* ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲ ದಿನವೇ ನಿರಾಸೆ* ಟೇಬಲ್ ಟೆನಿಸ್‌ನಲ್ಲಿ ಸೋಲು ಕಂಡ ಭಾರತ ತಂಡ* ಭಾರತದ ಟೇಬಲ್‌ ಟೆನಿಸ್‌ ಆಟಗಾರ್ತಿಯರಿಗೆ ನಿರಾಸೆ

ಟೋಕಿಯೋ(ಆ.26): 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಸೋಲಿನ ಆರಂಭ ಪಡೆದಿದೆ. ಮೊದಲ ದಿನವಾದ ಬುಧವಾರ ಭಾರತದ ಟೇಬಲ್‌ ಟೆನಿಸ್‌ ಆಟಗಾರ್ತಿಯರು ಸೋಲುವ ಮೂಲಕ ನಿರಾಸೆ ಮೂಡಿಸಿದ್ದಾರೆ. 

ವೈಯಕ್ತಿಕ ಸಿ3 ವಿಭಾಗದ ‘ಡಿ’ಗುಂಪಿನ ಪಂದ್ಯದಲ್ಲಿ ಸೋನಲ್‌ ಪಟೇಲ್‌ ಚೀನಾದ ಲಿ ಖ್ವಾನ್‌ ವಿರುದ್ಧ 2-3 ಸೆಟ್‌ಗಳಲ್ಲಿ ಸೋತರೆ, ವೈಯಕ್ತಿಕ ಸಿ4 ವಿಭಾಗದ ‘ಎ’ಗುಂಪಿನ ಪಂದ್ಯದಲ್ಲಿ ಭವಿನಾ ಪಟೇಲ್‌ ಚೀನಾದ ಝೊಯು ಯಿಂಗ್‌ ವಿರುದ್ಧ 3-0 ನೇರ ಸೆಟ್‌ಗಳಲ್ಲಿ ಸೋಲುಂಡರು. 

ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ವರ್ಣರಂಜಿತ ಚಾಲನೆ

Scroll to load tweet…

ಗುರುವಾರ ತನ್ನ 2ನೇ ಪಂದ್ಯದಲ್ಲಿ ಸೋನಲ್‌ ದಕ್ಷಿಣ ಕೊರಿಯಾದ ಮಿ ಗ್ಯುಲಿ ವಿರುದ್ಧ ಸೆಣಸಲಿದ್ದಾರೆ. ಭವಿನಾ ಗುಂಪು ಹಂತದ ತಮ್ಮ ಮುಂದಿನ ಪಂದ್ಯದಲ್ಲಿ ಗ್ರೇಟ್‌ ಬ್ರಿಟನ್‌ನ ಮೆಗನ್‌ ಶಾಕ್ಲಟೋನ್‌ರನ್ನು ಎದುರಿಸಲಿದ್ದಾರೆ.