ತುಮಕೂರು (ನ.08): ಕುಣಿಗಲ್ ಕ್ಷೇತ್ರಕ್ಕೆ ತಡೆ ಹಿಡಿಯಲಾಗಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಡಿ.ಕೆ.ಶಿವಕುಮಾರ್ ಸಹೋದರ ಸಂಬಂಧಿ, ಶಾಸಕ ಡಾ.ರಂಗನಾಥ್ ಗದ್ಗದಿತರಾಗಿ ಕೈ ಮುಗಿದು ಸಚಿವ ಮಾಧುಸ್ವಾಮಿ ಬಳಿ ಕೇಳಿಕೊಂಡ ಘಟನೆ  ನಡೆದಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಕೆಡಿಪಿ ಸಭೆ ಆಯೋಜನೆಯಾಗಿತ್ತು. ಈ ಸಂದರ್ಭದಲ್ಲಿ ಡಾ.ರಂಗನಾಥ್ ಮಾತನಾಡಿ, ಕುಣಿಗಲ್ ಕ್ಷೇತ್ರದ ರಸ್ತೆ ಅಭಿವೃದಿಟಛಿಗಾಗಿ ಬಿಡುಗಡೆ ಮಾಡಿದ್ದ 14 ಕೋಟಿ ರು. ತಡೆ ಹಿಡಿಯಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರಿಂದ ಕ್ಷೇತ್ರದ ಅಭಿವೃದಿಟಛಿ ಕುಂಟಿತವಾಗಿದ್ದು, ನನಗೆ ತುಂಬಾ ನೋವಾಗಿದೆ ಎಂದು ಗದ್ಗದಿತರಾಗಿ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವಂತೆ ಮಾಧುಸ್ವಾಮಿ ಬಳಿ ಕೈ ಮುಗಿದು ಕೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಅನುದಾನಗಳನ್ನು ತಡೆಹಿಡಿಯಲಾಗಿದೆ ಎಂದರು.