Asianet Suvarna News Asianet Suvarna News

ಸೋಲಿನಿಂದ ನಿರಾಸೆಗೊಂಡಿದ್ದ ಮಹಿಳಾ ಹಾಕಿ ತಂಡಕ್ಕೆ ಸ್ಫೂರ್ತಿ ತುಂಬಿದ ಮೋದಿ!

  • ಮಹಿಳಾ ಹಾಕಿ ತಂಡ ನಾಯಕಿ, ಕೋಚ್ ಜೊತೆ ಮಾತನಾಡಿದ ಮೋದಿ 
  • ಸೆಮಿಫೈನಲ್ ಪಂದ್ಯದಲ್ಲಿ ಮಹಿಳಾ ಹಾಕಿ ತಂಡಕ್ಕೆ ಸೋಲು
  • ನಿರಾಸೆಗೊಂಡಿದ್ದ ತಂಡಕ್ಕೆ ಆತ್ಮಸ್ಥೈರ್ಯ ತುಂಬಿದ ಪ್ರಧಾನಿ
PM Modi praise womens hockey teams performance in tokyo Olympics after semi final lose ckm
Author
Bengaluru, First Published Aug 4, 2021, 6:52 PM IST

ನವದೆಹಲಿ(ಆ.04): ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಹಾಕಿ ತಂಡದ ಫೈನಲ್ ಕಸನು ಭಗ್ನಗೊಂಡಿದೆ. ದಶಕಗಳ ಬಳಿಕ ಭಾರತದ ಹಾಕಿ ತಂಡ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸೋ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಆದರೆ  ಅರ್ಜಂಟೈನಾ ವಿರುದ್ಧ ಮುಗ್ಗರಿಸಿದ ಹಾಕಿ ತಂಡ ತೀವ್ರ ನಿರಾಸೆಗೊಂಡಿದೆ.  ಸೋಲಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಹಾಕಿ ತಂಡದ ನಾಯಕಿ ಹಾಗೂ ಕೋಚ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಇಷ್ಟೇ ಅಲ್ಲ ಮಹಿಳಾ ಹಾಕಿ ತಂಡದಲ್ಲಿ ಸ್ಪೂರ್ತಿ ತುಂಬಿದ್ದಾರೆ.

ಟೋಕಿಯೋ 2020: ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ರೋಚಕ ಸೋಲು

ಸೋಲಿನಿಂದ ಹತಾಶೆಗೊಂಡಿದ್ದ ಮಹಿಳಾ ಹಾಕಿ ತಂಡದ ಜೊತೆ ಮೋದಿ ಮಾತನಾಡಿದ್ದಾರೆ. ನಾಯಕಿ ರಾಣಿ ರಾಂಪಾಲ್ ಹಾಗೂ ಕೋಚ್ ಸೋರ್ಡ್ ಮರಿನೆ ಜೊತೆ ಪ್ರಧಾನಿ ಮಾತನಾಡಿದ್ದಾರೆ. ಮಹಿಳಾ ಹಾಕಿ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಸೋಲು -ಗೆಲುವು ಕ್ರೀಡೆಯ ಭಾಗ. ಫಲಿತಾಂಶದಿಂದ ವಿಚಲಿರಾಗಬೇಕಿಲ್ಲ. ವಿಶೇಷವಾಗಿ ಮಹಿಳಾ ಹಾಕಿ ತಂಡ ಪ್ರತಿಭಾನ್ವಿತ ಕ್ರೀಡಾಪಟುಗಳಿಂದ ಕೂಡಿದೆ. ಕಠಿಣ ಪರಿಶ್ರಮ, ಸತತ ಅಭ್ಯಾಸ ಮಾಡುವ ಹಾಕಿ  ತಂಡ ಯಾವುದೇ ಅಡೆತಡೆಗೆ ಕಿವಿಗೊಡಗೆ ಮುನ್ನುಗ್ಗಬೇಕು ಎಂದು ಮೋದಿ ಹೇಳಿದ್ದಾರೆ.

ಮೋದಿ ಮಾತನಿಂದ ಮಹಿಳಾ ಹಾಕಿ ತಂಡ ಚೇತರಿಸಿಕೊಂಡಿದೆ. ಸೋಲಿನ ನೋವಿನಿಂದ ಹೊರಬಂದಿದೆ.  ಇಷ್ಟೇ ಅಲ್ಲ ಆಗಸ್ಟ್ 6 ರಂದು ಕಂಚಿನ ಪದಕಕ್ಕಾಗಿ ನಡೆಯಲಿರುವ ಹೋರಾಟಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಕಂಚಿನ ಪದಕ್ಕಾಗಿ ಭಾರತ, ಗ್ರೇಟ್ ಬ್ರಿಟನ್ ಜೊತೆ ಕಾದಾಟ ನಡೆಸಲಿದೆ. 

ಭಾರತ ಮಹಿಳಾ ಹಾಕಿ ತಂಡದ ಸೋಲಿನ ಬೆನ್ನಲ್ಲೇ ಪ್ರಧಾನಿ ಮೋದಿ ಟ್ವೀಟ್ ಮೂಲಕ ಧೈರ್ಯ ತುಂಬಿದ್ದರು. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೆನಪಿಸಿಕೊಳ್ಳುವ ವಿಚಾರ ಅಂದರೆ ಅದು ಭಾರತದ ಹಾಕಿ ತಂಡದ ಅದ್ಭುತ ಪ್ರದರ್ಶನ. ಮಹಿಳಾ ಹಾಕಿ ಉತ್ತಮ ಹಾಗೂ ಧೈರ್ಯದಿಂದ ಪ್ರದರ್ಶನ ನೀಡಿದೆ. ಉತ್ತಮ ಕೌಶಲ್ಯ ಪ್ರದರ್ಶಿಸಿದೆ. ತಂಡದ ಬಗ್ಗೆ ಹೆಮ್ಮೆ ಇದೆ. ಮುಂದಿನ ಟೂರ್ನಿಗಳಿಗೆ ಶುಭವಾಗಲಿ ಎಂದು ಮೋದಿ ಟ್ವೀಟ್ ಮಾಡಿದ್ದರು.
 

Follow Us:
Download App:
  • android
  • ios