ಚಿತ್ರೀಕರಣದ ಸೆಟ್​ಗಳು ನಟ-ನಟಿಯರಿಗೆ ಎರಡನೇ ಮನೆಯಂತೆ. ಸೀತಾರಾಮ ಧಾರಾವಾಹಿ ತಂಡವು ಸೆಟ್​ನಲ್ಲಿ ಬೇಲ್​ಪುರಿ ಮಾಡಿ ಸಂಭ್ರಮಿಸಿದೆ. ವಿಶಾಲವಾದ ಸೆಟ್​ನಲ್ಲಿ ಮನೆ, ಕೆಲಸದ ಸ್ಥಳಗಳನ್ನು ನಿರ್ಮಿಸಲಾಗಿದೆ. ವರ್ಷಗಟ್ಟಲೆ ಚಿತ್ರೀಕರಣ ನಡೆಯುವುದರಿಂದ ಸೆಟ್​ಗಳು ಮುಖ್ಯ ಪಾತ್ರ ವಹಿಸುತ್ತವೆ. ಕೆಲವು ಶಾಶ್ವತ, ಕೆಲವು ತಾತ್ಕಾಲಿಕ. ಬೆಂಗಳೂರಿನಲ್ಲಿ ಶೂಟಿಂಗ್ ಮನೆಗಳನ್ನು ಬಾಡಿಗೆಗೆ ನೀಡಲಾಗುತ್ತದೆ.

ಶೂಟಿಂಗ್​ ಸೆಟ್​ನಲ್ಲಿಯೇ ನಟ-ನಟಿಯರು ಹೆಚ್ಚು ಕಾಲ ಕಳೆಯುವ ಕಾರಣದಿಂದ ಒದೊಂದು ರೀತಿಯಲ್ಲಿ ಅವರಿಗೆ ಮತ್ತೊಂದು ಮನೆ ಇದ್ದಂತೆಯೇ ಎನ್ನಿಸಿಬಿಡುತ್ತದೆ. ಸಿನಿಮಾಗಳಲ್ಲಾದರೆ ಬೇರೆ ಬೇರೆ ಕಡೆ ಶೂಟಿಂಗ್​ ಮಾಡುತ್ತಾರೆ. ಆದರೆ ಸೀರಿಯಲ್​ಗಳಲ್ಲಿ ಹೆಚ್ಚಾಗಿ ಒಂದೇ ಮನೆಯಲ್ಲಿಯೇ ನಾಲ್ಕೈದು ವರ್ಷ ಕಳೆಯುವುದು ಇದೆ. ಶೂಟಿಂಗ್​ ಮಾಡುವುದಕ್ಕಾಗಿಯೇ ಶೂಟಿಂಗ್​ ಮನೆಗಳು ಕೂಡ ಸಾಕಷ್ಟು ಇವೆ. ಇಂಥ ಶೂಟಿಂಗ್​ ಸೆಟ್​ನಲ್ಲಿ ನಟ-ನಟಿಯರು ಶೂಟಿಂಗ್​ ಇಲ್ಲದ ಸಮಯದಲ್ಲಿ ಸಾಕಷ್ಟು ಎಂಜಾಯ್​ ಮಾಡುತ್ತಾರೆ.

ಇದೀಗ ಸೀತಾರಾಮ ಸೀರಿಯಲ್​ ತಂಡ ಬೇಲ್​ಪುರಿ ಮಾಡುವ ಮೂಲಕ ಸಕತ್​ ಎಂಜಾಯ್​ ಮಾಡಿದೆ. ಇದರ ವಿಡಿಯೋ ಅನ್ನು ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಶೇರ್​ ಮಾಡಿದ್ದಾರೆ. ಇದರಲ್ಲಿ ವೈಷ್ಣವಿ, ರಾಮ್​ ಪಾತ್ರಧಾರಿ ಗಗನ್​, ಅಶೋಕ್​ ಪಾತ್ರಧಾರಿ ಅಶೋಕ್​ ಸೇರಿದಂತೆ ಹಲವು ಕಲಾವಿದರನ್ನು ನೋಡಬಹುದಾಗಿದೆ. ಒಬ್ಬೊಬ್ಬರು ಒಂದೊಂದು ಪದಾರ್ಥ ತಂದು ಬೇಲ್​ಪುರಿ ರೆಡಿ ಮಾಡಿದ್ದಾರೆ. ಸಾಮಾನ್ಯವಾಗಿ ಹೊರಗಡೆಯ ತಿಂಡಿ ಸೇರುವುದಿಲ್ಲ. ಆ ಸಮಯದಲ್ಲಿ ಹೀಗೆ ಬೇಲ್​ಪುರಿ ಮಾಡಿ ತಿನ್ನುವುದಾಗಿ ವೈಷ್ಣವಿ ಗೌಡ ಹೇಳಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಸಕತ್​ ಎಂಜಾಯ್​ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್​

