Asianet Suvarna News Asianet Suvarna News

ಒಲಿಂಪಿಕ್ಸ್ ಕ್ರೀಡಾಸ್ಪೂರ್ತಿಗೆ ಸಲ್ಯೂಟ್; ಈ ಫೋಟೋಗೆ ಕ್ಯಾಪ್ಶನ್ ಪ್ಲೀಸ್!

  • ಕ್ರೀಡಾಸ್ಪೂರ್ತಿ ಮೆರೆದ ಗ್ರೇಟ್ ಬ್ರಿಟನ್, ಭಾರತ ತಂಡಕ್ಕೆ ಸಾಂತ್ವನ
  • ಒಲಿಂಪಿಕ್ ಕ್ರೀಡಾಸ್ಪೂರ್ತಿ ಮೆರೆಯುುವ ಫೋಟೋ ವೈರಲ್
  • ಒಲಿಂಪಿಕ್ಸ್ ಕ್ರೀಡಾಸ್ಪೂರ್ತಿ ಮರೆದ ಪಟ್ಟಿಗೆ ಗ್ರೇಟ್ ಬ್ರಿಟನ್ ಸೇರ್ಪಡೆ
Women hockey match between India and Great Britain captures spirit of Olympics ckm
Author
Bengaluru, First Published Aug 6, 2021, 5:25 PM IST
  • Facebook
  • Twitter
  • Whatsapp

ಟೋಕಿಯೋ(ಆ.06): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರೀಡಾಸ್ಪೂರ್ತಿ ಮೆರೆದೆ ಅದೆಷ್ಟೋ ಉದಾಹರಣೆಗಳಿವೆ. ಜೊತೆಗೆ ಗೆಲುವಿಗಾಗಿ ಕ್ರೀಡಾಸ್ಪೂರ್ತಿ ಮರೆತು, ನಿಯಮ ಉಲ್ಲಂಘಿಸಿದ ಘಟನೆಗಳಿವೆ. ಇದೀಗ ಕಂಚಿನ ಪದಕ್ಕಾಗಿ ನಡೆದ ಮಹಿಳಾ ಹಾಕಿ ಹೋರಾಟದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾಗೆ ಗ್ರೇಟ್ ಬ್ರಿಟನ್ ಸಾಂತ್ವನ ಹೇಳಿ ಕ್ರೀಡಾಸ್ಪೂರ್ತಿ ಮೆರೆದಿದೆ. ಈ ಫೋಟೋಗೆ ಕ್ಯಾಪ್ಶನ್ ನೀಡುವಿರಾ?

 

ಟೋಕಿಯೋ ಒಲಿಂಪಿಕ್ಸ್‌; ಚಿನ್ನ ಗೆದ್ದು ಪ್ರತಿಸ್ಪರ್ಧಿ ಜೊತೆ ಹಂಚಿಕೊಳ್ಳಲು ಅವಕಾಶ ಕೇಳಿದ ಬಾರ್ಶಿಮ್!

ಭಾರತೀಯ ಹಾಕಿ ಪಟುಗಳಿಗೆ ಸಾಂತ್ವನ ಹೇಳುವ ಫೋಟೋ ವೈರಲ್ ಆಗಿದೆ. ಈ ರೀತಿಯ ಕ್ರೀಡಾಸ್ಪೂರ್ತಿ ಒಲಿಂಪಿಕ್ಸ್‌ನಲ್ಲಿ ಮಾತ್ರ ಕಾಣಸಿಗುತ್ತದೆ. ಗ್ರೇಟ್ ಬ್ರಿಟನ್ ವಿರುದ್ಧ ಭಾರತ ಮಹಿಳಾ ತಂಡ 3-4 ಗೋಲುಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತ್ತು. ಈ ಸೋಲು ಭಾರತ ಮಹಿಳಾ ಹಾಕಿ ತಂಡಕ್ಕೆ ಆಘಾತ ನೀಡಿತ್ತು. ಸೋಲಿನ ನೋವಿನಲ್ಲಿದ್ದ ಭಾರತಕ್ಕೆ ಗ್ರೇಟ್ ಬ್ರಿಟನ್ ಹಾಕಿ ಪಟುಗಳು ಸಾಂತ್ವನ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಈ ಫೋಟೋ ಪೋಸ್ಟ್ ಮಾಡಿರುವ ಗ್ರೇಟ್ ಬ್ರಿಟನ್, ಗಟ್ಟಿಯಾದ ಗೆಳೆತನ ಎಂದು ಬಣ್ಣಿಸಿದೆ. ಇದೀಗ ಈ ಫೋಟೋ ವೈರಲ್ ಆಗಿದ್ದು, ಕ್ರೀಡಾ ಸ್ಪೂರ್ತಿ ಅಭಿಮಾನಿಗಳು ತಮ್ಮದೇ ವ್ಯಾಖ್ಯಾನ ನೀಡುತ್ತಿದ್ದಾರೆ. ಈ ಫೋಟೋಗೆ ನಿಮ್ಮ ಶೀರ್ಷಿಕೆ ಏನು? ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಹಂಚಿಕೊಳ್ಳಬಹುದು.

