Asianet Suvarna News Asianet Suvarna News

ಒಲಿಂಪಿಕ್ಸ್‌ ಹಾಕಿ: ಕ್ವಾರ್ಟರ್‌ ಸ್ಥಾನದ ಮೇಲೆ ಭಾರತ ಕಣ್ಣು

* ಭಾರತಕ್ಕಿಂದು ಬಲಿಷ್ಠ ಅರ್ಜೆಂಟೀನಾ ಸವಾಲು

* ಕ್ವಾರ್ಟರ್ ಫೈನಲ್‌ ಮೇಲೆ ಕಣ್ಣಿಟ್ಟಿರುವ ಭಾರತ ಹಾಕಿ ತಂಡ

* ಕಳೆದೊಂದು ವರ್ಷದಲ್ಲಿ ಅರ್ಜೆಂಟೀನಾ ಮೇಲೆ ಉತ್ತಮ ಪ್ರದರ್ಶನ ನೀಡಿರುವ ಭಾರತ

Tokyo Olympics Indian Hockey Team Take on Argentina and eyes on Quarterfinal kvn
Author
Tokyo, First Published Jul 29, 2021, 6:50 AM IST

ಟೋಕಿಯೋ(ಜು.29): ಭಾರತ ಪುರುಷರ ಹಾಕಿ ತಂಡ ಗುರುವಾರ ‘ಎ’ ಗುಂಪಿನ 4ನೇ ಪಂದ್ಯದಲ್ಲಿ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಅರ್ಜೆಂಟೀನಾ ವಿರುದ್ಧ ಸೆಣಸಲಿದ್ದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. 

3 ಪಂದ್ಯಗಳಲ್ಲಿ 2 ಗೆಲುವು, 1 ಸೋಲಿನೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಭಾರತಕ್ಕೆ ಇನ್ನು 2 ಪಂದ್ಯ ಬಾಕಿ ಇದೆ. ಅರ್ಜೆಂಟೀನಾ ವಿರುದ್ಧ ಕಳೆದ ಒಂದೆರಡು ವರ್ಷಗಳಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ. ಈ ವರ್ಷದ ಆರಂಭದಲ್ಲಿ ನಡೆದ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಒಂದು ಪಂದ್ಯ ಗೆದ್ದು ಮತ್ತೊಂದನ್ನು ಡ್ರಾ ಮಾಡಿಕೊಂಡಿದ್ದ ಭಾರತ, ಒಲಿಂಪಿಕ್ಸ್‌ ಸಿದ್ಧತೆಗಾಗಿ ಅರ್ಜೆಂಟೀನಾ ಪ್ರವಾಸ ಕೈಗೊಂಡಿದ್ದ ವೇಳೆಯೂ ಭರ್ಜರಿ ಪ್ರದರ್ಶನ ತೋರಿತ್ತು.

ಟೋಕಿಯೋ 2020: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಪೂಜಾ ರಾಣಿ

ಭಾರತದ ಇಂದಿನ ಸ್ಪರ್ಧೆಗಳು

ಆರ್ಚರಿ: ಪುರುಷರ ವೈಯಕ್ತಿಕ ವಿಭಾಗ ಮೊದಲ ಸುತ್ತು (ಅತನು) ಬೆಳಗ್ಗೆ 7.30ಕ್ಕೆ

ಬ್ಯಾಡ್ಮಿಂಟನ್‌: ಮಹಿಳಾ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ (ಪಿ.ವಿ.ಸಿಂಧು) ಬೆಳಗ್ಗೆ 6.15ಕ್ಕೆ

ಬಾಕ್ಸಿಂಗ್‌: ಪುರುಷರ +91 ಕೆ.ಜಿ. ಪ್ರಿ ಕ್ವಾರ್ಟರ್‌ (ಸತೀಶ್‌ ಕುಮಾರ್‌) ಬೆಳಗ್ಗೆ 8.45ಕ್ಕೆ

ಮಹಿಳೆಯರ 51 ಕೆ.ಜಿ. ಪ್ರಿ ಕ್ವಾರ್ಟರ್‌ (ಮೇರಿ ಕೋಮ್‌) ಮಧ್ಯಾಹ್ನ 3.35ಕ್ಕೆ

ಈಕ್ವೆಸ್ಟ್ರಿಯನ್‌: ಮೊದಲ ಸುತ್ತಿನ ಅಶ್ವ ಪರಿಶೀಲನೆ (ಫೌಹಾದ್‌) ಬೆಳಗ್ಗೆ 6ಕ್ಕೆ

ಗಾಲ್ಫ್: ಪುರುಷರ ವೈಯಕ್ತಿಕ ವಿಭಾಗದ ಸ್ಟೊ್ರೕಕ್‌ ಪ್ಲೇ ಮೊದಲ ಸುತ್ತು(ಅನಿರ್ಬನ್‌, ಉದಯನ್‌) ಬೆಳಗ್ಗೆ 4ಕ್ಕೆ

ಪುರುಷರ ಹಾಕಿ: ‘ಎ’ ಗುಂಪಿನ ಪಂದ್ಯ (ಭಾರತ-ಅರ್ಜೆಂಟೀನಾ) ಬೆಳಗ್ಗೆ 6ಕ್ಕೆ

ರೋಯಿಂಗ್‌: ಪುರುಷರ ಲೈಟ್‌ವೇಟ್‌ ಡಬಲ್‌ ಸ್ಕಲ್ಸ್‌ ಫೈನಲ್‌ ‘ಬಿ’ (ಅರ್ಜುನ್‌/ಅರವಿಂದ್‌, ರಾರ‍ಯಂಕಿಂಗ್‌ಗಾಗಿ, ಪದಕ ಸುತ್ತಲ್ಲ) ಬೆಳಗ್ಗೆ 5.20ಕ್ಕೆ

ಸೈಲಿಂಗ್‌: ಪುರುಷರ ಸ್ಕಿಫ್‌ 49ಇಆರ್‌ ರೇಸ್‌ 5, 6(ಗಣಪತಿ/ವರುಣ್‌) ಬೆಳಗ್ಗೆ 8.35ಕ್ಕೆ

ಮಹಿಳೆಯರ ಲೇಸರ್‌ ರೇಡಿಯಲ್‌ ರೇಸ್‌ 7,8 (ನೇತ್ರಾ) ಬೆಳಗ್ಗೆ 8.45ಕ್ಕೆ

ಪುರುಷರ ಲೇಸರ್‌ ರೇಸ್‌ 7,8 (ವಿಷ್ಣು) ಬೆಳಗ್ಗೆ 8.35ಕ್ಕೆ

ಶೂಟಿಂಗ್‌: ಮಹಿಳೆಯರ 25 ಮೀ. ಪಿಸ್ತೂಲ್‌ ಅರ್ಹತಾ ಸುತ್ತು 1 (ರಾಹಿ, ಮನು) ಬೆಳಗ್ಗೆ 5.30ಕ್ಕೆ
 

Follow Us:
Download App:
  • android
  • ios