Asianet Suvarna News Asianet Suvarna News

Tumakuru : ವೇಶ್ಯಾವಾಟಿಕೆಗೆ ಪ್ರಚೋದನೆ ಆರೋಪದ ಬೆನ್ನಲ್ಲೇ ನಾಣಿ ಹಂದ್ರಾಳ ಆತ್ಮಹತ್ಯೆಗೆ ಯತ್ನ

ಆರ್ಕೇಸ್ಟ್ರಾ ಕಲಾವಿದೆಯರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದಾರೆ ಎಂಬ ಆಡಿಯೋ ವೈರಲ್ ಆಗುತ್ತಿದ್ದಂತೆಯೇ  ಸಂಜಯ್ ಮೆಲೋಡಿಸ್ ಆರ್ಕೇಸ್ಟ್ರಾ ಮಾಲೀಕ ನಾಣಿ ಹಂದ್ರಾಳ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನಲ್ಲಿ  ನಡೆದಿದೆ. 

Tumakuru orchestra artist  naani handral attempt to suicide after allegation of Pushing artistes into prostitution  gow
Author
Bengaluru, First Published Feb 7, 2022, 3:01 PM IST | Last Updated Feb 7, 2022, 4:10 PM IST

ತುಮಕೂರು(ಫೆ.7): ಆರ್ಕೇಸ್ಟ್ರಾ ಕಲಾವಿದೆಯರನ್ನು (Orchestra Artist) ವೇಶ್ಯಾವಾಟಿಕೆಗೆ (prostitution) ಪ್ರಚೋದಿಸುತ್ತಿದ್ದಾರೆ ಎಂಬ ಆಡಿಯೋ ವೈರಲ್ ಆಗುತ್ತಿದ್ದಂತೆಯೇ  ಸಂಜಯ್ ಮೆಲೋಡಿಸ್ ಆರ್ಕೇಸ್ಟ್ರಾ (sanjay melodies orchestra) ಮಾಲೀಕ ನಾಣಿ ಹಂದ್ರಾಳ್ (naani handral) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನಲ್ಲಿ  ನಡೆದಿದೆ. 

ಸದ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಾಣಿ ಹಂದ್ರಾಳ್ ಅವರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ನಾಣಿ ಹಂದ್ರಾಳ್‌ ಮಹಿಳಾ ಕಲಾವಿದೆಯರನ್ನು ವೇಶ್ಯಾವಾಟಿಕೆಗೆ ಪ್ರಚೋದನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ತುಮಕೂರು ಆರ್ಕೇಸ್ಟ್ರಾ ಮಾಲೀಕರ ಸಂಘ ಈ  ಆರೋಪ ಮಾಡಲಾಗಿತ್ತು. 

ಆರೋಪವನ್ನು ಅಲ್ಲೆಗಳೆದಿರುವ ನಾಣಿ ಹಂದ್ರಾಳ್, ನಾನು 16 ವರ್ಷದಿಂದ ಆರ್ಕೇಸ್ಟ್ರಾ ನಡೆಸುತ್ತಿದ್ದೇನೆ.‌ ಮಹಿಳಾ ಕಲಾವಿದರನ್ನು ಕೆಟ್ಟದೃಷ್ಟಿಯಲ್ಲಿ ನೋಡಿಲ್ಲ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಮುರುಡೇಶ್ವರದಲ್ಲಿ ಕಾರ್ಯಕ್ರಮವಿತ್ತು. ಅದಕ್ಕೆ  ನಾನು ಕಾರ್ಯಕ್ರಮಕ್ಕೆ ಕರೆದಿದ್ದು ಅಷ್ಟೇ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಸುಮ್ಮನೆ ಆರೋಪ ಹೊರಿಸಿದ್ದಾರೆ. ಲಾಯರ್ ರಾಜು, ನಾಗರಾಜು ಎಂಬುವರು ಸೇರಿ ಮನಸಿಕ ಕಿರುಕುಳ ನೀಡಿದ್ದಾರೆ. ಮಹಿಳಾ ಕಲಾವಿದೆಯರೊಂದಿಗೆ ಮಾತನಾಡಿದ್ದು ನಾನೇ ಆದರೆ ಅವರನ್ನು ಕಾರ್ಯಕ್ರಮಕ್ಕೆ  ಕರೆದಿದ್ದು ಎಂದು ಹೇಳಿಕೆ ನೀಡಿದ್ದಾರೆ.

