ಟೋಕಿಯೋ ಒಲಿಂಪಿಕ್ಸ್; ಭಾರತೀಯ ಕ್ರೀಡಾಪಟುಗಳ ಜುಲೈ 27 ವೇಳಾಪಟ್ಟಿ!
- ಮೀರಾಬಾಯಿ ಬಳಿಕ ಮತ್ತೊಂದು ಪದಕಕ್ಕೆ ಹೊಂಚು ಹಾಕಿದೆ ಭಾರತ
- ಪದಕ ನಿರೀಕ್ಷೆಯ ಶೂಟಿಂಗ್, ಬಾಕ್ಸಿಂಗ್ ಪಟುಗಳು ನಾಳೆ ಕಣಕ್ಕೆ
- ಜುಲೈ 27ರ ಟೋಕಿಯೋ ಒಲಿಂಪಿಕ್ಸ್ ಭಾರತೀಯ ಕ್ರೀಡಾಪಟುಗಳು ವೇಳಾಪಟ್ಟಿ
ಟೋಕಿಯೋ(ಜು.26): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದ ಬಳಿಕ ಇದೀಗ ಭಾರತ ಮತ್ತೊಂದು ಪದಕಕ್ಕಾಗಿ ಕಾಯುತ್ತಿದ್ದಾರೆ. ನಾಳೆ(ಜು.27) ರಂದು ಭಾರತದ ಪದಕ ಗೆಲ್ಲೋ ನಿರೀಕ್ಷಿತ ಕ್ರೀಡಾಪಟುಗಳು ಕಣಕ್ಕಿಳಿಯುತ್ತಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಶೂಟಿಂಗ್‌ನಲ್ಲಿ ಹೆಚ್ಚಿನ ಪದಕ ಗೆದ್ದುಕೊಂಡಿದೆ. ನಾಳೆ ಶೂಟಿಂಗ್‌ನಲ್ಲಿ ಭಾರತದ ಪ್ರಮುಖ ಶೂಟರ್‌ಗಳು ಅಖಾಡಕ್ಕಿಳಿಯುತ್ತಿದ್ದಾರೆ.
ಟೋಕಿಯೋ 2020: ಮೀರಾಬಾಯಿ ಚಾನು ಗೆದ್ದ ಬೆಳ್ಳಿ ಪದಕ ಬಂಗಾರವಾಗುತ್ತಾ..?
ಶೂಟಿಂಗ್, ಬಾಕ್ಸಿಂಗ್, ಹಾಕಿ, ಸೈಲಿಂಗ್ ಸೇರಿದಂತೆ ಪ್ರಮುಖ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಭಾರತೀಯರ ಪದಕ ನಿರೀಕ್ಷೆಯೂ ಹೆಚ್ಚಾಗಿದೆ. ನಾಳೆ ಭಾರತೀಯ ಕ್ರೀಡಾಪಟುಗಳ ವೇಳಾಪಟ್ಟಿ ಇಲ್ಲಿದೆ.
ಟೋಕಿಯೋ 2020 : ರೋಯಿಂಗ್‌ನಲ್ಲಿ ಸೆಮೀಸ್ ಪ್ರವೇಶಿಸಿದ ಭಾರತ
ಶೂಟಿಂಗ್: ಮನುಬಾಕರ್, ಸೌರಬ್ ಚೌದರಿ, ಯಶಸ್ವಿನಿ ಸಿಂಗ್, ಅಭಿಷೇಕ್ ವರ್ಮಾ
ಹಾಕಿ: ಪುರುಷರ ಪಂದ್ಯ ಭಾರತ ಹಾಗೂ ಸ್ಪೇನ್
ಬ್ಯಾಡ್ಮಿಂಟನ್: ಸಾತ್ವಿಕ್ ಸಾಯಿರಾಜ್, ರಂಕಿರೆಡ್ಡಿ, ಚಿರಾಗ್ ಶೆಟ್ಟಿ
ಟೇಬಲ್ ಟೆನಿಸ್: ಶರತ್ ಕಮಲ್
ಸೈಲಿಂಗ್: ನೇತ್ರಾ ಕುಮಾರನ್( ಮಹಿಳಾ ವಿಭಾಗ)
ಸೈಲಿಂಗ್: ವಿಷ್ಣು ಶರಣವಣ(ಪುರುಷರ ವಿಭಾಗ)
ಶೂಟಿಂಗ್: 10 ಮೀಟರ್ ಏರ್ ರೈಫಲ್
ಬಾಕ್ಸಿಂಗ್: ಲೋವ್ಲಿನಾ ಬೊರ್ಗೊಹೈನ್(ಮಹಿಳಾ ವಿಭಾಗ)
ಸೈಲಿಂಗ್: ಗಣಪತಿ ಕೆಲಪಂಡಾ, ವರುಣ ತಕ್ಕರ್