ಇನ್ನು ಸೀತಾರಾಮ ಸೀರಿಯಲ್​ ಶೂಟಿಂಗ್​ ಸೆಟ್​ ಕುರಿತು ಹೇಳುವುದಾದರೆ, ಈ ಬಗ್ಗೆ ವೈಷ್ಣವಿ ಗೌಡ ಅವರೇ ವಿವರಿಸಿದ್ದಾರೆ. ಸೀತಾ ರಾಮ ಶೂಟಿಂಗ್ ಸೆಟ್ ಹೆಚ್ಚು ವಿಸ್ತಾರವಾಗಿದೆ. ಕೆಲವು ಸೆಟ್​ಗಳು ಶಾಶ್ವತವಾಗಿ ಸೀರಿಯಲ್​ ಮುಗಿಯುವವರೆಗೆ ಇದ್ದರೆ, ಕೆಲವೊಂದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಆದರೆ ಪ್ರತಿಯೊಂದಕ್ಕೂ ಕಥೆಯ ಜೊತೆ ಲಿಂಕ್​ ಇರುತ್ತದೆ. ನಾಯಕ-ನಾಯಕಿಯ ಮನೆಗಳು, ಕೆಲಸದ ಸ್ಥಳ ಮತ್ತು ಸಾಮುದಾಯಿಕ ಪ್ರದೇಶ.. ಹೀಗೆ ಎಲ್ಲವನ್ನೂ ಇಲ್ಲಿ ಚಿತ್ರೀಕರಿಸಲಾಗುತ್ತದೆ. ವೇಷಭೂಷಣ ಚೇಂಜ್​ ಮಾಡಲು, ಮೇಕ್ಅಪ್ ಮತ್ತು ಹೇರ್ ಸ್ಟೈಲಿಂಗ್​ಗೆ ಅದರದ್ದೇ ಆದ ಸ್ಥಳಗಳಿವೆ. ಈ ಶೂಟಿಂಗ್​ ಸ್ಪಾಟ್​ನಲ್ಲಿಯೇ ನಟ-ನಟಿಯರು ಪೂರ್ವಾಭ್ಯಾಸ ಮಾಡುವುದರಿಂದ ಹಿಡಿದು, ತೆರೆ ಹಿಂದಿನ ಸಿಬ್ಬಂದಿ, ನಿರ್ದೇಶಕರು ನಿರ್ಮಾಣದ ಮೇಲ್ವಿಚಾರಣೆ ನೋಡಿಕೊಳ್ಳುವವರು ಪ್ರತಿಯೊಬ್ಬರಿಗೂ ಇದೊಂದು ರೀತಿಯಲ್ಲಿ ಎರಡನೆಯ ಮನೆಯೇ ಆಗಿರುತ್ತದೆ ಎಂದು ವೈಷ್ಣವಿ ಹೇಳಿದ್ದಾರೆ.

ಅಷ್ಟಕ್ಕೂ, ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್​ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್​ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ ಎಂದಿದ್ದಾರೆ ನಟಿ. 

ನೀನೇನೆ ನನ್ನವನು ಎಂದು ಬಾಯ್ಬಿಟ್ಟ ವೈಷ್ಣವಿ, ಎದೆ ಮೇಲೆ ಕಾಲಿಟ್ಟಂಗಾಯ್ತು ಎಂದ ಗಗನ್​!

YouTube video player