ಬಿಗ್ ಬಾಸ್ ಸೀಸನ್ 11ರಲ್ಲಿ ಜೊತೆಯಾಗಿ ಕಾಣಿಸಿಕೊಂಡು, ಇವತ್ತಿನವರೆಗೂ ಸದಾ ಜೊತೆಯಾಗಿರುವ ಜೋಡಿ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಇದೀಗ ಮೈಕ್ರೋ ಸೀರಿಸ್ ಗಾಗಿ ಲಿಪ್ ಲಾಕ್ ಮಾಡಿ ಸುದ್ದಿಯಲ್ಲಿದ್ದಾರೆ. ಆದರೆ ಫ್ಯಾನ್ಸ್ ಮಾತ್ರ ಈ ಜೋಡಿಯ ವಿರುದ್ಧ ಕಿಡಿ ಕಾರಿದ್ದಾರೆ.
ಶಿಶಿರ್-ಐಶ್ವರ್ಯ ಲಿಪ್ ಲಾಕ್ ಸೀನ್ ವೈರಲ್
ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ್ದ ಜೋಡಿ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಕಳೆದ ಎರಡು ವರ್ಷಗಳಿಂದ ಎಲ್ಲಾ ಕಡೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರ ನಡುವೆ ಏನೋ ಇದೆ ಎನ್ನುವ ಸುದ್ದಿಯೂ ಇದೆ. ಆದರೆ ಜೋಡಿ ಮಾತ್ರ ಎಲ್ಲೂ ಈ ತಮ್ಮ ಸಂಬಂಧದ ಬಗ್ಗೆ ಬಿಟ್ಟು ಕೊಟ್ಟಿಲ್ಲ. ಆದರೆ ಇದೀಗ ಶಿಶಿರ್ ಮತ್ತು ಐಶ್ವರ್ಯ ಲಿಪ್ ಲಾಕ್ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಬಬ್ರ ಈ ಬೋಲ್ಡ್ ಅವತಾರ ನೋಡಿ ವೀಕ್ಷಕರು ಕಿಡಿ ಕಾರಿದ್ದಾರೆ. ಅಷ್ಟಕ್ಕೂ ಇಬ್ಬರು ಲಿಪ್ ಲಾಕ್ ಮಾಡಿದ್ದೇಕೆ? ವೀಕ್ಷಕರು ಕಿಡಿ ಕಾರುತ್ತಿರೋದು ಯಾಕೆ ನೋಡೋಣ.
ಮೈಕ್ರೋ ಸೀರಿಸ್ ಗಾಗಿ ಲಿಪ್ ಲಾಕ್
ಇತ್ತೀಚಿನ ದಿನಗಳಲ್ಲಿ ಮೈಕ್ರೋ ಸೀರಿಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ‘ರಾಗ್ಸ್ ಟು ರಾಜಕುಮಾರಿ’ ಎನ್ನುವ ಮೈಕ್ರೋ ಸೀರೀಸ್ ನಲ್ಲಿ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಜೊತೆಯಾಗಿ ನಟಿಸುತ್ತಿದ್ದಾರೆ. ಇಬ್ಬರು ಜೊತೆಯಾಗಿ ನಟಿಸುತ್ತಿರುವ ಎರಡನೇ ಮೈಕ್ರೋ ಸೀರೀಸ್ ಇದಾಗಿದೆ. ಈ ಸೀರೀಸ್ ಗಾಗಿ ದೃಶ್ಯವೊಂದರಲ್ಲಿ ಈ ಜೋಡಿ ತುಟಿಗೆ ತುಟಿ ಒತ್ತಿ ಮುತ್ತಿನ ಮುದ್ರೆಯನ್ನು ಒತ್ತಿದ್ದಾರೆ. ಈ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಿಡಿ ಕಾರಿದ್ದಾರೆ. ಈ ಹಿಂದೆ ಫ್ರೆಂಡ್ಸ್, ಐಶ್ವರ್ಯ ನನ್ನ ತಂಗಿ ಎಂದು ಹೇಳುತ್ತಿದ್ದವರು ಈಗ ತೆರೆ ಮೇಲೆ ಲಿಪ್ ಲಾಕ್ ಮಾಡೋದು ಸರಿಯಲ್ಲ. ಅಣ್ಣ-ತಂಗಿ ಎನ್ನುತ್ತಾ ಏನೇನೋ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮೂಲಕ ಕಿಡಿ ಕಾರಿದ್ದಾರೆ.
ಐಶ್ವರ್ಯ ನನ್ನ ತಂಗಿ ಎಂದು ಹೇಳಿದ್ದರೆ ಶಿಶಿರ್?
ಹಿಂದೆ ಇಂಟರ್ವ್ಯೂ ಒಂದರಲ್ಲಿ ಸಂದರ್ಶಕ ಶಿಶಿರ್ ಶಾಸ್ತ್ರಿಗೆ ಫನ್ನಿ ಪ್ರಶ್ನೆಗಳನ್ನು ಕೇಳುತ್ತಾ, ಇನ್ನು ತಪ್ಪು ಉತ್ತರ ಮಾತ್ರ ಕೊಡಬೇಕು ಎಂದಿದ್ದರು. ಅದರಲ್ಲಿ ಐಶ್ವರ್ಯ ನಿಮಗೆ ಏನಾಗಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಿಶಿರ್ ತಪ್ಪು ಉತ್ತರವಾಗಿ ಐಶ್ವರ್ಯ ನನಗೆ ತಂಗಿ ಎನ್ನುತ್ತಾ ನಕ್ಕಿದ್ದರು. ಇದು ತಮಾಷೆಗಾಗಿ ಮಾಡಿದ ವಿಡಿಯೋ ಆಗಿತ್ತು. ಆದರೆ ನೆಟ್ಟಿಗರು ಅದೇ ವಿಡೀಯೋ ಇಟ್ಟುಕೊಂಡು, ಅಂದು ಅಣ್ಣ-ತಂಗಿ ಎಂದು ಹೇಳಿ, ಈಗ ಲಿಪ್ ಲಾಕ್ ಮಾಡೋದು ಸರಿಯಲ್ಲ ಎಂದಿದ್ದಾರೆ.
ನಟಿಯರ ವಿರುದ್ಧವೂ ವೀಕ್ಷಕರು ಕಿಡಿ
ಮೈಕ್ರೋ ಸೀರೀಸ್ ಗಳಲ್ಲಿ ಬೋಲ್ಡ್ ದೃಶ್ಯಗಳು ಸಹ ಸಾಮಾನ್ಯವಾಗಿದೆ. ಕನ್ನಡ ಕಿರುತೆರೆಯಲ್ಲಿ ಮನೆಮಗಳಂತೆ ಸಂಪ್ರದಾಯಬದ್ಧವಾಗಿ ಕಾಣಿಸಿಕೊಳ್ಳುವ ನಟಿಯರು, ಮೈಕ್ರೋ ಸೀರೀಸ್ ಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧವೂ ವೀಕ್ಷಕರು ಕಿಡಿ ಕಾರಿದ್ದಾರೆ.


