

ಆಗಸ್ಟ್‌ 2ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಟಿ ಅನುಪಮಾ ಫೇಸ್‌ಬುಕ್‌ ಲೈವ್‌ ಮಾಡಿದ್ದಾರೆ. 10 ನಿಮಿಷಗಳ ಕಾಲ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಜೀವನದ ಬಗ್ಗೆ ವೇದಾಂತ ಮಾತನಾಡಿದ್ದಾರೆ. ಆದರೆ ಈ ವಿಡಿಯೋ ನೋಡಿದ ಯಾರೊಬ್ಬರಿಗೂ  ಅನುಪಮಾ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎಂದು ಒಂದು ಸಣ್ಣ ಸುಳಿವು ಸಿಗದಿರುವುದು ವಿಷಾದದ ಸಂಗತಿಯಾಗಿದೆ. 

'ನೀವು ತೊಂದರೆಯಲ್ಲಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಾಗಿದೆ ಎಂದು ನಿಮ್ಮ ಸ್ನೇಹಿತರ ಬಳಿ ಕಷ್ಟ , ನೋವು ಹಂಚಿಕೊಂಡರೇ ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಅವರು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ ಎನ್ನುವ ಭಾವನೆಯಿಂದ ಅವರು ನಿಮಗೆ ಸಹಾಯ ಮಾಡುವ ಬದಲು ನಿಮ್ಮಿಂದ ದೂರ ಉಳಿಯುವ ಪ್ರಯತ್ನ ಮಾಡುತ್ತಾರೆ. ಅಷ್ಟೇ ಅಲ್ಲದೆ ನಿಮ್ಮ ಬಗ್ಗೆ ಎಲ್ಲರ ಎದುರು ಹೇಳಿ ಅವಮಾನ ಮಾಡುತ್ತಾರೆ.  ಯಾರ ಜೊತೆಗೂ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಡಿ' ಎಂದು ಲೈವ್‌ನಲ್ಲಿ ಮಾತನಾಡಿದ್ದಾರೆ. ಅನುಪಮಾ ಅನೇಕ ಬಾರಿ ಲೈವ್‌ ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ವಿಡಿಯ ಕೂಡ  ಅಂಥದೇ ಎಂದುಕೊಂಡು ಜನರು ಪೂರ್ತಿ ವಿಡಿಯೋ ವೀಕ್ಷಿಸಿಲ್ಲ ಎಂದು ಕೆಲ ವೆಬ್‌ಸೈಟ್‌ಗಳು ವರದಿ ಮಾಡಿವೆ. 

ನಟಿ ಮಯೂರಿ ಪತಿ ಆತ್ಮಹತ್ಯೆ: ಕಾರಣ ನಿಗೂಢ

ಡೆತ್‌ ನೋಟ್‌ನಲ್ಲಿ ಏನಿದೆ?

ಅನುಪಮಾ ಪಾಠಕ್ ಡೆತ್‌ ನೋಟ್‌ನಲ್ಲಿ ಒಬ್ಬ ವ್ಯಕ್ತಿಗೆ 10,000 ಹಣ ನೀಡಿದ್ದೆ ಅವರು ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎಂದು ಬರೆದಿದ್ದಾರೆ ಹಾಗೂ ಯಾರನ್ನು ನಂಬಬೇಡಿ. ಈ ಪಾಠವನ್ನು ನಾನು ಜೀವನದಲ್ಲಿ ಕಲಿತಿದ್ದೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ.

ಅಲ್ಲದೇ ಅನುಪಮಾ ಆಪ್ತತರೊಬ್ಬರಿಗೆ ತನ್ನ ದ್ವಿಚಕ್ರ ವಾಹನವನ್ನು ನೀಡಿದ್ದರು ಹಾಗೂ ಮತ್ತೊಬ್ಬರಿಗೆ ಹಣ ಸಹಾಯ ಮಾಡಿದ್ದರು. ಕೊರೋನಾ ಲಾಕ್‌ಡೌನ್‌ನಿಂದಾಗಿ ಅವಕಾಶವಿಲ್ಲದೆ ಅವರಿಗೇ ಕೈಯಲ್ಲಿ ಹಣವಿಲ್ಲದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

40 ವರ್ಷದ ಅನುಪಮಾ ಮೂಲತಃ ಪುಣೆಯವರಾಗಿದ್ದು ವೃತ್ತಿ ಜೀವನಕ್ಕಾಗಿ ಮುಂಬೈನ ಮಿರಾ ರೋಡ್‌ ರಸ್ತೆಯಲ್ಲಿರುವ ಮನೆಯಲ್ಲಿ ನೆಲೆಸಿದ್ದರು.  ಪೊಲೀಸರು ತನಿಖೆ ಆರಂಭಿಸಿ ಆತ್ಮಹತ್ಯೆಗೆ ಕಾರಣ ಕರ್ತರಾದವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ವಿಚಾರಣೆ  ಆರಂಭಿಸಿದ್ದಾರೆ ಎನ್ನಲಾಗಿದೆ.