ಟೋಕಿಯೋ ಒಲಿಂಪಿಕ್ಸ್; ಚಿನ್ನ ಗೆದ್ದು ಪ್ರತಿಸ್ಪರ್ಧಿ ಜೊತೆ ಹಂಚಿಕೊಳ್ಳಲು ಅವಕಾಶ ಕೇಳಿದ ಬಾರ್ಶಿಮ್!
- ಕ್ರೀಡಾ ಸ್ಪೂರ್ತಿ ಮೆರೆದೆ ಖತಾರ್ ಹೈಜಂಪ್ ಪಟು ಬಾರ್ಶಿಮ್
- ಹೈಜಂಪ್‌ನಲ್ಲಿ ಚಿನ್ನ ಗೆದ್ದುಪ್ರತಿಸ್ಪರ್ಧಿ ಜೊತೆ ಹಂಚಿಕೊಂಡ ಬಾರ್ಶಿಮ್
- ಇಟಲಿಯ ತಂಬೇರಿ ಜೊತೆ ಚಿನ್ನದ ಪದಕ ಹಂಚಿಕೊಂಡ ಬಾರ್ಶಿಮ್
- ಒಲಿಂಪಿಕ್ಸ್ ಇತಿಹಾಸದಲ್ಲಿ ಅಪರೂಪದ ಘಟನೆ
ಟೋಕಿಯೋ(ಆ.02): ಒಲಿಂಪಿಕ್ಸ್ ಇತಿಹಾಸದಲ್ಲೇ ಅಪರೂಪದ ಘಟನ ಟೋಕಿಯೋ ಕ್ರೀಡಾಕೂಟದಲ್ಲಿ ನಡೆದಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಹೀಗಾಗಿ ಚಿನ್ನ, ಬೆಳ್ಳಿ ಹಾಗೂ ಕಂಚ...ಯಾವ ಪದಕ ಗೆದ್ದರೂ ಸಾಧನೆಯೇ ಸರಿ. ಒಂದು ಪದಕ್ಕಾಗಿ ವರ್ಷಾನುಗಟ್ಟಲೆ ಬೆವರು ಸುರಿಸಿರುತ್ತಾರೆ. ಆದರೆ ಕತಾರ್‌ನ ಹೈಜಂಪ್ ಪಟು ಗೆದ್ದ ಪದಕವನ್ನು ಪ್ರತಿಸ್ಪರ್ಧಿ ಜೊತೆ ಹಂಚಿಕೊಳ್ಳಲು ಅವಕಾಶ ಕೇಳಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಚಿನ್ನದ ಪದಕವನ್ನು ಇಬ್ಬರೂ ಹಂಚಿಕೊಂಡಿದ್ದಾರೆ.
ಟೋಕಿಯೋ 2020: ಡಿಸ್ಕಸ್ ಥ್ರೋ ಫೈನಲ್‌ಗೆ ಮಳೆ ಅಡ್ಡಿ, 7ನೇ ಸ್ಥಾನಕ್ಕೆ ಕುಸಿದ ಕಮಲ್‌ಪ್ರೀತ್
ಹೈಜಂಪ್ ಫೈನಲ್‌ನಲ್ಲಿ ಖತಾರ್‌ನ ಮುತಾಝ್ ಎಸ್ಸಾ ಬಾರ್ಶಿಮ್ ಹಾಗೂ ಇಟಲಿಯ ಗಿಯಾನಮಾರ್ಕೋ ತಂಬೇರಿ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಅದರಲ್ಲೂ ಬಾರ್ಶಿಮ್ ಒಂದು ಕೈಮೇಲಾಗಿತ್ತು. ಪದಕ ಸುತ್ತಿನ ಹೋರಾಟದಲ್ಲಿ ಬಾರ್ಶಿಮ್ ಹಾಗೂ ತಂಬೇರಿ 2.37 ಮೀಟರ್ ಜಿಗಿದು ಸಮಬಲ ಸಾಧಿಸಿದರು.
