* ಟೋಕಿಯೋ ಒಲಿಂಪಿಕ್ಸ್‌ಗೆ ಕೋವಿಡ್‌ ಭೀತಿ* 10 ಸಾವಿರ ಪ್ರೇಕ್ಷಕರಿಗೆ ಅವಕಾಶ ನೀಡಲು ಜಪಾನ್ ಸರ್ಕಾರ ಚಿಂತನೆ* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭ 

ಟೋಕಿಯೋ(ಜೂ.16): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ವೀಕ್ಷಿಸಲು ಕೇವಲ 10,000 ಅಭಿಮಾನಿಗಳಿಗೆ ಮಾತ್ರ ಅವಕಾಶ ನೀಡಲು ಜಪಾನ್ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಸಂಪುಟದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸದ್ಯ ಜಪಾನಿನಲ್ಲಿ ಟೋಕಿಯೋ ನಗರವೂ ಸೇರಿದಂತೆ ವಿವಿಧ ನಗರಗಳಲ್ಲಿ ಕೊರೋನಾ ಭೀತಿಯಿಂದಾಗಿ ಜೂನ್ 20ರವರೆಗೆ ಲಾಕ್‌ಡೌನ್ ಮಾಡಲಾಗಿದೆ. ಹೀಗಾಗಿ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯುವ ಸ್ಥಳದ ಸಾಮರ್ಥ್ಯದ 50% ಅಥವಾ 10,000 ಇವೆರಡಲ್ಲಿ ಯಾವುದು ಕಡಿಮೆ ಇರಲಿದೆಯೋ ಅಷ್ಟು ಮಂದಿಗೆ ಒಲಿಂಪಿಕ್ಸ್‌ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಜಪಾನ್ ಕ್ಯಾಬಿನೆಟ್ ಸಚಿವ ಯಶುತೋಶಿ ನಿಶಿಮುರಾ ತಿಳಿಸಿದ್ದಾರೆ. ಎಷ್ಟು ಮಂದಿ ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎನ್ನುವುದನ್ನು ಇನ್ನೊಂದು ವಾರದಲ್ಲಿ ಆಯೋಜಕರು ತೀರ್ಮಾನ ಪ್ರಕಟಿಸಲಿದ್ದಾರೆ.

ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ವಿದೇಶಿ ವೀಕ್ಷಕರಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಂತೆ ಆಯೋಜಕರು ಈಗಾಗಲೇ ನಿಷೇಧ ಹೇರಲಾಗಿದೆ. ಇನ್ನು ದೇಸಿ ಪ್ರೇಕ್ಷಕರಿಗೆ ಒಲಿಂಪಿಕ್ಸ್‌ ಸ್ಟೇಡಿಯಂ ಪ್ರವೇಶಿಸುವ ಕುರಿತಂತೆ ಆಯೋಜಕರು ಸಾಕಷ್ಟು ಅಳೆದು-ತೂಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. 

ಒಲಿಂಪಿಕ್ಸ್ ಕ್ರೀಡಾಪಟುಗಳನ್ನು ಕೊರೋನಾ ಪಾಸಿಟಿವ್ ಕಾರಣ ಅನರ್ಹಗೊಳಿಸುವುದಿಲ್ಲ; IOC!

ಉಳಿದ ದೇಶಗಳಿಗೆ ಹೋಲಿಸಿದರೆ ಜಪಾನಿನಲ್ಲಿ ಇದುವರೆಗೂ ಕೋವಿಡ್‌ ಸ್ಪೋಟವೇನೂ ಆಗಿಲ್ಲ, ಕಠಿಣ ಲಾಕ್‌ಡೌನ್‌ ಪರಿಣಾಮ ಇದುವರೆಗೂ ಹದಿನಾಲ್ಕುವರೆ ಸಾವಿರ ಮಂದಿಯನ್ನು ಕೊರೋನಾ ಬಲಿ ಪಡೆದಿದೆ. ಆದರೆ ಜಪಾನಿನಲ್ಲಿ ಲಸಿಕೆ ನೀಡುವ ವಿಚಾರದಲ್ಲಿ ಮಾತ್ರ ಸಾಕಷ್ಟು ಹಿಂದುಳಿದಿದೆ. ಜಪಾನ್ ಜನಸಂಖ್ಯೆಯಲ್ಲಿ ಇದುವರೆಗೂ ಕೇವಲ 5% ಮಂದಿ ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona