ವೃತ್ತಿ ಜೀವನದಲ್ಲಿ ಎದುರಿಸಿದ ದೊಡ್ಡ ಚಾಲೆಂಜ್‌ಗಳ ಬಗ್ಗೆ ಹಾಗೂ ಅತಿ ಹೆಚ್ಚು ಭಯ ಪಡುವ ವಿಚಾರಗಳ ಬಗ್ಗೆ ಬಿಗ್ ಬಾಸ್ ಸ್ಪೆಷಲ್ ರಿಯಾಲಿಟಿ ಶೋನಲ್ಲಿ ಹಂಚಿಕೊಂಡ ನಿರೂಪಕ ನಿರಂಜನ್ ದೇಶಪಾಂಡೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ ಕೂಡ ಭಾಗಿಯಾಗಿದ್ದರು. ಈ ವೇಳೆ ಇಡೀ ಮನೆಯ ಸದಸ್ಯರು ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುವಾಗ ನಟಿ ಚಂದನಾ ಅನಂತಕೃಷ್ಣ ಕೇಳುವ ಒಂದು ಪ್ರಶ್ನೆಗೆ ಅಲ್ಲಿದ್ದ ಪ್ರತಿಯೊಬ್ಬರೂ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. 

'ನಾನು ಒಂದು ಪ್ರಶ್ನೆ ಕೇಳ್ತೀನಿ. ಎಲ್ಲರೂ ಉತ್ತರ ಕೊಡಬೇಕು. ನಿಮ್ಮ ಲೈಫ್‌ನಲ್ಲಿರುವ ಅತಿ ದೊಡ್ಡ ಫಿಯರ್ (ಭಯ) ಏನು?' ಎಂದು ಚಂದನಾ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ನಿರಂಜನ್ ಉತ್ತರಿಸುತ್ತಾರೆ. 'ನನ್ನ ಮೊದಲ ಭಯ ಏನೆಂದರೆ ಜೀವನದಲ್ಲಿ ಅವಕಾಶ ವಂಚಿತರಾಗುವುದು. ಟ್ಯಾಲೆಂಟ್ ಇದ್ದರೂ, ಏನೂ ಮಾಡಲಾಗದೇ ಅವಕಾಶವಿಲ್ಲದೆ ಇರುವುದು ನನ್ನ ಮೊದಲ ಭಯ. ಈ ಭಯವನ್ನು ಪ್ರತಿಯೊಬ್ಬ ಆರ್ಟಿಸ್ಟ್ ಸಹ ಎದುರಿಸುತ್ತಾನೆ. ಸಾಮರ್ಥ್ಯ ಇದ್ದರೂ ಎದುರಿಗಿರುವ ವ್ಯಕ್ತಿ ನಮ್ಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ನೋಡಲು ನೋವಾಗುತ್ತದೆ,' ಎಂದು ನಿರಂಜನ್ ಹೇಳುತ್ತಾರೆ. ನಿರಂಜನ್ ಮಾತುಗಳನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಾರೆ. ಅಲ್ಲದೇ ಸ್ವತಃ ಚಂದನಾ ಈ ಪರಿಸ್ಥಿತಿಯನ್ನು ಅನುಭವಿಸಿರುವೆ ಎಂದಿದ್ದಾರೆ. 

ಬೀದಿಯಲ್ಲಿ ಗಿಡಗಳನ್ನು ಮಾರುತ್ತಿದ್ದ 'ಗಿಣಿರಾಮ' ನಟಿ ನಯನ; ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟ!

'ನನ್ನಅರಸಿ ರಾಧೆ' ಧಾರಾವಾಹಿ ನಟ ಅಭಿನಂದನ್‌ ಆಪ್ತರನ್ನು ಕಳೆದುಕೊಳ್ಳುವ ಭಯ ನನಗಿದೆ. ಯಾವಾಗ ಯಾರನ್ನು ಕಳೆದುಕೊಳ್ಳುತ್ತೇವೋ, ಅವರಿಲ್ಲದೆ ಏನು ಮಾಡುವುದು ಎಂದು ತಿಳಿಯದ ಕ್ಷಣ ಇರುತ್ತೆ ಅಲ್ವಾ? ಅದು ನನ್ನ ಅತಿ ದೊಡ್ಡ ಫಿಯರ್ ಎಂದಿದ್ದಾರೆ. ಕನ್ನಡತಿ ನಟ ಕಿರಣ್ ರಾಜ್ Failure ನನ್ನ ದೊಡ್ಡ ಫಿಯರ್. ಮಾಡಲು ಶಕ್ತಿ ಇದ್ದರೂ ಮಾಡಲಾಗದೆ ಸೋತಾಗ ಭಯ ಆಗುತ್ತದೆ. ಫೇಲ್ಯೂರ್ ನನ್ನ ಮೊದಲ ಫಿಯರ್ ಎಂದಿದ್ದಾರೆ. ಗೀತಾ ಧಾರಾವಾಹಿ ನಟ ಧನುಷ್ 'ನಾಳೆ ಬೆಳಗ್ಗೆ ಎದ್ದಾಗ ಕೆಲಸ ಇರುತ್ತೆ, ಜೀವನ ನಡೆಯುತ್ತದೆ. ಮತ್ತೆ ಮಲಗುವಾಗ ನಾಳೆ ಹೇಗಪ್ಪಾ, ಏನ್ ಮಾಡೋದು? ಏನ್ ಕೆಲಸ ಹುಡುಕೋದು? ಅಂತ ಯೋಚನೆ ಬರುತ್ತದೆ, ಅದೇ ನನ್ನ ಫಿಯರ್,' ಎಂದಿದ್ದಾರೆ.