* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ 13ನೇ ಪದಕ* ಆರ್ಚರಿಯಲ್ಲಿ ಕಂಚಿನ ಪದಕ ಗೆದ್ದ ಹರ್ವಿಂದರ್‌ ಸಿಂಗ್‌* ಪ್ಯಾರಾಲಿಂಪಿಕ್ಸ್‌ನ ಆರ್ಚರಿಯಲ್ಲಿ ದೇಶಕ್ಕೆ ಪದಕ ಗೆದ್ದ ಮೊದಲ ಆರ್ಚರಿಪಟು ಹರ್ವಿಂದರ್

ಟೋಕಿಯೋ(ಸೆ.03): ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾಥ್ಲೀಟ್‌ಗಳ ಪದಕಗಳ ಬೇಟೆ ಮುಂದುವರೆದಿದ್ದು, ಪುರುಷರ ವೈಯುಕ್ತಿಕ ರಿಕರ್ವ್ ಆರ್ಚರಿ ಸ್ಪರ್ಧೆಯಲ್ಲಿ ಹರ್ವಿಂದರ್ ಸಿಂಗ್ ಕಂಚಿನ ಪದಕ ಜಯಿಸಿದ್ದಾರೆ. ಇದರೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಆರ್ಚರಿ ಪಟು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಕೊರಿಯಾದ ಪ್ರತಿಸ್ಪರ್ಧಿ ಎದುರು 6-5 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ಪ್ಯಾರಾ ಆರ್ಚರಿಪಟುಗಳು ಸಮಬಲ ಸಾಧಿಸಿದ್ದರು. ಹೀಗಾಗಿ ಫಲಿತಾಂಶಕ್ಕಾಗಿ ಶಾಟ್‌ಆಫ್‌ ಮೊರೆ ಹೋಗಲಾಯಿತು. ಶಾಟ್‌ಆಫ್‌ನಲ್ಲಿ ಹರ್ವಿಂದರ್ ಫರ್ಫೆಕ್ಟ್ 10 ಅಂಕ ಗಳಿಸಿದರೆ, ಕಿಮ್ ಮಿನ್‌ ಸು 8 ಅಂಕ ಗಳಿಸಲಷ್ಟೇ ಶಕ್ತರಾದರು.

Scroll to load tweet…
Scroll to load tweet…

ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖರಾ

ಹರ್ಯಾಣ ಮೂಲದ ಅರ್ಚರಿ ಪಟು ಪದಕ ಗೆದ್ದು, ಹೊಸ ಇತಿಹಾಸ ನಿರ್ಮಿಸಿದ್ದಲ್ಲದೇ, ಪದಕಗಳ ಸಂಖ್ಯೆಯನ್ನು 13ಕ್ಕೆ ಹೆಚ್ಚಿಸಿದ್ದು, ಭಾರತ ಇನ್ನಷ್ಟು ಪದಕ ಬೇಟೆಯಾಡುವ ನಿರೀಕ್ಷೆಯಿದೆ.