* ಟೋಕಿಯೋ ಒಲಿಂಪಿಕ್ಸ್‌ ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಮಾತು* ಅಥ್ಲೀಟ್‌ಗಳ ಜತೆ ಮಾತುಕತೆ ನಡೆಸಿ ಸ್ಪೂರ್ತಿ ತುಂಬಿದ ಮೋದಿ* ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾಗಿ

ನವದೆಹಲಿ(ಜು.13): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಅಥ್ಲೀಟ್‌ಗಳ ಜತೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ವಿಡಿಯೋ ಮೂಲಕ ಮಾತುಕತೆ ಆರಂಭಿಸಿದ್ದಾರೆ. ಮೊದಲಿಗೆ ಆರ್ಚರಿ ಪಟು ದೀಪಿಕಾ ಕುಮಾರಿ ಜತೆ ಮಾತು ಆರಂಭಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ದೀಪಿಕಾ ಕುಮಾರಿಯ ಬಾಲ್ಯದ ಜೀವನ ಸಂಘರ್ಷದ ಕುರಿತಂತೆ ಮಾತುಕತೆ ನಡೆಸಿದರು. ಉತ್ತಮ ಪ್ರದರ್ಶನ ನೀಡಿ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿ ಇಡೀ ದೇಶವೂ ಅದನ್ನೇ ಅಪೇಕ್ಷಿಸುತ್ತಿದೆ ಎಂದು ಸ್ಪೂರ್ತಿಯ ಮಾತುಗಳನ್ನು ಆಡಿದ್ದಾರೆ.

Scroll to load tweet…

ಇದಾದ ಬಳಿಕ ಮೋದಿ ಪ್ರವೀಣ್ ಜಾಧವ್‌ ಜತೆ ಹಾಗೂ ಮತ್ತವರ ಕುಟುಂಬದ ಜತೆ ಮಾತು ಕತೆ ನಡೆಸಿದರು. ಆರ್ಚರಿ ಪಟು ಪ್ರವೀಣ್ ಅವರಿಂದ ಸಾಕಷ್ಟು ನಿರೀಕ್ಷೆಯಿಂದ ಉತ್ತಮ ಪ್ರದರ್ಶನ ತೋರಿ ಎಂದು ಮೋದಿ ಶುಭ ಹಾರೈಸಿದ್ದಾರೆ. ಇದಾದ ಬಳಿಕ ಜಾವಲಿನ್ ಪಟು ನೀರಜ್‌ ಚೋಪ್ರಾ ಹಾಗೂ ಅಥ್ಲೀಟ್‌ ದ್ಯುತಿ ಚಾಂದ್ ಜತೆ ಮಾತುಕತೆ ನಡೆಸಿ ಶುಭ ಹಾರೈಸಿದ್ದಾರೆ.

Scroll to load tweet…

ಈಗಾಗಲೇ 18 ವಿವಿಧ ಕ್ರೀಡೆಗಳಿಂದ ದೇಶದ 126 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಹಿಂದೆಂದಿಗಿಂತಲೂ ಈ ಬಾರಿ ಭಾರತದಿಂದ ಅತಿಹೆಚ್ಚಿನ ಸಂಖ್ಯೆಯ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 117 ಭಾರತೀಯ ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಆದರೆ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಪದಕ ಗೆದ್ದಿರುವುದೇ ಇಲ್ಲಿಯವರೆಗೂ ಭಾರತದಿಂದ ಮೂಡಿ ಬಂದ ಶ್ರೇಷ್ಠ ಪ್ರದರ್ಶನವೆನಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಹೆಚ್ಚಿನ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