ಬಾರ್ಬಿಡಾಲ್​ ರೂಪದಲ್ಲಿ ನಿವೇದಿತಾ ವಿಡಿಯೋ! ಹಾರ್ಟ್​ ಬೀಟ್​ ಹೆಚ್ತಿದೆ ಗೊಂಬೆ ಅಂತಿದ್ದಾರೆ ಫ್ಯಾನ್ಸ್​

ವಿಭಿನ್ನ ವೇಷ ತೊಟ್ಟು ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರೋ ನಟಿ ನಿವೇದಿತಾ ಗೌಡ ಈಗ ಬಾರ್ಬಿ ಡಾಲ್​ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್​ ಏನಂತಿದ್ದಾರೆ ನೋಡಿ...
 

Actress Nivedita Gowda appeared in the form of a Barbie doll suc

ಅಪಾರ ಅಭಿಮಾನಿ ಬಳಗ ಹೊಂದಿರುವ ಗೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda) ಅವರು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಕನ್ನಡ ಕಿರುತೆರೆ ಮನೋರಂಜನಾ ಲೋಕದಲ್ಲಿ ಮಿಂಚುತ್ತಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್​ಟೈನ್​ಮೆಂಟ್ ಕೊಡುತ್ತಿರುತ್ತಾರೆ.  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾಗಿ ಲೈಫ್​ ಎಂಜಾಯ್​ ಮಾಡ್ತಿರೋ ಬೆಡಗಿ ದಿನನಿತ್ಯವೂ ಒಂದಿಲ್ಲೊಂದು ಪೋಸ್ಟ್​ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಅಂದಹಾಗೆ ನಿವೇದಿತಾ ಅವರಿಗೆ ಬಾರ್ಬಿ ಡಾಲ್​ ಎಂದೇ ಕರೆಯಲಾಗುತ್ತದೆ. ಆದರೆ ಅಕ್ಷರಶಃ ಈಗ ಇವರು ಬಾರ್ಬಿ ಡಾಲ್​ ಆಗಿದ್ದಾರೆ. ಕೆಲ ದಿನಗಳಿಂದ ಬಾರ್ಬಿ ಕ್ರೇಜ್​ ಹೆಚ್ಚಾಗಿದೆ. ಗಣ್ಯಾತಿಗಣ್ಯರಿಂದ ಹಿಡಿದು ಸೆಲೆಬ್ರಿಟಿಗಳ ರೂಪವನ್ನು ಎಐ ಮೂಲಕ ಬಾರ್ಬಿ ರೂಪಕ್ಕೆ ತರಲಾಗುತ್ತಿದೆ. ಇದೀಗ ನಿವೇದಿತಾ ಕೂಡ ಬಾರ್ಬಿ ಡಾಲ್​ ಆಗಿ ಕಂಗೊಳಿಸಿದ್ದಾರೆ. ಹೌದು. ಬಾರ್ಬಿಯ ಹೊಸ ಹೊಸ ರೂಪವನ್ನು ಸೃಷ್ಟಿಸಿ ಅದನ್ನು ತಮ್ಮ ರೂಪಕ್ಕೆ ಮ್ಯಾಚ್​ ಮಾಡಿಕೊಂಡು ಎಡಿಟ್​ ಮಾಡಿದ್ದಾರೆ. ಇದನ್ನು ನೋಡಿದವರಂತೂ ಖುಷಿಯಿಂದ ಕುಣಿಯುತ್ತಿದ್ದಾರೆ. ನಟಿಯ ಹೊಸ ರೂಪಕ್ಕೆ ಮರುಳಾಗುತ್ತಿದ್ದಾರೆ. ಸೋ ಕ್ಯೂಟ್​ ಎಂದು ಹಲವರು ಹೇಳುತ್ತಿದ್ದರೆ, ಹಾರ್ಟ್​ ಎಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದೆ. ಹೀಗೆಲ್ಲಾ ಮಾಡಿ ನಮ್ಮ ನಿದ್ದೆ ಕದಿಯುತ್ತೀರಿ ಎಂದು ಹುಡುಗರು ಕಮೆಂಟ್​ ಹಾಕುತ್ತಿದ್ದರೆ, ಬಾರ್ಬಿ ಡಾಲ್​ ನೋಡಿ ಹಾರ್ಟ್​ ಬೀಟ್​ ಹೆಚ್ತಿದೆ ಎನ್ನುತ್ತಿದ್ದಾರೆ ಇನ್ನು ಹಲವರು. 

