* ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಭಾರತ ಹಾಕಿ ತಂಡಕ್ಕಿಂದು ಬೆಲ್ಜಿಯಂ ಎದುರಾಳಿ* ಫೈನಲ್‌ಗೇರುವ ತವಕದಲ್ಲಿ ಭಾರತೀಯ ಹಾಕಿ ತಂಡ* ಜಿದ್ದಾಜಿದ್ದಿನ ಪೈಪೋಟಿಗೆ ಕ್ಷಣಗಣನೆ ಆರಂಭ

ಟೋಕಿಯೋ(ಆ.03): ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಭಾರ ಹೊತ್ತು ಒಲಿಂಪಿಕ್ಸ್‌ನಲ್ಲಿ ಸೆಣಸುತ್ತಿರುವ ಭಾರತೀಯ ಪುರುಷರ ಹಾಕಿ ತಂಡದ ಪದಕ ಹಾದಿಯಲ್ಲಿ ವಿಶ್ವ ಚಾಂಪಿಯನ್‌ ಬೆಲ್ಜಿಯಂ ನಿಂತಿದೆ. ಮಂಗಳವಾರ ಸೆಮಿಫೈನಲ್‌ ಪಂದ್ಯ ನಡೆಯಲಿದ್ದು, ಬೆಲ್ಜಿಯಂ ವಿರುದ್ಧ ಗೆದ್ದರೆ 41 ವರ್ಷಗಳ ಬಳಿಕ ಭಾರತ, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿದೆ.

ಗ್ರೇಟ್‌ ಬ್ರಿಟನ್‌ ವಿರುದ್ಧ ಸೆಮೀಸ್‌ನಲ್ಲಿ 3-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ ಮನ್‌ಪ್ರೀತ್‌ ಸಿಂಗ್‌ ಪಡೆ ಸಮೀಸ್‌ನಲ್ಲೂ ಗೋಲಿನ ಮಳೆ ಸುರಿಸುವ ವಿಶ್ವಾಸದಲ್ಲಿದೆ. ಆದರೆ ಬೆಲ್ಜಿಯಂ ವಿರುದ್ಧ ಗೆಲ್ಲುವುದು ಹೇಳಿದಷ್ಟು ಸುಲಭವಲ್ಲ. ಕಳೆದ ಕೆಲ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ತನ್ನ ಆಟವನ್ನು ಸುಧಾರಣೆ ಮಾಡಿಕೊಂಡಿರುವ ಬೆಲ್ಜಿಯಂ ವಿಶ್ವ ರಾರ‍ಯಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ ವಿಶ್ವ ರಾರ‍ಯಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿದೆ.

ಟೋಕಿಯೋ ಒಲಿಂಪಿಕ್ಸ್‌: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಹಾಕಿ ತಂಡ

ಬೆಲ್ಜಿಯಂ ವಿರುದ್ಧ 2019ರಿಂದ ಇತ್ತೀಚಿನ ಕೆಲ ತಿಂಗಳುಗಳ ವರೆಗೂ ಭಾರತ ಉತ್ತಮ ದಾಖಲೆ ಹೊಂದಿದೆ. 2019ರಲ್ಲಿ ಯುರೋಪ್‌ ಪ್ರವಾಸದ ವೇಳೆ ಬೆಲ್ಜಿಯಂ ವಿರುದ್ಧ ಆಡಿದ್ದ 3 ಪಂದ್ಯಗಳಲ್ಲೂ ಜಯಿಸಿತ್ತು. ಈ ವರ್ಷ ಮಾರ್ಚ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 3-2 ಗೋಲುಗಳಲ್ಲಿ ಗೆದ್ದಿತ್ತು. ಬೆಲ್ಜಿಯಂ ವಿರುದ್ಧ ಕಳೆದ 5 ಪಂದ್ಯಗಳಲ್ಲಿ ಭಾರತ 4ರಲ್ಲಿ ಗೆದ್ದಿದೆ.

ಅಂಕಿ-ಅಂಶಗಳು ಭಾರತದ ಪರವಿದ್ದರೂ, ಬೆಲ್ಜಿಯಂ ಅತ್ಯುತ್ತಮ ಲಯದಲ್ಲಿದ್ದು ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಪಂದ್ಯ: ಬೆಳಗ್ಗೆ 7ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