ಟೋಕಿಯೋ 2020 ಆರ್ಚರಿ: ಕ್ವಾರ್ಟರ್‌ನಲ್ಲಿ ಸೋತ ದೀಪಿಕಾ-ಪ್ರವೀಣ್
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮಿಶ್ರ ಆರ್ಚರಿ ತಂಡದ ಹೋರಾಟ ಅಂತ್ಯ
* ಟಿಟಿ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮಿಶ್ರ ಫಲ
* ಮಹಿಳಾ ಸಿಂಗಲ್ಸ್ ಟಿಟಿಯಲ್ಲಿ ಮನಿಕಾ ಹಾಗೂ ಸುತೀರ್ಥ ಮುಖರ್ಜಿ 2ನೇ ಸುತ್ತಿಗೆ ಪ್ರವೇಶ
ಟೋಕಿಯೋ(ಜು.25): ಆರ್ಚರಿ ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ನಿರೀಕ್ಷೆಯಂತೆ ಕ್ವಾರ್ಟರ್‌ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಎದುರಾಯಿತು. 2-6ರಲ್ಲಿ ಭಾರತದ ದೀಪಿಕಾ ಕುಮಾರಿ-ಪ್ರವೀಣ್ ಜಾಧವ್ ಜೋಡಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೋಲುಂಡಿತು.
ಪ್ರಿ ಕ್ವಾರ್ಟರ್‌ನಲ್ಲಿ ಚೈನೀಸ್ ತೈಪೆ ವಿರುದ್ಧ 5-2ರಲ್ಲಿ ಭಾರತ ಗೆದ್ದಿತ್ತು. ಇನ್ನು ಜುಡೋ, ರೋಯಿಂಗ್‌ನಲ್ಲೂ ಭಾರತ ನೀರಸ ಪ್ರದರ್ಶನ ತೋರಿತು. ಬಾಕ್ಸಿಂಗ್ ಪುರುಷರ 69 ಕೆ.ಜಿ ವಿಭಾಗದ ಮೊದಲ ಸುತ್ತಿನಲ್ಲೇ ವಿಕಾಸ್ ಕೃಷನ್ ಸೋತು ಹೊರಬಿದ್ದರು.
ಟಿಟಿ, ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮಿಶ್ರ ಫಲ
ಟೋಕಿಯೋ: ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಭಾರತ ಮಿಶ್ರಫಲ ಅನುಭವಿಸಿತು. ಟಿಟಿ ಮಿಶ್ರ ಡಬಲ್ಸ್‌ನಲ್ಲಿ ಮನಿಕಾ ಬಾತ್ರಾ ಹಾಗೂ ಶರತ್ ಕಮಲ್ ಜೋಡಿ ಮೊದಲ ಸುತ್ತಿನಲ್ಲೇ ಸೋತರೆ, ಮಹಿಳಾ ಸಿಂಗಲ್ಸ್‌ನಲ್ಲಿ ಮನಿಕಾ ಹಾಗೂ ಸುತೀರ್ಥ ಮುಖರ್ಜಿ ಇಬ್ಬರೂ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಟೋಕಿಯೋ 2020: ದೈತ್ಯ ಸಂಹಾರ ಮಾಡಿದ ಸಾತ್ವಿಕ್‌ರಾಜ್-ಚಿರಾಗ್ ಶೆಟ್ಟಿ ಜೋಡಿ
ಇನ್ನು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನ ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಬಿ.ಸಾಯಿಪ್ರಣೀತ್ ಸೋಲು ಕಂಡರು. ಇದರಿಂದ ಅವರ ನಾಕೌಟ್ ಹಂತದ ಹಾದಿ ಕಠಿಣಗೊಂಡಿದೆ. ಇನ್ನು ಪುರುಷರ ಡಬಲ್ಸ್‌ನ ಮೊದಲ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಜೋಡಿ ವಿಶ್ವ ನಂ.3 ಚೈನೀಸ್ ತೈಪೆಯ ಯಾಂಗ್ ಲೀ ಹಾಗೂ ಚೀ-ಲೀ ವಾಂಗ್ ವಿರುದ್ಧ 21-16, 16-21, 27-25 ಗೇಮ್‌ಗಳಲ್ಲಿ ಜಯಿಸಿದರು. 2021ರಲ್ಲಿ 15-0 ಗೆಲುವು-ಸೋಲಿನ ದಾಖಲೆ ಹೊಂದಿದ್ದ ತೈಪೆ ಜೋಡಿಗೆ ಭಾರತೀಯ ಜೋಡಿ ಮೊದಲ ಸೋಲುಣಿಸಿತು.