ಅಮೆರಿಕದ ಖ್ಯಾತ ಟಿವಿ ನಿರೂಪಕ ಟಾಮ್‌ ಕೆನಡಿ ಇತ್ತೀಚೆಗೆ ಕ್ಯಾಲಿಫೋರ್ನಿಯ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ.  'ಯು ಡೋಂಟ್ ಸೇ' ಹಾಗೂ  'ನೇಮ್‌ ದಟ್ ಟ್ಯೂನ್‌' ಎಂಬ ಕಾರ್ಯಕ್ರಮಕ್ಕೆ ಟಾಮ್‌ ಹೆಸರುವಾಸಿಯಾಗಿದ್ದರು.

ಖ್ಯಾತ ಸಂಗೀತ ನಿರ್ದೇಶಕ ರಾಜನ್‌ ವಿಧಿವಶ

ಕೆನಡಿ ಆಪ್ತ ಗೆಳೆಯ ಸ್ಟೀವ್ ಫೇಸ್‌ಬುಕ್‌ನಲ್ಲಿ ಟಾಪ್‌ ಇನ್ನಿಲ್ಲ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. 'ಕೆಲವು ತಿಂಗಳುಗಳಿಂದ ಟಾಮ್ ಆರೋಗ್ಯದಲ್ಲಿ ಏರು ಪೇರು ಕಾಣಿಸುತ್ತಿತ್ತು. ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಅವರ ಕುಟುಂಬಸ್ಥರ ಜೊತೆ ನೇರ ಸಂಪರ್ಕದಲ್ಲಿದ್ದೆ. ನಾನು ಅವರೊಟ್ಟಿಗೆ ಕಳೆದ ಕ್ಷಣಗಳನ್ನು ಎಂದೆಂದಿಗೂ ಸ್ಮರಿಸುತ್ತೇನೆ. ನನ್ನ ಬಾಲ್ಯದ ಐಕಾನ್‌ ಆಗಿ ನನ್ನ ಗೆಳೆಯನಾಗಿದ್ದ ಟಾಕ್‌,' ಎಂದು ಬರೆದುಕೊಂಡಿದ್ದಾರೆ.

ಟಾಮ್ ಹುಟ್ಟಿದ್ದು ಫೇಬ್ರವರಿ 26,1927ರಲ್ಲಿ. ಟಾಮ್ ಅಣ್ಣ ಜಾಕ್‌ ಕೂಡ ನಿರೂಪಕನಾಗಿದ್ದ ಕಾರಣ ಟಾಮ್‌ ಅದನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಈ ಅವಧಿಯಲ್ಲಿ ಹತ್ತು ವರ್ಷಗಳ ಕಾಲ ರೆಡಿಯೋ ಜಾಕಿಯಾಗಿದ್ದರು. ಹೈಸ್ಕೂಲ್ ಗೆಳತಿ ಬೀಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೂರು ದಶಕಗಳ ಕಾಲ ಗೇಮಿಂಗ್‌ ಶೋಗಳನ್ನು ನಿರೂಪಣೆ ಮಾಡಿದ್ದಾರೆ.  ಕುಟುಂಬದವರು ಹಾಗೂ ಮಾಧ್ಯಮ ಮಿತ್ರರನ್ನು ಅಗಲಿರುವ ಟಾಮ್ ಆತ್ಮಕ್ಕೆ ಶಾಂತಿ ಸಿಗಲಿ.