ಟೋಕಿಯೋ ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಈ ಬಾರಿ 10ಕ್ಕೂ ಹೆಚ್ಚು ಪದಕ ಗೆಲ್ಲುವ ನಿರೀಕ್ಷೆ
* ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭ
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಬಾರಿ 54 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ
* ಈ ಬಾರಿ ಕನಿಷ್ಠ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವ ನಿರೀಕ್ಷೆ
ಟೋಕಿಯೋ(ಆ.23): ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 10ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಈ ಪೈಕಿ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸಾಧನೆ ಮಾಡಿರುವ, ಭಾರೀ ನಿರೀಕ್ಷೆ ಮೂಡಿಸಿರುವ ಅಗ್ರ 5 ಕ್ರೀಡಾಪಟುಗಳ ಪರಿಚಯ ಇಲ್ಲಿದೆ.
1. ದೇವೇಂದ್ರ ಝಝಾರಿಯಾ, ಜಾವೆಲಿನ್ ಥ್ರೋ
ಪ್ಯಾರಾಲಿಂಪಿಕ್ಸ್‌ನಲ್ಲಿ ಈಗಾಗಲೇ 2 ಚಿನ್ನ ಗೆದ್ದಿರುವ ದೇವೇಂದ್ರ ಝಝಾರಿಯಾ 3ನೇ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಎಫ್46 ವಿಭಾಗದಲ್ಲಿ ಸ್ಪರ್ಧಿಸಲಿರುವ 40 ವರ್ಷದ ದೇವೇಂದ್ರ, ಕಳೆದ ತಿಂಗಳಷ್ಟೇ 65.71 ಮೀ. ದೂರಕ್ಕೆ ಜಾವೆಲಿನ್ ಎಸೆದು ತಮ್ಮ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಉತ್ತಮಗೊಳಿಸಿಕೊಂಡಿದ್ದರು.
2. ಸುಹಾಸ್ ಯತಿರಾಜ್, ಬ್ಯಾಡ್ಮಿಂಟನ್
ಕರ್ನಾಟಕ ಮೂಲದ ಸುಹಾಸ್ ಯತಿರಾಜ್ ಒಬ್ಬ ಐಎಎಸ್ ಅಧಿಕಾರಿ. ಉತ್ತರ ಪ್ರದೇಶದ ಗೌತಮ್‌ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಪ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 2018ರ ಏಷ್ಯನ್ ಪ್ಯಾರಾಗೇಮ್ಸ್‌ನಲ್ಲಿ ಕಂಚು, 2016ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು.
ಟೋಕಿಯೋ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ 11 ಮಂದಿ ಭಾಗಿ
3. ಮರಿಯಪ್ಪನ್ ತಂಗವೇಲು, ಹೈಜಂಪ್
ರಿಯೋ ಪ್ಯಾರಾಲಿಂಪಿಕ್ಸ್‌ನ ಟಿ42 ವಿಭಾಗದ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮರಿಯಪ್ಪನ್ ತಂಗವೇಲು, 2019ರ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು. ಅವರು ಈ ಬಾರಿಯೂ ಪದಕ ಸಾಧನೆ ಮಾಡುವ ನೆಚ್ಚಿನ ಕ್ರೀಡಾಪಟುಗಳಲ್ಲಿ ಒಬ್ಬರೆನಿಸಿದ್ದಾರೆ.
4. ಮನೀಶ್ ನರ್ವಾಲ್, ಪ್ಯಾರಾ ಶೂಟಿಂಗ್
ಪ್ಯಾರಾ ಗೇಮ್ಸ್ ವಿಭಾಗದ ಪುರುಷರ 10 ಮೀ. ಏರ್ ಪಿಸ್ತೂಲ್ ಶೂಟಿಂಗ್‌ನ ವಿಶ್ವ ರಾರಯಂಕಿಂಗ್‌ನಲ್ಲಿ ಮನೀಶ್ ನರ್ವಾಲ್ 4ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಮೇ ತಿಂಗಳಲ್ಲಿ ವಿಶ್ವ ಪ್ಯಾರಾ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.
5. ಏಕ್ತಾ ಭ್ಯಾನ್, ಡಿಸ್ಕಸ್ ಥ್ರೋ
2016ರಲ್ಲಿ ಕ್ರೀಡೆಗೆ ಕಾಲಿಟ್ಟಹರಾರಯಣದ ಏಕ್ತಾ ಭ್ಯಾನ್ ಅನೇಕ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ಭಾರತದ ನಂ.1 ಡಿಸ್ಕಸ್ ಥ್ರೋ ಹಾಗೂ ಕ್ಲಬ್ ಥ್ರೋ ಪಟುವಾಗಿ ರೂಪುಗೊಂಡಿದ್ದಾರೆ. ಮಹಿಳೆಯರ ಎಫ್51 ವಿಭಾಗದಲ್ಲಿ 36 ವರ್ಷದ ಏಕ್ತಾ ಸ್ಪರ್ಧಿಸಲಿದ್ದು, ಪದಕ ನಿರೀಕ್ಷೆಯಲ್ಲಿದ್ದಾರೆ.