ನಮ್ಮ ಮೆಟ್ರೋ ರೈಲಿನಲ್ಲಿ ಕನ್ನಡ ಡಿಂಡಿಮ ಮೊಳಗಿಸಿದ ಹೆಮ್ಮೆಯ ಕನ್ನಡಿಗರು, ವೈರಲ್ ವಿಡಿಯೋ
ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರ ಗುಂಪೊಂದು 'ಬಾರಿಸು ಕನ್ನಡ ಡಿಂಡಿಮವ' ಹಾಡನ್ನು ಹಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಗಿಟಾರ್ ಮತ್ತು ಇತರ ಸಂಗೀತ ಸಲಕರಣೆ ಹಿಡಿದು ಗ್ರೂಪ್ ಒಂದು ಬಾರಿಸು ಕನ್ನಡ ಡಿಂಡಿಮವ ಹಾಡು ಹಾಡಿದ್ದು, ವೈರಲ್ ಆಗಿದೆ. ನಮ್ಮ ಮೆಟ್ರೋದಲ್ಲಿ ಕನ್ನಡಮಯ ಎಂದು ಶಿವಾನಂದ ಗುಂಡನವರ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕುವೆಂಪು ಅವರ ರಚನೆಯ ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ! ಹಾಡಿಗೆ 2015ರಲ್ಲಿ ಎಸ್.ವಿ.ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಆರ್.ಸುನಿಲ್ ನಿರ್ದೇಶನ ಮಾಡಿ ವಿಡಿಯೋ ಹಾಡು ಬಿಡುಗಡೆ ಮಾಡಿದ್ದರು. ಇದರಲ್ಲಿ ಗಾಯಕ ನವೀನ್ ಸಜ್ಜು, ಅನನ್ಯಾ ಭಟ್ ಸೇರಿ ಹಲವಾರು ಸಂಗೀತಗಾರರು ದನಿಯಾಗಿದ್ದರು. ಈ ವಿಡಿಯೋ 3 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ.
ಸೆಟ್‌ನಲ್ಲಿ ಪ್ರಭಾಸ್‌ರನ್ನ ಅನುಷ್ಕಾ ಶೆಟ್ಟಿ ಏನಂತ ಕರೀತಿದ್ರು? ನಟ ನಾಚಿ ನೀರಾಗುತ್ತಿದ್ದುದು ಏಕೆ?
ಈಗ ಇದೇ ಹಾಡನ್ನು ಮೆಟ್ರೋದಲ್ಲಿ ಹಾಡಲಾಗಿದೆ. ಪ್ರಯಾಣಿಕರು ಈ ಹಾಡನ್ನು ಕೇಳಿ ಕಿವಿ ತಂಪಾಗಿಸಿಕೊಂಡಿದ್ದಾರೆ. ಇನ್ನೇನು ಒಂದು ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವ ಬರುತ್ತಿದ್ದು, ಇವರ ಕನ್ನಡ ಅಭಿಮಾನಕ್ಕೆ ಫಿದಾ ಆಗಿದ್ದಾರೆ. ಒಟ್ಟು 32 ಸೆಕೆಂಡುಗಳ ವಿಡಿಯೋ ಇದಾಗಿದೆ. ಈ ವಿಡಿಯೋಗೆ ಹಲವಾರು ನೆಗೆಟಿವ್ ಮತ್ತು ಪಾಸಿಟಿವ್ ಕಮೆಂಟ್ ಗಳು ಬಂದಿದೆ.
ಬಿಗ್‌ಬಾಸ್ ಮನೆಯಲ್ಲಿ ಕಳ್ಳ, ಪೊಲೀಸ್, ಚಿನ್ನ, ಲಾಯರ್: ಈ ಸೀಸನ್ ಒಂದು ಸಿನಿಮಾ!
ಇದಕ್ಕೆ ಸುನೀಲ್ ಎಂಬುವವರು ಕಮಂಟ್ ಮಾಡಿ, ಕನ್ನಡವನ್ನು ಪ್ರಸಿದ್ಧಿಯಾಗಲು ಬಳಸುತ್ತಿದ್ದೇನೆ. ಇಂದು ನೂರಾರು ಕನ್ನಡ ಶಾಲೆಗಳಿಗೆ ಸರಿಯಾದ ಸೂರು ಮತ್ತು ಊಟವಿಲ್ಲ. ಅಲ್ಲಿ ಕನ್ನಡ ಪ್ರೀತಿಯನ್ನು ತೋರಿಸಬಹುದೇ? BMRCL ಅನ್ನು ದೆಹಲಿ ಮೆಟ್ರೋ ಆಗಿ ಪರಿವರ್ತಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.