* ಪ್ಯಾರಾಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಟೇಬಲ್‌ ಟೆನಿಸ್‌ ಪಟು* ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭವಿನಾ* ವಿಶ್ವ ನಂ.1 ಚೀನಾದ ಯಿಂಗ್‌ ಝೊಹು ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಾಡಿದ ಭವಿನಾ

ಟೋಕಿಯೋ(ಆ.29): ಟೋಕಿಯೋ: ಪ್ಯಾರಾಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಟೇಬಲ್‌ ಟೆನಿಸ್‌ ಪಟು ಎನ್ನುವ ದಾಖಲೆ ಬರೆದಿದ್ದ ಭವಿನಾ ಪಟೇಲ್‌ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ 34 ವರ್ಷದ ಭವಿನಾ, ವಿಶ್ವ ನಂ.1 ಚೀನಾದ ಯಿಂಗ್‌ ಝೊಹು ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಾಡಿ, ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಪದಕವೆನಿಸಿದೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಚೀನಾದ ಯಿಂಗ್‌ ಝೊಹು ವಿರುದ್ಧ 3-0 ಅಂತರದಿಂದ ಸೋತು ಬೆಳ್ಳಿ ಪದಕ ಗೆದ್ದರು. ಈ ಬೆಳ್ಳಿ ಪದಕದೊಂದಿಗೆ, ಭವಿನಾ ಗೇಮ್ಸ್‌ನಲ್ಲಿ ಭಾರತದ ಮೊದಲ ಪದಕ ವಿಜೇತರಾದರು. ಇದು ಟೇಬಲ್ ಟೆನಿಸ್‌ನಲ್ಲಿ ಭಾರತದ ಮೊದಲ ಒಲಿಂಪಿಕ್ ಪದಕವಾಗಿದೆ.

Scroll to load tweet…

ಪ್ರಧಾನಿ ಮೋದಿಯವರು ಭಾವನಾ ಪಟೇಲ್ ಅವರೊಂದಿಗೆ ಮಾತನಾಡಿ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಅಭಿನಂದಿಸಿದ್ದಾರೆ. ಇದರೊಂದಿಗೆ, ಪ್ರಧಾನಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಅವರು ಇತಿಹಾಸವನ್ನು ರಚಿಸಿದ್ದಾರೆ ಎಂದು ಉತ್ಸಾಹದಿಂದ ಹೇಳಿದರು. ಅವರ ಮುಂದಿನ ಪ್ರಯತ್ನಗಳಿಗೆ ಅವರು ಶುಭ ಹಾರೈಸಿದ್ದಾರೆ

1 ವರ್ಷವಿದ್ದಾಗಲೇ ಪೋಲಿಯೋಗೆ ಗುರಿಯಾಗಿದ್ದ ಭವಿನಾ ಪಟೇಲ್‌

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸುಂಧಿಯಾ ಎನ್ನುವ ಗ್ರಾಮದ ಸಣ್ಣ ವ್ಯಾಪಾರಿ ಹಸ್ಮುಖ್‌ಭಾಯ್‌ ಪಟೇಲ್‌ರ ಪುತ್ರಿ ಭವಿನಾ 1 ವರ್ಷವಿದ್ದಾಗಲೇ ಪೋಲಿಯೋಗೆ ಗುರಿಯಾಗಿದ್ದರು. 13 ವರ್ಷಗಳ ಹಿಂದೆ ಅಹಮದಾಬ್‌ನ ಅಂಧರ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಅಂಧ ಮಕ್ಕಳು ಟೇಬಲ್‌ ಟೆನಿಸ್‌ ಆಡುವುದುನ್ನು ನೋಡಿ ಸ್ಫೂರ್ತಿ ಪಡೆದ ಭವಿನಾ ತಾವೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಿರಿಯರ ವಿಭಾಗದಲ್ಲಿ ಗುಜರಾತ್‌ ತಂಡವನ್ನು ಪ್ರತಿನಿಧಿಸಿದ್ದ ಕ್ರಿಕೆಟಿಗ ನಿಕುಂಜ್‌ ಪಟೇಲ್‌ರನ್ನು ವಿವಾಹವಾದ ಬಳಿಕವೂ ಭವಿನಾ ಕ್ರೀಡೆಯಲ್ಲಿ ಮುಂದುವರಿದರು. 2011ರಲ್ಲಿ ವಿಶ್ವ ರಾರ‍ಯಂಕಿಂಗ್‌ನಲ್ಲಿ 2ನೇ ಸ್ಥಾನ ತಲುಪಿದ್ದ ಭವಿನಾ, 2013ರ ಏಷ್ಯನ್‌ ಪ್ಯಾರಾ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.