ತುಮಕೂರು(ಅ.11): ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಶಾಕ್‌ ನೀಡಿದ್ದಾರೆ.

ತುಮಕೂರಿನ ಮರಳೂರಿನ ದಿಣ್ಣೆಯಲ್ಲಿರುವ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ರೂಂ ನಂ 115ರಲ್ಲಿ 2000 ಮುಖಬೆಲೆಯ ನೋಟಿನ ಬಂಡಲ್‌ಗಳು ಸಿಕ್ಕಿವೆ ಎನ್ನಲಾಗಿದೆ. ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪರಮೇಶ್ವರ್‌ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ನಡುವೆ ಪರಮೇಶ್ವರ್‌ ಅವರ ಸಂಸ್ಥೆ ಮೇಲಿನ ದಾಳಿ ರಾಜಕೀಯ ಪ್ರೇರಿತ ಎಂಬ ಚರ್ಚೆ ಆರಂಭವಾದರೆ, ಐಟಿ ದಾಳಿಯನ್ನು ಖಂಡಿಸಿ ಪ್ರತಿಭಟನೆ ಸಹ ನಡೆಸಲಾಗಿದೆ. 12 ಅಧಿಕಾರಿಗಳ ನೇತೃತ್ವದ ತಂಡದಿಂದ ದಾಳಿ ನಡೆದಿದ್ದು, ಮುಂಜಾನೆಯಿಂದಲೂ ದಾಖಲೆ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

ಜಾಲಪ್ಪ ಅಳಿಯ ನಾಗರಾಜ್‌ ಮನೆ ಮೇಲೆ ಐಟಿ ದಾಳಿ ಇದೇ ಮೊದಲಲ್ಲ

ಗುರುವಾರ ಬೆಳಗ್ಗೆ 7ಕ್ಕೆ ಐಟಿ ಅಧಿಕಾರಿಗಳು ನಗರದ ಮರಳೂರಿನ ಎಂಜಿನಿಯರಿಂಗ್‌ ಕಾಲೇಜು, ಹೆಗ್ಗೆರೆಯ ಮೆಡಿಕಲ್‌ ಕಾಲೇಜು, ಸರಸ್ವತಿಪುರಂನ ಪದವಿ ಕಾಲೇಜು ಆವರಣಕ್ಕೆ ಆಗಮಿಸಿ, ದಾಖಲೆ ಪರಿಶೀಲನೆಯಲ್ಲಿ ತೊಡಗಿದರು.

ಈ ವೇಳೆ ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದರು. ಮೆಡಿಕಲ್‌ ಹಾಗೂ ಎಂಜಿನಿಯರ್‌ ಕಾಲೇಜಿನ ಸೀಟು ಹಂಚಿಕೆಯಲ್ಲಿ ಈ ಹಿಂದಿನಿಂದಲೂ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿಬಂದಿದ್ದು, ಎಲ್ಲಾ ಆಯಾಮಗಳಲ್ಲೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ: ಮಾಜಿ ಸಚಿವರ ಅಳಿಯ, ಮಗನ ನಿವಾಸದ ಮೇಲೆ ಐಟಿ ದಾಳಿ

ಬೆಳಗ್ಗೆ 7ಕ್ಕೆ 12 ಮಂದಿ ಐಟಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ನಗರದ ಮರಳೂರಿನ ಸಿದ್ಧಾರ್ಥ ಎಂಜಿನಿಯರಿಂಗ್‌ ಕಾಲೇಜು, ಹೆಗ್ಗೆರೆಯ ಮೆಡಿಕಲ್‌ ಕಾಲೇಜು, ಸರಸ್ವತಿಪುರಂನ ಪದವಿ ಕಾಲೇಜಿನ ಮೇಲೆ ದಾಳಿ ನಡೆಸಿದವು.

'ಎರಡು ಬಾರಿ ಗೆದ್ದಿರುವ ಶಿವಶಂಕರರೆಡ್ಡಿ ಏನು ಅಭಿವೃದ್ಧಿ ಮಾಡಿದ್ದಾರೆ'..