ಫಲಿತಾಂಶ ನಿರ್ಧರಿಸಲು 2.39 ಮೀಟರ್ ಎತ್ತರ ಹಾರಲು ನಿರ್ಧರಿಸಿದರು. ಮೂರು ಪ್ರಯತ್ನಗಳಲ್ಲಿ ಇಬ್ಬರೂ ವಿಫಲರಾದರು. ಇಲ್ಲೂ ಕೂಡ ಸಮಬಲ ಸಾಧಿಸಿದರು. ಹೀಗಾಗಿ ಆಯೋಜಕರು 2.39 ಮೀಟರ್ ಹಾರಿದವನ್ನು ಜಯಶಾಲಿ ಎಂದು ಘೋಷಿಸುವುದಾಗಿ ಹೇಳಿತು. ಮತ್ತೆ ಪ್ರಯತ್ನ ಮಾಡಿದರೆ ಬಾರ್ಶಿಮ್ ಗೆಲುವು ಬಹುತೇಕ ನಿಶ್ಛಿತವಾಗಿತ್ತು. ಕಾರಣ ತಂಬೇರಿ 2016ರ ರಿಯೋ ಒಲಿಂಪಿಕ್ಸ್‌ಗೂ ಮೊದಲ ಆಗಿದ್ದ ಗಾಯ ಮತ್ತೆ ಉಲ್ಬಣಗೊಂಡಿತ್ತು.
ಟೋಕಿಯೋ ಒಲಿಂಪಿಕ್ಸ್: ಚಕ್ ದೇ ಇಂಡಿಯಾ ಸಿನಿಮಾ ಕ್ಷಣವನ್ನು ನೆನಪಿಸಿದ ಕೋಚ್ ಮರಿನೆ..!
ಬಾರ್ಶಿಮ ಹಾಗೂ ತಂಬೇರಿ ನಡುವಿನ ಗೆಲುವು ನಿರ್ಧರಿಸಲು ಆಯೋಜಕರು ಮತ್ತೊಂದು ಪ್ರಯತ್ನಕ್ಕೆ ಮುಂದಾದಾಗ, ಇತ್ತ ಬಾರ್ಶಿಮ್ ಚಿನ್ನದ ಪದಕವನ್ನು ಇಬ್ಬರೂ ಹಂಚಿಕೊಳ್ಳಬಹುದೇ? ಎಂದು ಆಯೋಜಕರನ್ನು ಪ್ರಶ್ನಿಸಿದ್ದಾರೆ. ನನ್ನ ಪ್ರತಿಸ್ಪರ್ಧಿ ಉತ್ತಮ ಸ್ನೇಹಿತ. ನಾವು ಈ ಹಿಂದೆ ಹಲವು ಕ್ರೀಡಾಕೂಟದಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದೇವೆ. ಈ ಬಾರಿ ನನ್ನ ಪ್ರತಿಸ್ಪರ್ಧಿಗೂ ಚಿನ್ನದ ಪದಕ ಸಿಗಲಿ ಎಂದು ಬಾರ್ಶಿಮ್ ಆಯೋಜಕರನ್ನು ಮನವಿ ಮಾಡಿದ್ದಾರೆ.
ಟೋಕಿಯೋ 2020: ಆಸೀಸ್ ಎದುರು ಭಾರತದ ಗೆಲುವಿನ ನಿಜವಾದ ರೂವಾರಿ ಸವಿತಾ ಪೂನಿಯಾ
ಬಾರ್ಶಿಮ್ ಮನವಿಗೆ ಒಪ್ಪಿದ ಆಯೋಕರು ಹೈಜಂಪ ಗೋಲ್ಡ್ ಹಂಚಿಕೆ ಮಾಡಿದ್ದಾರೆ. ಇಬ್ಬರನ್ನು ಜಯಶಾಲಿಗಳೆಂದು ಘೋಷಿಸಿದ್ದಾರೆ. ಲಂಡನ್ ಒಲಿಂಪಿಕ್ಸ್ ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಬಾರ್ಶಿಮ್‌ಗೆ ಟೋಕಿಯೋದಲ್ಲಿ ಚಿನ್ನದ ಪದಕ ಒಲಿದಿದೆ. ಇತ್ತ ಇಟಲಿಯ ತಂಬೇರಿ ಟೋಕಿಯೋ ಒಲಿಂಪಿಕ್ಸ್‌ಗೂ ಮೊದಲು ಕಾಲಿನ ಗಾಯದಿಂದ ಕ್ರೀಡಾಕೂಟದಿಂದ ಹೊರಗುಳಿದಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಗಾಯದಿಂದ ಚೇತರಿಸಿಕೊಂಡ ತಂಬೇರಿ ಇದೀಗ ಚಿನ್ನದ ಪದಕದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.