ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತಿ ದೀಪಕ್ ಗೌಡ ಡೆಸರ್ಟ್‌ನಲ್ಲಿ ಸರ್ಪ್ರೈಸ್ ನೀಡಿದ್ದಾರೆ. ದೀಪಿಕಾಗೆ 29 ವರ್ಷ ವಯಸ್ಸಾಗಿದ್ದು, ಮದುವೆಯ ನಂತರದ ಮೊದಲ ಹುಟ್ಟುಹಬ್ಬ ಇದಾಗಿದೆ.
ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ (Deepika Das) ಹೆಚ್ಚಾಗಿ ವಿದೇಶದಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡ್ತಿರೋದನ್ನು ನಾವು ನೋಡಿದ್ದೀವಿ. ಇದೀಗ ತಮ್ಮ ಹುಟ್ಟುಹಬ್ಬವನ್ನು ದುಬೈನಲ್ಲಿ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ದೀಪಿಕಾ ದಾಸ್ ಅವರ ಪತಿ ದೀಪಕ್ ಗೌಡ ಮದುವೆಯಾದ ಬಳಿಕ ಹೆಂಡತಿಯ ಮೊದಲ ಹುಟ್ಟುಹಬ್ಬಕ್ಕೆ ಬಲು ಜೋರಾಗಿಯೇ ತಯಾರಿ ನಡೆಸಿದ್ದು, ಪತ್ನಿಗೆ ದುಬೈನ ಡೆಸರ್ಟ್ ನಲ್ಲಿ ಬಿಗ್ ಸರ್ಪ್ರೈಸ್ ನೀಡಿದ್ದಾರೆ.
ಹೇಗಿದೆ ದೀಪಿಕಾ ದಾಸ್ ಹೊಸ ಗ್ಲಾಮರಸ್ ಲುಕ್… ಕ್ಲಿಯೋಪಾತ್ರ ಎಂದ ಫ್ಯಾನ್ಸ್
ದೀಪಿಕಾ ದಾಸ್ ಗೆ ಫೆಬ್ರುವರಿ 23 ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ನಟಿಗೆ ಇದೀಗ 29 ವರ್ಷ ವಯಸ್ಸಾಗಿದೆ. ಮದುವೆಯಾದ ಬಳಿಕ ಇದು ಮೊದಲ ಹುಟ್ಟುಹಬ್ಬವಾಗಿದ್ದು, ಸ್ಯಾಂಡಲ್ ವುಡ್ ಪ್ರಶಸ್ತಿ ಸಮಾರಂಭವೊಂದು ದುಬೈನಲ್ಲಿ ನಡೆಯುತ್ತಿದ್ದು, ಆ ಹಿನ್ನೆಲೆಯಲ್ಲಿ ದುಬೈನಲ್ಲಿರುವ ದೀಪಿಕಾ ದಾಸ್ ಗೆ ಪತಿ ದೊಡ್ಡದಾಗಿ ಸರ್ಪ್ರೈ ನೀಡಿದ್ದಾರೆ. ದುಬೈನ ಡೆಸರ್ಟ್ ನಲ್ಲಿ ತುಂಬಾನೆ ರೊಮ್ಯಾಂಟಿಕ್ ಆಗಿ ಲೈಟ್ಸ್ ಹಾಕಿ ಡೆಕೋರೇಟ್ ಮಾಡಿದ್ದು, ಬೆಂಕಿಯಲ್ಲಿ ಹ್ಯಾಪಿ ಬರ್ತ್ ಡೇ ದೀಪಿಕಾ (Birthday celebration of Deepika) ಎಂದು ಬರೆಯಲಾಗಿದೆ. ಬಳಿಕ ದೀಪಿಕಾ ಜೊತೆ ಪತಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಪ್ರೀತಿಯ ಪತ್ನಿಗೆ ಉಡುಗೊರೆಯಾಗಿ ದೀಪಕ್ ಗೌಡ ಚಿನ್ನದ ಬಳೆ, ಉಂಗುರಗಳನ್ನು ನೀಡಿದ್ದಾರೆ.
Paru Parvati Film Review: ಭಾವನೆಗಳ ರಸ್ತೆಯಲ್ಲಿ ಕೌತುಕದ ಪಯಣ: ಒಂಟಿತನದಲ್ಲಿ ಪಾರು!
ದೀಪಿಕಾ ದಾಸ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರ್ತ್ ಡೇ ಸಂಭ್ರಮದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ಸೋ ರೊಮ್ಯಾಂಟಿಕ್ ಬರ್ತ್ ಡೇ (romantic birthday) ಸೆಲೆಬ್ರೇಶನ್ ಎಂದು ಬರೆದುಕೊಂಡಿದ್ದಾರೆ. ನಟಿಗೆ ಅಭಿಮಾನಿಗಳು ಸಹ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಫೆಬ್ರುವರಿ ತಿಂಗಳಲ್ಲಿ ನಟಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಮಾರ್ಚ್ ನಲ್ಲಿ ನಟಿಯ ಮದುವೆಯಾಗಿ ಒಂದು ವರ್ಷ ತುಂಬಲಿದೆ. ಇನ್ನು ಕರಿಯರ್ ವಿಷಯಕ್ಕೆ ಬಂದ್ರೆ ದೀಪಿಕಾ ದಾಸ್ ನಟಿಸಿರುವ ಪಾರು ಪಾರ್ವತಿ ಸಿನಿಮಾ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆ ಪಡೆದಿತ್ತು, ಈ ಸಿನಿಮಾ ಟ್ರಾವೆಲ್ ಕುರಿತಾದ ಸಿನಿಮಾವಾಗಿದ್ದು, ನಟಿಯು ಟ್ರಾವೆಲ್ ಪ್ರಿಯೆ ಆಗಿರೋದರಿಂದ ಸಿನಿಮಾ ಮತ್ತಷ್ಟು ಇಂಟ್ರೆಸ್ಟಿಂಗ್ ಆಗಿ ಚೆನ್ನಾಗಿ ಮೂಡಿ ಬಂದಿದೆ.
