* ಭಾರತದ ಡಿಸ್ಕಸ್‌ ಥ್ರೋ ಪಟು ಕಮಲ್‌ಪ್ರೀತ್‌ ಕೌರ್ ಮೇಲೆ ಎಲ್ಲರ ಚಿತ್ತ* ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿರುವ ಕೌರ್* ಒಲಿಂಪಿಕ್ಸ್‌ನಲ್ಲಿ ಇದುವರೆಗೂ ಭಾರತದ ಅಥ್ಲೀಟ್‌ಗಳು ಪದಕ ಗೆದ್ದಿಲ್ಲ.

ಟೋಕಿಯೋ(ಆ.02): ಅರ್ಹತಾ ಸುತ್ತಿನಲ್ಲಿ ಅಚ್ಚರಿಯ ಪ್ರದರ್ಶನ ತೋರಿ ಫೈನಲ್‌ಗೆ ನೇರ ಪ್ರವೇಶ ಗಿಟ್ಟಿಸಿರುವ ಭಾರತದ ಡಿಸ್ಕಸ್‌ ಥ್ರೋ ಪಟು ಕಮಲ್‌ಪ್ರೀತ್‌ ಕೌರ್‌, ಸೋಮವಾರ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಸುತ್ತಿನಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಡಿಸ್ಕಸ್‌ ಥ್ರೋ ಪಟು ಕಮಲ್‌ಪ್ರೀತ್‌ ಕೌರ್‌ ಫೈನಲ್‌ ಪಂದ್ಯವು ಇಂದು ಸಂಜೆ 4.30ಕ್ಕೆ ಆರಂಭವಾಗಲಿದ್ದು, ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಒಟ್ಟು 31 ಮಂದಿ ಪಾಲ್ಗೊಂಡಿದ್ದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಎರಡನೇಯವರಾಗಿ ಕಮಲ್‌ಪ್ರೀತ್‌ ಫೈನಲ್‌ಗೆ ನೇರ ಅರ್ಹತೆಗಿಟ್ಟಿಸಿಕೊಂಡಿದ್ದರು. ಅಥ್ಲೀಟಿಕ್ಸ್‌ನಲ್ಲಿ ವಿಭಾಗದಲ್ಲಿ ಭಾರತ ಇದುವರೆಗೂ ಒಲಿಂಪಿಕ್ಸ್‌ ಪದಕ ಜಯಿಸಿಲ್ಲ. ಹೀಗಾಗಿ ಕಮಲ್‌ಪ್ರೀತ್ ಇಂದು ಪದಕ ಜಯಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಟೋಕಿಯೋ 2020: ಫೈನಲ್‌ ಪ್ರವೇಶಿಸಿ ಒಲಿಂಪಿಕ್ಸ್ ಪದಕದ ಆಸೆ ಮೂಡಿಸಿದ ಕಮಲ್‌ಪ್ರೀತ್ ಕೌರ್

Scroll to load tweet…

ಅರ್ಹತಾ ಸುತ್ತಿನಲ್ಲಿ 64 ಮೀ. ದೂರಕ್ಕೆ ಡಿಸ್ಕಸ್‌ ಎಸೆಯುವ ಮೂಲಕ 2ನೇ ಸ್ಥಾನ ಪಡೆದ ಕೌರ್‌, ನೇರವಾಗಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಪದಕಕ್ಕಾಗಿ 12 ಅಥ್ಲೀಟ್‌ಗಳ ನಡುವೆ ಸ್ಪರ್ಧೆ ನಡೆಯಲಿದ್ದು, ರಿಯೋ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತೆ ಕ್ರೊವೇಷಿಯಾದ ಸಾಂಡ್ರಾ ಪೆರ್ಕೊವಿಕ್‌(63.75 ಮೀ.) ಹಾಗೂ ವಿಶ್ವ ಚಾಂಪಿಯನ್‌ ಕ್ಯೂಬಾದ ಯೈಮ್‌ ಪೆರೆಜ್‌(63.18 ಮೀ.) ಸಾಧನೆಯನ್ನು ಅರ್ಹತಾ ಸುತ್ತಿನಲ್ಲಿ ಕಮಲ್‌ಪ್ರೀತ್‌ ಮೀರಿದ್ದಾರೆ. ಈ ಹಿನ್ನೆಲೆಯಲ್ಲಿ ಕಮಲ್‌ಪ್ರೀತ್‌ ಮೇಲೆ ನಿರೀಕ್ಷೆ ಹೆಚ್ಚಾಗಿದೆ.