ಕಂಚು ಗೆದ್ದ ಪಿವಿ ಸಿಂಧೂಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಅಭಿನಂದನೆ!
- ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 2ನೇ ಪದಕ
- ಕಂಚಿನ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಸಿಂಧು
- ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿದಂತೆ ಗಣ್ಯರ ಅಭಿನಂದನೆ
ಟೋಕಿಯೋ(ಆ.01): ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿತ್ತು. ಬಳಿಕ ಪದಕ ಗೆಲ್ಲುವ ಹಲವು ಅವಕಾಶಗಳು ಕೈತಪ್ಪಿ ನಿರಾಸೆ ಅನುಭವಿಸಿತ್ತು. ಇದೀಗ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಕಂಚಿನ ಪದಕ ಗೆಲ್ಲೋ ಮೂಲಕ ಸಾಧನೆ ಮಾಡಿದ್ದಾರೆ. ಸಿಂಧೂ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ 2020: ಕಂಚಿನ ಪದಕ ಗೆದ್ದು ಬೀಗಿದ ಪಿ.ವಿ. ಸಿಂಧು
ಪಿವಿ ಸಿಂಧೂ ಅದ್ಭುತ ಪ್ರದರ್ಶನದಿಂದ ನಾವೆಲ್ಲ ಉತ್ಸುಕರಾಗಿದ್ದೇವೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆಯನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಸಿಂಧೂ ಭಾರತದ ಹೆಮ್ಮೆಯ ಕ್ರೀಡಾಪಟು, ಜೊತೆಗೆ ಅತ್ಯುತ್ತಮ ಒಲಿಂಪಿಯನ್ ಪಟು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಕಂಚಿನ ಪದಕ ಮೂಲಕ ಪಿವಿ ಸಿಂಧೂ ಮತ್ತೊಂದು ಸಾಧನೆ ಮಾಡಿದ್ದಾರೆ. 2 ಒಲಿಂಪಿಕ್ಸ್ ಕೂಟದಲ್ಲಿ ಸತತ 2 ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿಂಧೂ ಈ ಸಾಧನೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೊಂಡಾಡಿದ್ದಾರೆ.
ಪಿವಿಂ ಸಿಂಧು ಎರಡು ಒಲಿಂಪಿಕ್ಸ್ ಕೂಟದಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ. ಸಿಂಧೂ ಸ್ಥಿರತೆ, ಕಠಿಣ ಹೋರಾಟ, ಶ್ರದ್ಧೆಯಿಂದ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ ಭಾರತಕ್ಕೆ ಕೀರ್ತಿ ತಂದ ಪಿವಿ ಸಿಂಧೂಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಪಿವಿ ಸಿಂಧೂ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿದರು. ಹೀಗಾಗಿ ಇಂದು ಕಂಚಿನ ಪದಕ್ಕಾಗಿ ನಡೆದ ಹೋರಾಟದಲ್ಲಿ ಸಿಂಧು , ಕಂಚಿನ ಪದಕ ಗೆಲ್ಲೋ ಮೂಲಕ ಭಾರತಕ್ಕೆ 2ನೇ ಪದಕ ಗೆದ್ದುಕೊಟ್ಟಿದ್ದಾರೆ.
Tokyo olympics;ಪ್ರಧಾನಿ ಮೋದಿ ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಮೀರಾಬಾಯಿ ಧನ್ಯವಾದ!
ಚೀನಾದ ಹಿ ಬಿಂಗ್ ಜಿಯಾವೋ ಎದುರು 21-13, 21-15 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಪಂದ್ಯದ ಆರಂಭದಿಂದ ಅಂತ್ಯದವರೆಗೆ ಕಠಿಣ ಹೋರಾಟ ನೀಡಿದ್ದ ಸಿಂಧು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧೂ ಬೆಳ್ಳಿ ಪದಕ ಗೆದ್ದಿದ್ದರು.