Asianet Suvarna News Asianet Suvarna News

ಟೋಕಿಯೋ 2020: ಇತಿಹಾಸ ಬರೆಯುತ್ತಾ ಮಹಿಳಾ ಹಾಕಿ ತಂಡ?

* ಭಾರತ ಮಹಿಳಾ ಹಾಕಿ ತಂಡಕ್ಕಿಂದು ಆಸ್ಟ್ರೇಲಿಯಾ ಸವಾಲ

* ಸೆಮಿಫೈನಲ್‌ಗೇರುವ ತವಕದಲ್ಲಿ ರಾಣೀ ರಾಂಪಾಲ್ ಪಡೆ

* ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಎದುರಾಳಿ

Tokyo Olympics Indian Womens Hockey Team take on Australia in Quarter Final Match kvn
Author
Tokyo, First Published Aug 2, 2021, 8:39 AM IST
  • Facebook
  • Twitter
  • Whatsapp

ಟೋಕಿಯೋ(ಆ.02): ರಾಣಿ ರಾಂಪಾಲ್‌ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ಗ್ರೂಪ್‌ ಹಂತದಲ್ಲಿ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ಕ್ವಾರ್ಟರ್‌ ಫೈನಲ್‌ಗೇರಿದ ಸಾಧನೆ ಮಾಡಿದೆ. ಇದರೊಂದಿಗೆ ಮಹಿಳಾ ಹಾಕಿ ತಂಡದ ಮೇಲೂ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಸೋಮವಾರವಾದ ಇಂದು ನಡೆಯಲಿರುವ ನಾಕೌಟ್ ಹಂತದ ಪಂದ್ಯದಲ್ಲಿ ರಾಣಿ ರಾಂಪಾಲ್‌ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಸತತ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಭಾರತ ಹಾಕಿ ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಎದುರು ಗೆಲ್ಲುವ ಮೂಲಕ 6 ಅಂಕಗಳೊಂದಿಗೆ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಚಕ್‌ ದೇ ಇಂಡಿಯಾ; ಬ್ರಿಟೀಷರನ್ನು ಬಗ್ಗುಬಡಿದು ಒಲಿಂಪಿಕ್ಸ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಹಾಕಿ ಇಂಡಿಯಾ

ಇದೀಗ ಆಸ್ಟ್ರೇಲಿಯಾ ಸವಾಲನ್ನು ಮೆಟ್ಟಿನಿಂತು ಮೊದಲ ಬಾರಿಗೆ ಸೆಮೀಸ್‌ ಪ್ರವೇಶಿಸುವ ತವಕದಲ್ಲಿ ವನಿತೆಯರಿದ್ದಾರೆ. 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದಿರುವುದೇ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಶ್ರೇಷ್ಠ ಸಾಧನೆ ಎನಿಸಿದೆ.
 

Follow Us:
Download App:
  • android
  • ios