* ಟೋಕಿಯೋ ಒಲಿಂಪಿಕ್ಸ್‌ ಪದಕಕ್ಕೆ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್‌ ಮತ್ತಷ್ಟು ಹತ್ತಿರ* ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಲೊವ್ಲಿನಾ ಬೊರ್ಗೊಹೈನ್‌* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಅಸ್ಸಾಂನ ಏಕೈಕ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್‌ 

ಟೋಕಿಯೋ(ಜು.28): ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಬಾಕ್ಸರ್‌ ಲೊವ್ಲಿನಾ ಬೊರ್ಗೊಹೈನ್‌ ಮಹಿಳೆಯರ 69 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಪದಕ ಖಚಿತಪಡಿಸಿಕೊಳ್ಳಲು ಅವರಿಗೆ ಇನ್ನೊಂದು ಗೆಲುವು ಬೇಕಿದೆ.

ಮಂಗಳವಾರ ನಡೆದಟೋಕಿಯೋ ಒಲಿಂಪಿಕ್ಸ್ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಯ ಹಿರಿಯ ಬಾಕ್ಸರ್‌ ನಾದಿನೆ ಅಪೆಟ್‌್ಜ ವಿರುದ್ಧ 3-2ರ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಒಲಿಂಪಿಕ್ಸ್‌ಗೆ ಭಾರತ 9 ಬಾಕ್ಸರ್‌ಗಳನ್ನು ಕಳುಹಿಸಿದ್ದು, ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿದ ಮೊದಲ ಬಾಕ್ಸರ್‌ ಎನ್ನುವ ಹಿರಿಮೆಗೆ 23 ವರ್ಷದ ಅಸ್ಸಾಂ ಮೂಲದ ಲೊವ್ಲಿನಾ ಪಾತ್ರರಾಗಿದ್ದಾರೆ.

Scroll to load tweet…

ಜುಲೈ 30ರಂದು ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಲೊವ್ಲಿನಾ, ಮಾಜಿ ವಿಶ್ವ ಚಾಂಪಿಯನ್‌, 4ನೇ ಶ್ರೇಯಾಂಕಿತೆ ಚೈನೀಸ್‌ ತೈಪೆಯ ನೀಯಿನ್‌ ಚಿನ್‌ ಚೆನ್‌ ವಿರುದ್ಧ ಸೆಣಸಲಿದ್ದಾರೆ. ಸೆಮಿಫೈನಲ್‌ ಪ್ರವೇಶಿಸಿದರೆ ಕನಿಷ್ಠ ಕಂಚಿನ ಪದಕ ಖಚಿತವಾಗಲಿದೆ.

ಒಲಿಂಪಿಕ್‌ ತಾರೆ ಮೀರಾಬಾಯಿ ಚಾನುಗೆ ಸಿಕ್ತು ಬಡ್ತಿ, 2 ಕೋಟಿ ರೂ ಬಹುಮಾನ

ಸದ್ಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ಭಾರತದ ಶೂಟರ್‌ಗಳಿಂದ ನಿರಾಸೆ ವ್ಯಕ್ತವಾಗಿದ್ದರೂ, ಬಾಕ್ಸಿಂಗ್ ಹಾಗೂ ಕುಸ್ತಿಯಲ್ಲಿ ಪದಕ ಗೆಲ್ಲುವ ಬರವಸೆಯನ್ನು ಇಟ್ಟುಕೊಂಡಿದೆ ಭಾರತ.