ನಿವೇದಿತಾ ಗೌಡ ಹಾಟ್ ವಿಡಿಯೋ ವೈರಲ್​: ಉಫ್​ ನಿದ್ದೆಗೆಡಿಸ್ತೀರಾ ಎಂದ ಫ್ಯಾನ್ಸ್​

ಕಳೆದ ಆಗಸ್ಟ್​ 15ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಹೊಸ ಕಾನ್​ಸೆಪ್ಟ್​ನಲ್ಲಿ ವಿಡಿಯೋ ಮಾಡೋಣ ಅಂದುಕೊಂಡಿದ್ದೇನೆ ಎಂದು ಎರಡು ದಿನಗಳ ಹಿಂದೆ ವಿಡಿಯೋ ಮೂಲಕ ತಿಳಿಸಿದ್ದ  ನಿವೇದಿತಾ ಗೌಡ, ಅದಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ (Instagram) ಶೇರ್​  ಮಾಡಿಕೊಂಡಿದ್ದರು. ಹಲವಾರು ರೀತಿಯ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದರು. ವಿವಿಧ ರಾಜ್ಯಗಳ ಸಾಂಪ್ರದಾಯಿಕ ಡ್ರೆಸ್​ನೊಂದಿಗೆ ಕಂಗೊಳಿಸಿದ್ದ ನಟಿ ನನಗೆ ಈಗ  ಯಾವ ರೀತಿ ಫೀಲ್​ ಆಗ್ತಿದೆ ಎಂದರೆ 200 ಔಟ್​ಫಿಟ್​ ಹಾಕಿದ ಹಾಗೆ ಫೀಲ್​ ಆಗ್ತಿದೆ ಎಂದಿದ್ದರು. ಆಗಸ್ಟ್​ 15ಕ್ಕೆ ಯೂಟ್ಯೂಬ್​ನಲ್ಲಿ ಹೊಸ ವಿಡಿಯೋ ರಿಲೀಸ್ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು ಯೂಟ್ಯೂಬ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ವಂದೇ ಮಾತರಂ (Vande Mataram) ಹಾಡಿನ ಹಿನ್ನೆಲೆಯಲ್ಲಿ ನಟಿ ಕಂಗೊಳಿಸಿದ್ದರು. ಹಲವಾರು ರಾಜ್ಯಗಳ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಭಾರತದ ಸಂಪ್ರದಾಯವನ್ನು ಸಾರುವ ವಿಡಿಯೋ ಮಾಡಿದ್ದರು.  ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದು, ಇಂದಿಗೂ ಆ ವಿಡಿಯೋಕ್ಕೆ ಥಹರೇವಾಗಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. 

ಅದಾದ ಬಳಿಕ,  ಪಾಪ್​ ಹಾಡಿಗೆ ಡ್ಯಾನ್ಸ್​ ಮಾಡಿರುವ ನಿವೇದಿತಾ ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಪಾಪ್​ ಡ್ರೆಸ್​ ಹಾಕಿಕೊಂಡು ಡ್ಯಾನ್ಸ್​ ಮಾಡಿದ್ದು, ಇದಕ್ಕೆ ಹಾರ್ಟ್​ ಎಮೋಜಿಗಳ ಸುರಿಮಳೆಯಾಗಿದೆ. ನೀವು ಏನು ಮಾಡಿದರೂ ಚೆನ್ನಾ ಎನ್ನುತ್ತಿದ್ದಾರೆ ಫ್ಯಾನ್ಸ್​. ಹಿನ್ನೆಲೆಯಲ್ಲಿ ಬೆಲೆ ಬಾಳುವ ಸಂಗೀತದ ಇನ್​ಸ್ಟ್ರುಮೆಂಟ್​ ಇರುವುದನ್ನು ನೋಡಿದ ಕಮೆಂಟಿಗರು, ನೀವು ಡ್ಯಾನ್ಸ್​ ಮಾಡುವ ಪರಿಗೆ ಅದನ್ನೆಲ್ಲಾ ಹಾಳು ಮಾಡಿಬಿಟ್ಟರೆ ಎನ್ನುವ ಭಯ ಎಂದು ಕಾಲೆಳೆದಿದ್ದರು.  ಇದರ ಜೊತೆಗೆ ಸ್ವೀಟ್​, ಹಾಟ್​, ಬಬ್ಲಿ... ಹೀಗೆ ಹಲವಾರು ಹೆಸರುಗಳಿಂದ ನಟಿಯನ್ನು ಕರೆದಿದ್ದರು. ಇದೀಗ ಮತ್ತೊಂದು ವಿಡಿಯೋದೊಂದಿಗೆ ನಟಿ ಕಾಣಿಸಿಕೊಂಡಿದ್ದಾರೆ. 

ಸೆಲೆಬ್ರಿಟಿಗಳ ಜೊತೆ ಸಮುದ್ರ ತೀರದಲ್ಲಿ ನಿವೇದಿತಾ ಗೌಡ: ಚಡ್ಡಿ ಗ್ಯಾಂಗ್​ ಎಂದ ಫ್ಯಾನ್ಸ್​!
  
 

Latest Videos
Follow Us:
Download App:
  • android
  • ios