ಟೋಕಿಯೋ ಒಲಿಂಪಿಕ್ಸ್: ಆತನು ದಾಸ್ ಬರಿಗೈಲಿ ವಾಪಸ್
* ಒಲಿಂಪಿಕ್ಸ್ ಪದಕ ಗೆಲ್ಲುವ ಆತನು ದಾಸ್ ಕನಸು ಭಗ್ನ
* ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದ ಭಾರತದ ಆರ್ಚರಿಪಟು
* ಒಲಿಂಪಿಕ್ಸ್‌ನಲ್ಲಿ ಒಂದೂ ಪದಕ ಗೆಲ್ಲದ ಭಾರತದ ಆರ್ಚರಿ ವಿಭಾಗ
ಟೋಕಿಯೋ(ಆ.01): ಕೊನೆಯ ಆಶಾಕಿರಣವಾಗಿದ್ದ ಆರ್ಚರಿಪಟು ಆತನು ದಾಸ್ ಶನಿವಾರ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಪರಭಾವಗೊಳ್ಳುವ ಮೂಲಕ, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಬಿಲ್ಲುಗಾರಿಕೆ ವಿಭಾಗದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಇದರೊಂದಿಗೆ ಈ ಬಾರಿ ಖಚಿತ ಪದಕದ ಭರವಸೆ ಮೂಡಿಸಿದ್ದ ಆರ್ಚರಿಪಟುಗಳು ಬರೀಗೈನಲ್ಲಿ ಭಾರತಕ್ಕೆ ಮರಳಲಿದ್ದಾರೆ.
ಎಲಿಮಿನೇಷನ್ ಸುತ್ತಿನಲ್ಲಿ ಲಂಡನ್ ಒಲಿಂಪಿಕ್ಸ್ ಚಿನ್ನದ ಪ್ರಕ ವಿಜೇತ ಓ ಜಿನ್ ಹೈಕ್ ವಿರುದ್ಧ ಜಯ ಸಾಧಿಸಿದ ಅತನು ದಾಸ್, ಮತ್ತದೇ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಜಪಾನ್‌ನ ತಕಹರು ಪುರುಕಾವ ವಿರುದ್ಧ 6-4 ಅಂತರದಿಂದ ಸೋಲುಂಡರು. ವಿಶ್ವದ ಅಗ್ರ ಶ್ರೇಯಾಂಕಿತೆ ಆಗಿದ್ದರೂ ಅತನು ದಾಸ್ ಪತ್ನಿ ದೀಪಿಕಾ ಕುಮಾರಿಯೂ ಅಂತಿಮ 8ರ ಘಟದಲ್ಲೇ ನಿರ್ಗಮಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆಂಬ ಆಸೆ 3ನೇ ಬಾರಿಯೂ ಕೈಗೂಡಿರಲಿಲ್ಲ.
ಪೂಜಾ ರಾಣಿ ಕೈ ತಪ್ಪಿದ ಕಂಚು:
ಮಹಿಳೆಯರ 75 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಪೂಜಾ ರಾಣಿ, ಚೀನಾದ ಚಿಯಾನ್ ಲೀ ವಿರುದ್ಧ 0-5 ಅಂತರದಲ್ಲಿ ಪರಾಭವಗೊಂಡರು. ಇದರೊಂದಿಗೆ ಸೆಮೀಸ್‌ಗೇರಿ ಭಾರತಕ್ಕೆ ಮತ್ತೊಂದು ಪದಕ ಖಚಿತ ಪಡಿಸಲು ಪೂಜಾಗೆ ಸಾಧ್ಯವಾಗಲಿಲ್ಲ.