ಕಣ್ಣೀರಾಗಿದ್ದ ಭಾರತೀಯ ಮಹಿಳಾ ಹಾಕಿ ತಂಡವನ್ನು ಸಂತೈಸಿದ ಪ್ರಧಾನಿ ಮೋದಿ

ಈ ಫೋಟೋ ಇದೀಗ ವೈರಲ್ ಆಗಿದೆ. ಈ ರೀತಿಯ ಕ್ರೀಡಾಸ್ಪೂರ್ತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎದುರಾಳಿ ತಂಡವನ್ನು ಗೌರವಿಸುವ ರೀತಿ, ಗೆಳೆತನ, ಒಗ್ಗಟ್ಟು ಹಾಗೂ ನ್ಯಾಯಯುತ ಪ್ರದರ್ಶನದಿಂದ ಈ ರೀತಿಯ ಕ್ರೀಡಾಸ್ಪೂರ್ತಿ ಸಾಧ್ಯ. ಎರಡು ತಂಡಗಳಿಂದ ಅದು ನ್ಯಾಯಬದ್ಧ ಆಟ ಪ್ರದರ್ಶಿಸಿದೆ. 

 

ಭಾರತ ಎಂದೂ ಕ್ರೀಡಾಸ್ಪೂರ್ತಿ ಮರೆತು ಆಡಿಲ್ಲ. ಅನ್ಯಾಯಾವಾದರೂ ಸಹಿಸಿಕೊಂಡಿದೆ ಹೊರತು ಕ್ರೀಡಾಸ್ಪೂರ್ತಿ ಮರೆತಿಲ್ಲ. ಕುಸ್ತಿ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ರವಿ ಕುಮಾರ್ ದಹಿಯಾ, ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಹೋರಾಟ ಮಾಡಿ ಫೈನಲ್ ಪ್ರವೇಶಿಸಿದ್ದರು. ಈ ಪಂದ್ಯದಲ್ಲಿ ನುರಿಸ್ಲಾಮ್ ಸೋಲು ಖಚಿತವಾಗುತ್ತಿದ್ದಂತೆ ರವಿಕುಮಾರ್ ದಹಿಯಾ ಕೈ ಕಚ್ಚಿ ಗಾಯಗೊಳಿಸಿದ್ದರು. 

ಭವಿಷ್ಯದಲ್ಲಿ ಭಾರತವೇ ಬಲಿಷ್ಠ; ಮಹಿಳಾ ಹಾಕಿ ಹೋರಾಟ ಮೆಚ್ಚಿದ ಗ್ರೇಟ್ ಬ್ರಿಟನ್!

ಫೈನಲ್ ಪಂದ್ಯದಲ್ಲಿ ರವಿ ಕುಮಾರ್ ಹಿನ್ನಡೆಗ ಕೈ ನೋವು ಕೂಡ ಒಂದು ಕಾರಣವಾಗಿದೆ. ಈ ರೀತಿಯ ಕಹಿ ಘಟನೆಗಳು ಭಾರತಕ್ಕೆ ಆಗಿವೆ. ಆದರೆ ಭಾರತ ಎಂದೂ ಕ್ರೀಡಾಸ್ಪೂರ್ತಿ ಮರೆತಿಲ್ಲ. ಇದೀಗ ಗ್ರೇಟ್ ಬ್ರಿಟನ್ ಕ್ರೀಡಾಸ್ಪೂರ್ತಿ ಫೋಟೋ ವೈರಲ್ ಆಗಿದೆ. 

Follow Us:
Download App:
  • android
  • ios