ಪ್ಯಾರಾ ಒಲಿಂಪಿಕ್ಸ್; ಬೆಳ್ಳಿ ಗೆದ್ದ ಭವಿನಾ ಪಟೇಲ್‌ಗೆ 3 ಕೋಟಿ ರೂ ಬಹುಮಾನ ಘೋಷಣೆ!
- ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಭವಿನಾ ಪಟೇಲ್
- ಬೆಳ್ಳಿ ಪದಕ ಗೆದ್ದ ಭವಿನಾಗೆ 3 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಗುಜರಾತ್
- ಟೇಬಲ್ ಟೆನಿಸ್‌ನಲ್ಲಿ ದೊರತೆ ಮೊದಲ ಒಲಿಂಪಿಕ್ ಪದಕಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಅಹಮ್ಮದಾಬಾದ್(ಆ.29): ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ದಿಟ್ಟ ಹೋರಾಟ ನೀಡುತ್ತಿದ್ದಾರೆ. ಇದರ ಫಲವಾಗಿ ಭಾರತ ಮೊದಲ ಪದಕ ಗೆದ್ದುಕೊಂಡಿದೆ. ಟೇಬಲ್ ಟೆನಿಸ್‌ನಲ್ಲಿ ಭವಿನಾ ಪಟೇಲ್ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭವಿನಾ ಪಟೇಲ್ ಸಾಧನೆಗೆ ಇದೀಗ ಗುಜರಾತ್ ಸರ್ಕಾರ 3 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.
Tokyo Paralympics, ಬೆಳ್ಳಿ ತಂದ ಭಾರತಾಂಬೆಯ ಮಗಳು, ಭವಿನಾ ಪಟೇಲ್‌ಗೆ ಶುಭ ಹಾರೈಸಿದ ಮೋದಿ!
ಪ್ಯಾರಾ ಒಲಿಂಪಿಕ್ಸ್ ಟೇಬಲ್ ಟೆನಿಸ್ ಫೈನಲ್ ಸುತ್ತಿನಲ್ಲಿ ಭವಿನಾ ಪಟೇಲ್, ಚೀನಾದ ಯಿಂಗ್ ಝೊಹು ವಿರುದ್ಧ ಸೆಣಸಾಣ ನಡೆಸಿದ್ದರು. 0-3 ಅಂತರಿಂದ ಮುಗ್ಗರಿಸಿದ ಭವಿನಾ ಬೆಳ್ಳಿ ಪದಕ ಬಾಚಿಕೊಂಡರು. ಗುಜರಾತ್‌ನ ಮೆಹಸಾನ ಜಿಲ್ಲೆಯ ಸುಂಧಿಯಾ ಗ್ರಾಮದ ನಿವಾಸಿಯಾಗಿರುವ ಭವಿನಾ ಪಟೇಲ್ ಪದಕ ಗೆದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಗುಜರಾತ್ ಸರ್ಕಾರ ಬಹುಮಾನ ಘೋಷಿಸಿತು.
ಒಲಿಂಪಿಕ್ಸ್ ಕೂಟದಲ್ಲಿ ಭವಿನಾ ಪಟೇಲ್ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ದಿವ್ಯಾಂಗನ್ ಖೇಲ್ ಪ್ರತಿಭಾ ಪ್ರೋತ್ಸಾಹನ್ ಪುರಸ್ಕಾರ ಯೋಜನೆ ಅಡಿಯಲ್ಲಿ 3 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಭವಿನಾ ಪಟೇಲ್ ಗುಜರಾತ್ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾಳೆ ಎಂದು ರೂಪಾನಿ ಹೇಳಿದ್ದಾರೆ.
ಪ್ಯಾರಾಲಿಂಪಿಕ್ಸ್: ರಾಜ್ಯದ ಪವರ್ ಲಿಫ್ಟರ್ ಸಕಿನಾಗೆ 5ನೇ ಸ್ಥಾನ
ಭವಿನಾ ಪಟೇಲ್ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಮಿಯೋ ಝಾಂಗ್ ವಿರುದ್ಧ 7-11 11-7 11-4 9-11 11-8 ಅಂತರದಲ್ಲಿ ಗೆಲುವು ಸಾಧಿಸಿದ ಪದಕ ಖಚಿತಪಡಿಸಿಕೊಂಡಿದ್ದರು. ಫೈನಲ್ ಸುತ್ತಿನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಪ್ಯಾರಾ ಒಲಿಂಪಿಕ್ಸ್ ಕ್ರೀಡೆಯ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತ ಪಡೆದ ಮೊದಲ ಪದಕ ಇದಾಗಿದೆ.
ಭವಿನಾ ಪಟೇಲ್ ಅತ್ಯಂತ ಕಠಿಣ ಬದುಕಿನ ಹಾದಿಯನ್ನು ಸವೆಸಿದ್ದಾರೆ. ಕೇವಲ 12 ತಿಂಗಳಲ್ಲಿ ಪೊಲಿಯೋಗೆ ತುತ್ತಾದ ಭವಿನಾ ಪಟೇಲ್ ಕಾಲಿನ ಸ್ವಾಧೀನ ಕಳೆದುಕೊಂಡರು. ವೈಕಲ್ಯವನ್ನು ಮೆಟ್ಟಿ ನಿಂತ ಭವಿನಾ, ಸತತ ಅಭ್ಯಾಸ, ಹಾಗೂ ಶ್ರದ್ಧೆಯಿಂದ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಗಮನ ಕೇಂದ್ರೀಕರಿಸಿದರು. ಛಲ ಬಿಡದ ಭವಿನಾ ಪಟೇಲ್ ಇದೀಗ ಬೆಳ್ಳಿ ಪದಕ ಗೆಲ್ಲೋ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.