ನಾಣಿ ಹಂದ್ರಾಳ್ ಮಹಿಳೆಯೊಂದಿಗೆ ಪೋನ್ ನಲ್ಲಿ ಮಾತನಾಡಿದ ಆಡಿಯೋ ವೈರಲ್ ಆಗಿತ್ತು. ದಿನಕ್ಕೆ ಒಂದೂವರೆ ಸಾವಿರ ಕೊಡ್ತಾರೆ ಏನು ತೊಂದರೆ ಆಗಲ್ಲ ನಾನು ಜೊತೆಗೆ ಇರ್ತಿನೀ ಎಂಬ ಸಂಭಾಷಣೆ ಅದರಲ್ಲಿತ್ತು. ಘಟನೆಗೆ ಸಂಬಂಧಿಸಿ ಕಲ್ಪತರುನಾಡು ಆರ್ಕೇಸ್ಟ್ರಾ ಮಾಲೀಕರು ಹಾಗೂ ಕ್ಷೇಮಾಭಿವೃದ್ದಿ ಸಂಘ ತುಮಕೂರಿನ ಜಯನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿತ್ತು. ಮಹಿಳಾ ಕಲಾವಿದೆಯರಿಗೆ ಕರೆ ಮಾಡಿ ಹಣದ ಆಮಿಷ ಒಡ್ಡುತ್ತಿರುವ ನಾಣಿ ಹಂದ್ರಾಳ್  ವಿರುದ್ಧ  ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿತ್ತು.

Bannerghatta Biological Park: 8 ನೀರಾನೆ ವಾಸ, 3-4 ನೀರಾನೆ ಸಾಕುವಷ್ಟು ಮಾತ್ರ ಜಾಗ ಲಭ್ಯ!

ಬಿಜೆಪಿಗೆ ಹೋಗ್ತಾರಾ ಕಾಂಗ್ರೆಸ್ ಪ್ರಭಾವಿ ನಾಯಕ?: ಕಳೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟು ರಾಜಕಾರಣದಿಂದ ನೇಪಥ್ಯಕ್ಕೆ ಸರಿದಿದ್ದ ಕಾಂಗ್ರೆಸ್ ನಾಯಕ ಎಸ್.ಪಿ.ಮುದ್ದಹನುಮೇಗೌಡ (Muddahanumegowda) ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ (Loksabha Election)  ಹಾಲಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಆವರಿಗೆ ಟಿಕೆಟ್ ನಿರಾಕರಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು (HD Devegowda) ತುಮಕೂರು ಲೋಕಸಭಾ (Tumakuru Loksabha Election) ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಇದೀಗ ಮತ್ತೆ ಮುದ್ದಹನುಮೇಗೌಡ್ರು ರಾಜಕೀಯ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ.

ಹೌದು..ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭೆ ಕ್ಷೇತ್ರದ ಟಿಕೆಟ್‌ ಪಡೆಯಲು ಮುದ್ದಹನುಮೇಗೌಡ ಫೈಟ್ ಮಾಡುತ್ತಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ಸಂಬಂಧಿ ಹಾಲಿ ಶಾಸಕರಿದ್ದರಿಂದ ಟಿಕೆಟ್ ಸಿಗುವುದು ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ಗಾಳ ಹಾಕುತ್ತಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರು ಮುದ್ದಹನುಮೇಗೌಡ್ರಿಗೆ ಬಿಜೆಪಿ ಬರುವಂತೆ ಆಹ್ವಾನ ಕೊಟ್ಟಿದ್ದಾರೆ.

JNU VC SANTISHREE DHULIPUDI PANDIT: ಜೆಎನ್‌ಯು ಮೊಟ್ಟ ಮೊದಲ ಮಹಿಳಾ ಉಪ ಕುಲಪತಿಯಾಗಿ ಶಾಂತಿಶ್ರೀ ಧೂಳಿಪುಡಿ ನೇಮಕ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Assembly election) ನನಗಾಗಿ ಕುಣಿಗಲ್‌ ಶಾಸಕ ಡಾ. ರಂಗನಾಥ್‌ (Dr Ranganath) ಕ್ಷೇತ್ರ ತ್ಯಾಗ ಮಾಡಲಿ ಎಂದು ಮಾಜಿ ಸಂಸದ ಮುದ್ದ ಹನುಮೇಗೌಡ ಆಗ್ರಹಿಸಿದ್ದಾರೆ. ನಾನು ಲೋಕಸಭೆ ಚುನಾವಣೆ (Loksabha Election) ವೇಳೆ ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡರಿಗಾಗಿ (HD Devegowda) ನನ್ನ ಸ್ಥಾನ ತ್ಯಾಗ ಮಾಡಿದ್ದೆ. ಈಗ ನನಗಾಗಿ ಶಾಸಕ ಡಾ.ರಂಗನಾಥ್‌ ಸ್ಥಾನ ತ್ಯಾಗ ಮಾಡಲಿ. 2019ರ ಲೋಕಸಭೆ ಚುನಾವಣೆ  (Loksabha Election) ವೇಳೆ ರಾಹುಲ್‌ ಗಾಂಧಿ  (Rahul Gandhi) ಹಾಗೂ ಕೆ.ಸಿ.ವೇಣುಗೋಪಾಲ್‌ ನನಗೆ ದೂರವಾಣಿ ಕರೆ ಮಾಡಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ದರು. ಆದರೆ ಮಾಡಲಿಲ್ಲ. ಆದರೂ ನಾನು ಅಸಮಾಧಾನ ವ್ಯಕ್ತಪಡಿಸಿರಲಿಲ್ಲ  ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios