* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭವಿನಾ ಪಟೇಲ್‌* ಭವಿನಾ ಪಟೇಲ್‌ ಮಹಿಳೆಯರ ವೈಯಕ್ತಿಕ ಸಿ4 ವಿಭಾಗದಲ್ಲಿ ಸ್ಪರ್ಧಿಸಿರುವ ಟೇಬಲ್ ಟೆನಿಸ್ ಆಟಗಾರ್ತಿ* ಭವಿನಾ ಪಟೇಲ್‌ ಬ್ರೆಜಿಲ್ ಆಟಗಾರ್ತಿ ಎದುರು 3-0 ಅಂತರದಲ್ಲಿ ಗೆಲುವು

ಟೋಕಿಯೋ(ಆ.27): ಪ್ಯಾರಾಲಿಂಪಿಕ್ಸ್‌ನ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಭವಿನಾ ಪಟೇಲ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಇನ್ನೊಂದೆಡೆ ಸೋನಲ್‌ ಪಟೇಲ್‌ ಸೋತು ನಿರ್ಗಮಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆಯರ ವೈಯಕ್ತಿಕ ಸಿ4 ವಿಭಾಗದಲ್ಲಿ ಭವಿನಾ, 16ನೇ ಸುತ್ತಿನಲ್ಲಿ ಬ್ರೆಜಿಲ್‌ನ ಜೋಯ್ಸ್ ಡಿ ಒಲಿವಿರಿಯಾ ಎದುರು 3-0 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂತಿಮ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಶುಕ್ರವಾರ(ಆ.27) ಮುಂಜಾನೆ ನಡೆದ ಪಂದ್ಯದಲ್ಲಿ ಭವಿನಾ 12-10, 13-11, 11-6 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಮಿಂಚಿದರು.

Scroll to load tweet…

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಮೊದಲ ದಿನ: ಟಿಟಿಯಲ್ಲಿ ಭಾರತಕ್ಕೆ ನಿರಾಸೆ

ಇದಕ್ಕೂ ಮೊದಲು ಗುರುವಾರ ನಡೆದ ಪಂದ್ಯದಲ್ಲಿ ಮಹಿಳೆಯರ ವೈಯಕ್ತಿಕ ಸಿ4 ವಿಭಾಗದಲ್ಲಿ ಭವಿನಾ, ಗ್ರೇಟ್‌ ಬ್ರಿಟನ್‌ನ ಮೆಘನ್‌ ಶಾಕ್ಲೆಟನ್‌ ವಿರುದ್ಧ 3-1ರಿಂದ ಗೆಲುವು ಸಾಧಿಸಿದರು. ಭವಿನಾ ತಮ್ಮ ಮೊದಲ ಪಂದ್ಯದಲ್ಲಿ ಸೋತಿದ್ದರು. ಇನ್ನು ಸೋನಲ್‌ ವೈಯಕ್ತಿಕ ಸಿ3 ವಿಭಾಗದಲ್ಲಿ ಕೊರಿಯಾದ ಎಮ್‌ಜಿ ಲೀ ವಿರುದ್ಧ 1-3 ಸೆಟ್‌ಗಳಿಂದ ಸೋತು ನಿರ್ಗಮಿಸಿದರು. ಸೋನಲ್‌ ಮೊದಲ ಪಂದ್ಯದಲ್ಲೂ ಸೋಲುಂಡಿದ್ದರು. ಶುಕ್ರವಾರ ಭಾರತ ಪವರ್‌-ಲಿಫ್ಟಿಂಗ್‌ ಹಾಗೂ ಆರ್ಚರಿಯಲ್ಲಿ ಸ್ಪರ್ಧಿಸಲಿದೆ.