ಒಲಿಂಪಿಕ್ಸ್ ವಿಳಂಬ: 20,000 ಕೋಟಿ ರುಪಾಯಿ ಹೊರೆ!
2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 2021ಕ್ಕೆ ಮುಂದೂಡಲ್ಪಟ್ಟಿದ್ದರಿಂದ ಆಯೋಜಕರಿಗೆ ಬರೋಬ್ಬರಿ 20 ಸಾವಿರ ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಟೋಕಿಯೋ(ಡಿ.05): ಕೊರೋನಾ ಸೋಂಕಿನಿಂದಾಗಿ 2021ಕ್ಕೆ ಮುಂದೂಡಲ್ಪಟ್ಟಿರುವ 2020ರ ಟೋಕಿಯೋ ಒಲಿಂಪಿಕ್ಸ್‌ನಿಂದಾಗಿ 2.8 ಬಿಲಿಯನ್ ಡಾಲರ್ (ಅಂದಾಜು 20000 ಕೋಟಿ ರು.) ಹೊರೆಯಾಗಲಿದೆ ಎಂದು ಟೋಕಿಯೋ ಒಲಿಂಪಿಕ್ಸ್ ಆಯೋಜನಾ ಸಮಿತಿ, ಟೋಕಿಯೋ ಸಿಟಿ ಹಾಗೂ ಜಪಾನ್ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ.
ಕ್ರೀಡಾಕೂಟದ ಒಟ್ಟಾರೆ ಬಜೆಟ್ 12.6 ಬಿಲಿಯನ್ ಡಾಲರ್ ಆಗಲಿದೆ ಎಂದು ಈ ಮೊದಲು ಅಂದಾಜಿಸಲಾಗಿತ್ತು. ಆದರೆ ಆ ಮೊತ್ತ ಏರಿಕೆಯಾಗಲಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹಾಗೂ ಜಪಾನ್ ಸರ್ಕಾರ ಹೆಚ್ಚುವರಿ ಮೊತ್ತವನ್ನು ಸಮನಾಗಿ ಭರಿಸುವುದಾಗಿ ತಿಳಿಸಿವೆ. 2021ರ ಜುಲೈ 23ರಿಂದ ಕ್ರೀಡಾಕೂಟ ಆರಂಭಗೊಳ್ಳಲಿದೆ.
ಒಲಿಂಪಿಕ್ಸ್‌ಲ್ಲಿ ಟಿ20 ಕ್ರಿಕೆಟ್ ಸೇರಿಸಬೇಕು: ರಾಹುಲ್ ದ್ರಾವಿಡ್
2020ರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಮುಂದೂಡಲ್ಪಟ್ಟಿದ್ದರಿಂದ ಶೇ.50% ವೆಚ್ಚ ಕಡಿತ ಮಾಡಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಹಾಗೂ ಟೋಕಿಯೋ ಕ್ರೀಡಾಕೂಟ ಸಮಿತಿ ನಿರ್ಧರಿಸಿದೆ. ಇದಾರ ಮುಂದುವರಿದ ಭಾಗವಾಗಿ ಕ್ರೀಡಾಕೂಟಕ್ಕೆ ಸಿಬ್ಬಂದಿ ವರ್ಗಕ್ಕೆ ಸಂಖ್ಯೆಯ ಮಿತಿ ಹೇರಲಾಗಿದೆ. ಇತ್ತು ಹತ್ತು-ಹಲವು ಉಳಿತಾಯದ ಕ್ರಮಕ್ಕೆ ಒಲಿಂಪಿಕ್ ಸಮಿತಿ ಮುಂದಾಗಿದೆ.