Asianet Suvarna News Asianet Suvarna News

ಟೋಕಿಯೋ ಒಲಿಂಪಿಕ್ಸ್ 2020: ಕಂಚಿನ ಪದಕ ಗೆದ್ದು ಬೀಗಿದ ಪಿ.ವಿ. ಸಿಂಧು

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ ಪಿ.ವಿ. ಸಿಂಧು

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕ ಜಯಿಸಿದ ಭಾರತ

* ಚೀನಾದ ಹೀ ಬಿಂಗ್ ಜಿಯಾವೋ ಎದುರು ಸಿಂಧುಗೆ ನೇರ ಗೇಮ್‌ಗಳಲ್ಲಿ ಗೆಲುವು

 

Indian Shuttler PV Sindhu Wins Bronze India Bags 2nd Medal in Tokyo Olympics kvn
Author
Tokyo, First Published Aug 1, 2021, 6:05 PM IST

ಟೋಕಿಯೋ(ಆ.01): ಒಲಿಂಪಿಕ್ಸ್‌ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಸಿಂಧು, ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದರು. ಆದರೆ ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಚೀನಾದ  ಹೀ ಬಿಂಗ್ ಜಿಯಾವೋ ಎದುರು 21-13, 21-15 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಕಂಚಿಕ ಪದಕಕ್ಕೆ ಕೊರಳೊಡಿದ್ದಾರೆ. ಇದರೊಂದಿಗೆ ಸಿಂಧು ವೈಯುಕ್ತಿಕವಾಗಿ ಎರಡನೇ ಒಲಿಂಪಿಕ್ಸ್ ಪದಕ ಜಯಿಸಿದರೆ, ಭಾರತ ಕೂಡಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕ ಬಾಚಿಕೊಂಡಿದೆ.

ಮೊದಲ ಗೇಮ್‌ನಲ್ಲಿ ಸಿಂಧು ಸತತ 4 ಅಂಕಗಳನ್ನು ಕಲೆಹಾಕುವ ಮೂಲಕ ಉತ್ತಮ ಆರಂಭವನ್ನು ಪಡೆದರು. ಆದರೆ ಚೀನಾದ ಹೀ ಬಿಂಗ್ ಜಿಯಾವೋ ಕಮ್‌ಬ್ಯಾಕ್‌ ಮಾಡುವ ಮೂಲಕ 5-5ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಇಬ್ಬರು ಆಟಗಾರ್ತಿಯರು ಕ್ರಾಸ್‌ ಕೋರ್ಟ್ ಶಾಟ್‌ ಬಾರಿಸುವ ಮೂಲಕ ಗಮನ ಸೆಳೆದರು. ಸಿಂಧು 8-7ರ ಮುನ್ನಡೆಯ ಬಳಿಕ ಸತತ 6 ಅಂಕಗಳನ್ನು ಗಳಿಸುವ ಮೂಲಕ 14-8ರ ಮುನ್ನಡೆ ಗಳಿಸಿದರು. ಅಂತಿಮವಾಗಿ ಮೊದಲ ಗೇಮ್ ಅನ್ನು 21-13 ಅಂಕಗಳ ಅಂತರದಲ್ಲಿ ಸಿಂಧು ಕೈವಶ ಮಾಡಿಕೊಂಡರು.

ಇನ್ನು ಎರಡನೇ ಗೇಮ್‌ನಲ್ಲೂ ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಆಕ್ರಮಣಕಾರಿ ಸ್ಮಾಷ್‌ಗಳ ಮೂಲಕ ಆರಂಭದಲ್ಲೇ ಮುನ್ನಡೆ ಸಾಧಿಸಿದರು. ಸಿಂಧು 8-6ರ ಮುನ್ನಡೆ ಸಾಧಿಸಿದರು. ಆರಂಭದಿಂದಲೇ ಇಬ್ಬರು ಆಟಗಾರ್ತಿಯರ ನಡುವೆ ಸಮಬಲದ ಹೋರಾಟ ಕಂಡು ಬಂದಿತು. ಪರಿಣಾಮ 11-11 ಅಂಕಗಳ ಸಮಬಲದ ಹೋರಾಟ ಮೂಡಿ ಬಂದಿತು. ಆ ಬಳಿಕ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಿಂಧು ನಿರಂತರ ಅಂಕ ಗಳಿಸುತ್ತಲೇ ಸಾಗಿದರು ಸಿಂಧು ಕ್ರಾಸ್‌ ಕೋರ್ಟ್‌ ಸ್ಮಾಷ್‌ಗಳಿಗೆ ಚೀನಾದ ಹೀ ಬಿಂಗ್ ಜಿಯಾವೋ ಬಳಿ ಉತ್ತರವೇ ಇರಲಿಲ್ಲ. ಅಂತಿಮವಾಗಿ 21-15 ಅಂಕಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದರು

Follow Us:
Download App:
  • android
  • ios