ಗಾಲ್ಫ್‌ನಲ್ಲಿ ಪದಕದ ಆಸೆ ಜೀವಂತವಾಗಿರಿಸಿರುವ ಕನ್ನಡತಿ ಅದಿತಿ
* ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ನಿರೀಕ್ಷೆ
* ಖ್ಯಾತ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ ಅದ್ಭುತ ಪ್ರದರ್ಶನ
* ಎರಡನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ
ಟೋಕಿಯೋ (ಆ. 06) ಭಾರತದ ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಭಾರತದ ಮಹಿಳಾ ಹಾಕಿ ತಂಡ ಮೆಚ್ಚುಗೆ ಗಳಿಸಿಕೊಂಡಿದೆ. ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಇತಿಹಾಸ ಸೃಷ್ಟಿ ಮಾಡಿವೆ. ಭಾರತಕ್ಕೆ ಇನ್ನು ಕೆಲವು ಪದಕದ ಆಸೆಗಳು ಜೀವಂತವಾಗಿವೆ.
ಭಾರತವನ್ನು ಪ್ರತಿನಿಧಿಸುತ್ತಿರುವ ಖ್ಯಾತ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ ಪದಕದ ಆಸೆಯನ್ನು ಇನ್ನು ಜೀವಂತವಾಗಿ ಇಟ್ಟಿದ್ದಾರೆ. 23 ವರ್ಷದ ಆಟಗಾರ್ತಿಯ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿದೆ.
ಮಹಿಳಾ ಹಾಕಿ ತಂಡವನ್ನು ಸಂತೈಸಿದ ಪ್ರಧಾನಿ
ಕಳೆದ ರಿಯೋ ಲಿಂಪಿಕ್ಸ್ ನಲ್ಲಿಯೇ ಭಾಗವಹಿಸಿದ್ದ ಅದಿತಿ ಅತಿ ಕಿರಿಯ ಗಾಲ್ಫರ್ ಎನ್ನುವ ಶ್ರೇಯಕ್ಕೆ ಪಾತ್ರವಾಗಿದ್ದರು. ಗಾಲ್ಫ್ ಹಿನ್ನೆಲೆ ಇಲ್ಲದಿದಿದ್ದರೂ ತಮ್ಮ ಐದನೇ ವಯಸ್ಸಿನಿಂದ ವಿಶೇಷ ಆಸಕ್ತಿ ತಳೆದು ಆಟದಲ್ಲಿ ತೊಡಗಿಸಿಕೊಂಡರು.
ಏಷಿಯನ್ ಯೂತ್ ಗೇಮ್ಸ್ (2013), ಯೂತ್ ಒಲಿಂಪಿಕ್ ಗೇಮ್ಸ್ (2014), ಏಷಿಯನ್ ಗೇಮ್ಸ್ (2014) ಒಲಿಂಪಿಕ್ಸ್ (2016)ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಮಹಿಳಾ ಆಟಗಾರ್ತಿ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದರು. Lalla Aicha Tour School title ಗೆದ್ದ ಅತಿ ಕಿರಿಯ ಆಟಗಾರ್ತಿ ಎನ್ನುವ ಶ್ರೇಯವೂ ಅವರಿಗೆ ಇದೆ. ಈ ಸಾಧನೆ ಅವರಿಗೆ ಯುರೋಪಿಯನ್ ಸೀಸನ್ ನಲ್ಲಿ ಭಾಗವಹಿಸುವ ಅವಕಾಶ ತಂದುಕೊಟ್ಟಿತು. 2017 ರಲ್ಲಿ ಮೊಟ್ಟ ಮೊದಲ ಲೇಡಿಸ್ ಇಂಡಿಯನ್ ಪ್ರೋಫೆಶನಲ್ ಗಾಲ್ಫರ್ ಎಂಬ ಗರಿಮೆಗೆ ಪಾತ್ರವಾದರು.
ಟೋಕಿಯೋ ಒಲಿಂಪಿಕ್ಸ್ ಮಹಿಳಾ ಗಾಲ್ಫ್ ವೈಯಕ್ತಿಕ ಸ್ಪರ್ಧೆಯಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಮೂರು ಸುತ್ತಿನಲ್ಲಿ ಈಗಾಗಲೇ ಅದಿತಿ ಟಾಪ್ ಎರಡರಲ್ಲಿ ಸ್ಪರ್ಧೆ ಮುಗಿಸಿದ್ದಾರೆ. ಹೀಗಾಗಿ ದೇಶಕ್ಕೆ ಇದೇ ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಗಾಲ್ಫ್‌ನಲ್ಲಿ ಪದಕ ಸಾಧನೆ ಹತ್ತಿರವಾಗಿದೆ.
ಮಹಿಳಾ ವೈಯಕ್ತಿಕ ವಿಭಾಗದ ಮೂರು ಸುತ್ತುಗಳು ಮುಗಿದಿದ್ದು ಇದರಲ್ಲಿ ಒಟ್ಟು 201 ಮಂದಿಯಲ್ಲಿ ಕೇವಲ 12 ಮಂದಿ ಉಳಿದಿದ್ದಾರೆ. ಇದರಲ್ಲಿ ಅದಿತಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ನೆಲ್ಲಿ ಕೊರ್ಡಾ ಅವರಿಗಿಂತ ಅದಿತಿ ಮೂರು ಹೆಚ್ಚುವರಿ ಸ್ಟ್ರೋಕ್ ಬಳಸಿಕೊಂಡಿದ್ದಾರೆ.